ಗುರುವಾರ, ಆಗಸ್ಟ್ 13, 2009


ದೇಶಪ್ರೇಮ

ಪ್ರತಿಬಾರಿ ಅಗಸ್ಟ ೧೫ ಬಂದೊಡನೆ ಒಂದು ಘಟನೆ ನೆನಪಾಗುತ್ತದೆ. ಬಹಳ ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಮರುದಿನ ನಾಗರಪಂಚಮಿ ಹಬ್ಬವಿತ್ತು.ಅದರ ಮಾರನೆದಿನ ಭಾನುವಾರ. ಸೊಮವಾರ ಒಂದು ರಜೆ ಹಾಕಿದರೆ ಒಟ್ಟೂ ೪ ದಿನದ ರಜೆ.
ಅಂದು ಶಾಲಾ ಮಕ್ಕಳು ಉತ್ಸಾಹದಿಂದ ಧ್ವಜಾರೋಹಣಕ್ಕೆ ತಯಾರಾಗುತ್ತಿದಂತೆ ಒಂದು ಟ್ರಕ್ ರಸ್ತೆಮೇಲೆ ನಿಂತಿತು. ಚಾಲಕ,ಸಹಾಯಕ ಇಬ್ಬರೂ ಗಾಡಿಯಿಂದ ಇಳಿದರು.ಜನಗಣಮನ ಹೇಳಿ ಮಕ್ಕಳೊಂದಿಗೆ ಬೆರತ ಟ್ರಕ್ ನವರು ಕರ್ತವ್ಯದಲ್ಲಿ ದೇಶಪ್ರೇಮ ಮೆರದರೆ, ಬ್ಯಾಗು, ಲಗೇಜು ಹೊತ್ತುಕೊಂಡ ಕರ್ತವ್ಯಕ್ಕೆ ರಜೆ ಹಾಕಿದ ಪ್ರವಾಸಿಗರ ಕಾರುಗಳು ಯಾವುದೇ ಪರಿವೆಇಲ್ಲದೇ ಸಾಗುತ್ತಲೇ ಇದ್ದವು. ಕೆಲ ನಿಮಿಷ ನಿಲ್ಲುವ ತಾಳ್ಮೆಕೂಡಾ ಅವರಲ್ಲಿ ಕಂಡುಬರಲಿಲ್ಲ. ವಾರದ ರಜೆ ಇಲ್ಲದೇ ಎಂದೋ ಒಮ್ಮೆ ಮನೆಯನ್ನು, ಬಂಧುಬಳಗ ಕಾಣುವ ಇವರ ದೇಶಪ್ರೇಮ ಅನುಕರಣಿಯ.