ಸೋಮವಾರ, ಮಾರ್ಚ್ 1, 2010

ಶಿರಸಿ ಜಾತ್ರೆ.

ಪ್ಪೆರಡೋ ಬಿಳಿಮೂರೋ ಯಾವುದೋ ಒಂದು ಶೃತಿಯಲ್ಲಿ ಕೊಳಲುಮಾರುವ ಹುಡುಗ "ಹೊಸ ಗಾನಾ ಬಜಾನ" ಎಂಬ ಇತ್ತೀಚಿಗಿನ ಸಿನಿಮಾ ಹಾಡು ಹೊಮ್ಮಿಸಿ ಕೊಳ್ಳುವವರಿಗೆ ಕಾಯುತ್ತಿದ್ದಾನೆ. ಸೇಲ್ ಎಂಬ ಬೋರ್ಡ್ ಹಾಕಿಕೊಂಡು ಬೊಬ್ಬಿಡುವ ವ್ಯಾಪಾರಿಗಳು. ಬಳೆ ಇನ್ನಿತರ ಸಾಮಗ್ರಿ ಕೊಳ್ಳಲು ಬಂದ ಹೆಂಗಳೆಯರ ದಂಡು. ಮಾರಿ ಚಪ್ಪರದ ಹತ್ತಿರ ಸಿಹಿತಿಂಡಿ ವ್ಯಾಪರಿಗಳಲ್ಲಿ ಕರಿದು ಹಾಗೇಯೇ ಮಾರಾಟ ವಾಗುತ್ತಿರುವ ಜಿಲೇಬಿ!. ಇದು ನಾನು ಶಿರಸಿ ಜಾತ್ರೆ ಯಲ್ಲಿ ಕಂಡ ಸನ್ನಿವೇಶಗಳು. ಜನರಲ್ಲಿ ದೇವರಮೇಲೆ ಎಷ್ಟು ಭಯ ಭಕ್ತಿ ಇದೆ ಎಂದುನೋಡುವದಾದರೆ ಇಲ್ಲಿಗೆಬರಬೇಕು.
ನಾನಾ ರೀತಿಯ ಸೇವೆ, ಹರಕೆಗಳನ್ನು ಸಲ್ಲಿಸಲು ಕರ್ನಾಟಕದ ಹೊರತಾಗಿ ದೇಶದ ಹಲವು ರಾಜ್ಯದ ಭಕ್ತಾದಿಗಳು ಮಾರಿಕಾಂಬೆಗೆ ನಡೆದುಕೊಳ್ಳುತ್ತಾರೆ. ಜಾತ್ರೆ ಎಂದರೆ ಕೇಳಬೇಕೆ? ಕಿಲೋಮೀಟರುಗಟ್ಟಲೆ ಅಂಗಡಿಸಾಲುಗಳು,ಮನೋರಂಜನಾ ಆಟಗಳು, ನಾಟಕ, ಸರ್ಕಸ್ ಯಕ್ಷಗಾನಗಳು ನೋಡಲು ಬಂದವರಿಗೆ ಖುಷಿ ಕೊಡುತ್ತಿವೆ. ನಾನು ಚಾಟಿನಲ್ಲಿ ಸಿಕ್ಕ ಸ್ನೇಹಿತರಲ್ಲಿ ಜಾತ್ರೆಯ ಪೂರ್ತಿ ಅನಾವರಣ ಮಾಡುವದಾಗಿ ಹೇಳಿಕೊಂಡಿದ್ದೆ. ಅನಿವಾರ್ಯಕಾರಣಗಳಿಂದ ಸಂಜೆಯ ಜನಜಂಗುಳಿ, ಹಾಗೂ ಕರೆಂಟ್ ಬೆಳಕಿನಲ್ಲಿ ರಾತ್ರಿಯ ಚಿತ್ರ ತೆಗೆಯುವ ಅವಕಾಶ ನನಗೆ ಮಿಸ್ ಆಗಿದೆ. ಜಾತ್ರೆಯಲ್ಲಿ ನನಗೆ ಸಿಕ್ಕ ಅರ್ಧಗಂಟೆಯಲ್ಲಿ ಇಷ್ಟನ್ನೇ ಹಂಚಿಕೊಳ್ಳುತಿದ್ದೇನೆ. ಒಟ್ಟಿನಲ್ಲಿ ಶಿರಸಿ ಪೇಟೆಯು ಮಾರಿಜಾತ್ರೆಯ ನೆಪದಲ್ಲಿ ಲಕ್ಷಾಂತರ ಜನರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದೆ.


ಸೇಲ್, ಸೇಲ್ ಸಸ್ತಾ! ಭಾರಿ ಮಾರಾಟಾ.

ನಾ ಬಾರ್ಸೊ ಪದ್ಯಾನಾ ಕೇಳೊರು ಯಾರು?


ಹೌದಪಾ,ಜಾತ್ರೆ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು .