ಶುಕ್ರವಾರ, ಜನವರಿ 22, 2010

ವ್ಹಾ ಲಾಲ್ ಬಾಗ್!

ತರಕಾರಿ ಕೆತ್ತನೆ
ನಿಜಕ್ಕೂ ಲಾಲ್ ಬಾಗ್ ಹಸಿರು ಮತ್ತು
ಹೂಗಳಿಂದ ಕಂಗೊಳಿಸುತ್ತಿದೆ.ಈ ಬಾರಿ ಹೂಗಳನ್ನು ತುಂಬಾ ಚನ್ನಾಗಿ ಅಲಂಕರಿಸಿದ್ದಾರೆ.ಕೆಲ ಚಿತ್ರಗಳನ್ನು ಇಲ್ಲಿ ನೋಡಬಹುದು.ಹೂ ಬಾಡುವಮುನ್ನ ಒಮ್ಮೆ ನೋಡಿಬನ್ನಿ.ಹೊರಡುವಾಗ ನಿಮ್ಮ ಜೊತೆಗೆ ಆಪ್ತರನ್ನು ಕರೆದೊಯ್ಯಿರಿ ಅಲ್ಲಿ ನೀವು ಹೂಗಳ ಜೊತೆ ನಿಮ್ಮವರ ಮುಖ ಅರಳಿರುವದನ್ನು ಕಾಣುವಿರಿ!.ಭಾಂಧವ್ಯ ಮತ್ತಷ್ಟು ಹಸನಾಗಲಿ (ಸಂಜೆ ವೇಳೆ ಕಂಡು ಬಂದ ಲಾಲ್ ಬಾಗ್ ಕೆರೆ.)

ಮಂಗಳವಾರ, ಜನವರಿ 12, 2010

ಸಂಕ್ರಾಂತಿ ಬರುತ್ತಿದೆಸಂಕ್ರಾಂತಿ ರೈತರ ಹಬ್ಬ. ವರ್ಷವಿಡೀಶ್ರಮಪಟ್ಟು ಬೆಳೆದ ಬೆಳೆಯು ಕೈಗೆ ಬರುವ ಪರ್ವಕಾಲ. ಈ ಬಾರಿ  ಮಳೆಯು ಉತ್ತರ ಕರ್ನಾಟಕದಲ್ಲಿ ನೆರೆ ತಂದು ಹಾವಳಿ ಎಬ್ಬಿಸಿದ ನಂತರ ಈಗ ಮತ್ತೆ ಹೊಯ್ಯುತ್ತಾ ಪುನಃ  ಪುನಃ  ಬರೆ ಹಾಕುತ್ತಲೇ ಇದೆ. ಪರಿಣಾಮವಾಗಿ ಉತ್ತರ ಕನ್ನಡದಲ್ಲಿ ಭತ್ತದಗದ್ದೆ ಮತ್ತು ಕೊಯ್ದು ಸಂಸ್ಕರಣೆ ಆಗುತ್ತಿದ್ದ ಭತ್ತ,ಹುಲ್ಲು,ಅಟ್ಟದಲ್ಲಿ ಒಣಹಾಕಿದ ಅಡಿಕೆ ಫಸಲು ಈಗಾಗಲೇ  ಹಾಳಾಗಿದೆ.ರೈತರ ಬದುಕು ಏರಿದ ಬೆಲೆ ಮತ್ತು ಕೃಷಿ ಕಾರ್ಮಿಕರ ಕೊರತೆಯ ನಡುವೆ ಕಂಗಾಲಾಗಿದೆ.ಬದಲಾದ ಈಗಿನ ಕೃಷಿಕಾರ್ಮಿಕ ಜನರ ಮನಸ್ಥಿತಿ ನೋಡಿದ ಹಳಬರು ಕೃಷಿ ಮುಂದುವರಿಸಿಕೊಂಡು ಹೋಗುವದು ಕಷ್ಟ ಎನ್ನುತ್ತಿದ್ದಾರೆ.ಕೃಷಿಕರ ಮಕ್ಕಳು ವ್ಯವಸಾಯ ಸಾಕಪ್ಪಾ .ಇದರ ಉಸಾಬರಿ ಬೇಡ ಎಂದೆನಿಸುವಷ್ಟರ ಮನ ಸ್ಥಿತಿಗೆ ತಲುಪುತ್ತಿದ್ದಾರೆ. ಇದು ನಿಜಕ್ಕೂ ದುರಂತ. ಈಗ  ಸಂಕ್ರಾಂತಿಯ ಸಂಭ್ರಮವನ್ನು ಮಳೆಯ ಕಸಿದುಕೊಂಡಿದೆ.ಭರವಸೆಯ ದಿನಗಳು ಬಂದೇಬರುತ್ತದೆ ಎಂಬ ನಿರೀಕ್ಷೆಯಲ್ಲಿ  ಎಂದಿನಂತೆ ರೈತ ತನ್ನಕಾರ್ಯದಲ್ಲಿ ಮಗ್ನನಾಗಿದ್ದಾನೆ.ಎಲ್ಲರಿಗೂ ಮುಂದೆ ಒಳ್ಳೆಯ ದಿನ ಬರಲಿ.ರೈತನ ಉಳುಮೆ ಆನಂದದಾಯಕವಾಗಲಿ.  ಬರುವ ಸಂಕ್ರಾಂತಿಯುಎಲ್ಲರಿಗೂ ಒಳಿತು ಉಂಟುಮಾಡಲಿ. ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.     *ಚಿತ್ರ ಅರುಣೋದಯ.   
       ನವಿಲುಗುಡ್ಡ (ಶಿವಮೊಗ್ಗ)