ಭಾನುವಾರ, ನವೆಂಬರ್ 8, 2009

ಹೂ ಮಾತಾಡಲಿಲ್ಲ...


ಮೊನ್ನೆ ದಾರಿಅಂಚಿನಲ್ಲಿ ಹೋಗುತ್ತಿದ್ದಾಗ ಸಣ್ಣಗೆ ಯಾರೋ ಕರೆದಂತಾಯಿತು.ತಿರುಗಿ ನೋಡಿದರೆ ಹೂವು!.ನನ್ನ ಖುಷಿಗೆ ಪಾರವೇ ಇಲ್ಲದಾಯಿತು. ಒಂದು ಹೂ ನನ್ನ ಕರೆದಾಗ ನಾ ಸುಮ್ಮನಿರಲು ಸಾಧ್ಯವೇ? ಅದೂ ಕೈಯಲ್ಲಿ ಕ್ಯಾಮರಾ ಇರುವಾಗ.ಹೂವನ್ನು ಪ್ರೀತಿಯಿಂದ ಮುಟ್ಟಿದೆ ಅದು ನಕ್ಕಿತು .ಆ ಕ್ಷಣಕ್ಕೆ ಬೀಸಿದ ಬಿಸಿಗಾಳಿಗೆ ಅಲ್ಲಾಡಿದರೂ ಸ್ವಲ್ಪಹೊತ್ತಿಗೆ ಸಾವರಿಸಿಕೊಂಡು ಮಾತನಾಡಲು ಶುರುಮಾಡಿತು.ಇಬ್ಬರೂ ತುಂಬಾ ಮಾತನಾಡಿದೆವು.ಕಷ್ಟಸುಖ ಹಂಚಿಕೊಡೆವು.ಇಬ್ಬರಿಗೂ ಕಾಡುತ್ತಿದ್ದ ಒಂಟಿತನ ಕೆಲ ಸಮಯ ದೂರವಾಯಿತು.

ನಿನಗೆ ಏನು ಇಷ್ಟಅಂತ ಕೇಳಿದೆ ಪುಟ್ಟ ಮಕ್ಕಳು ವಾಲಾಡುತ್ತಾ ನನ್ನಬಳಿ ಬಂದು ನನ್ನ ಮೊಗ್ಗು ಹಾಗೂ ಹೂಗಳನ್ನುಹರಿಯುವಾಗ ಪರಮಾನಂದ ವಾದರೆ ಆ ಸಮಯದಲ್ಲಿ ಹೂ ಅರಳಲು ನಾನೇ ಕಾರಣ, ಅದು ನನ್ನ ಗಿಡ ಎನ್ನುವ ಅವರ ತಾಯಿ ಮಗುವನ್ನು ಎಳೆದೊಯ್ಯುವಾಗ ತನಗೆ ದುಃಖ ಆಗುವದು ಎಂದಿತು.ಆ ಹೊತ್ತಿನಲ್ಲಿ ಫೋಟೊತೆಗೆಯಲು ಶುರುಮಾಡಿದೆ ಪಾಪ ಹೂ flashlight ಗೆ ಬೆಚ್ಚಿತು.ಪ್ರೀತಿಯಿಂದ ಮುಟ್ಟಿದೆ ಮತ್ತೆ ನಕ್ಕಳು!ನಾ ಹೇಳಿದೆ ನೀನು ಹಿಂದಿನಿಂದ ನೋಡಿದರೂ ಸುಂದರವಾಗಿದ್ದಿಯಾ ಎನ್ನುತ್ತಾ ಫೋಟೊತೆಗೆದೆ ಹೂ ನಾಚಿತು.


ಕಪ್ಪು ಬಣ್ಣದ ಗುಂಗಾಡು (ದುಂಬಿ) ಬಗ್ಗೆ ಕೇಳಿದೆ ಬಂದಾಗ ಭಯವೇ ಜಾಸ್ತಿ ಅದೋ ಅದರ ರೆಕ್ಕೆಬಡಿತದ ಸದ್ದು ಅಬ್ಬಾ ಎಂದಿತು.ಪಾತರಗಿತ್ತಿ ಬಂದಾಗ ಅದು ಕೊಡುವ ಕಚಗುಳಿ, ಆಗ ಆಗುವ ಸಂತೋಷ ಅದರ ಭಾಷೆಯಲ್ಲಿ ಹೇಳಿತು ಕೆಲವು ಮಾತ್ರ ಅರ್ಥವಾದವು.ಕೆಲ ಹೊತ್ತು ಹೂ ಜೊತೆಮಾತನಾಡುವ ಅಪರೂಪದ ಭಾಗ್ಯನನ್ನದಾಯಿತು.
ಸ್ನೇಹಿತರೇ ತುಂಬಬೇಜಾರಾಗುತ್ತಿದೆ. ಆ ಹೂವು ನಾಳೆ ಅಷ್ಟರಲ್ಲಿ ಬಾಡಿಹೋಗುವದರ ಜೊತೆಗೆ ಈ ಮಳೆಗಾಲದ ಬದುಕು ಮುಗಿಸುತ್ತದೆ. ಬೀಳ್ಕೊಡುವಾಗ ಹೂವಿಗೆ ಮುತ್ತಕೊಟ್ಟೆ.ಜೊತೆಗೆ ಹೇಳಿದೆ ಮುಂದಿನ ಮಳೆಗಾಲಕ್ಕೆ ಸಾವಿರ ಸಂಖ್ಯೆಯಲ್ಲಿಸಾವಿರದೇ ಹುಟ್ಟಿಬಾ. ನಾ ನಿನ್ನಗೌರವಿಸುತ್ತೆನೆ. ನಿನಗೆ ವಂದಿಸುತ್ತೇನೆ ಯಾಕೆ ಗೊತ್ತೆ? ನಿನ್ನನ್ನು ಎಲ್ಲೇ ಹಾಕಿದರೂ ನಿನ್ನ ಪರಿಮಳ, ಸೌಂದರ್ಯ ಕೆಡದು. ಹೂವೇ ನಿನ್ನ ಎತ್ತರ ಅಪರಿಮಿತ. ನೀ ಸಣ್ಣವನಲ್ಲ,ಸಣ್ಣವನಲ್ಲಎಂದೆ. ಹೂ ಮಾತಾಡಲಿಲ್ಲ...