ಮಂಗಳವಾರ, ಜುಲೈ 21, 2009

ಹಸಿರೇ ಉಸಿರಾಗಲಿ
ಮಳೆಗಾಲದ ಸಮಯ ಭೂಮಿತಾಯಿ ಹಸಿರಿನಿಂದ ಕಂಗೊಳಿಸುತ್ತಿದ್ದಾಳೆ.ಆಧುನಿಕತೆಯ ಭರಾಟೆಯಲ್ಲಿ ವೈವಿಧ್ಯಮಯ ಗಿಡಮರಗಳು ಒಂದೊಂದೇ ಕಾರಣಕ್ಕೆ ಮಾಯವಾಗುತ್ತಿದೆ.ಇಲ್ಲಿಯ ತನಕ ನಾವು ನೆಡೆದುಬಂದ ಹಾದಿಯಲ್ಲಿ ಅನೇಕಾನೇಕ ವನ್ಯಜೀವಿಗಳು ನಲುಗಿವೆ. ಒಂದು ಕಾಲದಲ್ಲಿ ನೆಟ್ಟಏಕ ಜಾತಿಯ ನಡತೋಪುಗಳು ಇಂದು ಅಂತರ್ಜಲ ಹೀರುತ್ತ ನಿಂತಿವೆ. ಸಾಗುವಾನಿ, ಅಕೇಸಿಯಾ, ನೀಲಗಿರಿತೊಪುಗಳ ಕೆಳಗೆ ಅನೇಕ ಔಷಧಗಿಡಗಳು ಮಾಯವಗಿದೆ. ಪರಿಸರ ನಾಶದಿಂದ ನಾವುಗಳು ಕೂಡ ಹೊರತಾಗಿಲ್ಲ. ಮಳೆಯಲ್ಲಿ ಏರುಪೇರು, ಹೊಸ ಹೊಸ ಕಾಯಿಲೆಗಳು ಕಂಡುಬರುತ್ತಿವೆ. ಕೃಷಿ ಜಗತ್ತು ಕೂಡಾ ಸಮಸ್ಯೆಯಿಂದ ಹೊರತಾಗಿಲ್ಲ.
ಪ್ರಸ್ತುತ ನಾವು ಸ್ವಲ್ಪ ಯೋಚನೆ ಮಾಡಬೇಕಿದೆ. ಮುಂದಿನ ಪೀಳಿಗೆಗೆ ನಾವು ನಮ್ಮ ಪರಿಸರದಲ್ಲಿರುವ ವೈವಿಧ್ಯತೆ ಉಳಿಸಿ ಕೊಂಡು ಹೋಗುವಲ್ಲಿ ಮರೆಯುತ್ತಿದ್ದೇವೆ ಎಂದೆನಿಸುತ್ತದೆ. ಇರಲಿ ಸದ್ಯಕ್ಕೆ ನಾವು ನೀವೆಲ್ಲ ಒಂದೊಂದು ಗಿಡ ನೆಡುವ ಮೂಲಕ ಹಸಿರ ಸಿರಿಯನ್ನು ಹೆಚ್ಚಿಸೋಣ. ಇಂದಿನ ದಿನಗಳಲ್ಲಿ ವನಮಹೋತ್ಸವ ಎಲ್ಲ ಕಡೆ ಆಚರಿಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಆ ಗಿಡಗಳ ಬಗ್ಗೆ ಕಾಳಜಿ ಕಡಿಮೆ ಆಗಿ ಗಿಡ ಅಧೋಗತಿಯತ್ತ ತಲುಪುತ್ತದೆ. ನಾವು ಮೊದಲು ಜಾಗೃತರಾಗೋಣ, ಇಂದು ನಾವು ನೆಟ್ಟಗಿಡ ಮುಂದಿನ ಮಳೆಗಾಲಕ್ಕೆ ನಮ್ಮ ಎತ್ತರಕ್ಕೆ ಬೆಳೆಯಲಿ.