ಭಾನುವಾರ, ಮೇ 16, 2010

ಯಕ್ಷಗಾನದ ಛಾಯಾಚಿತ್ರ

 (ಚೌಕಿಯಲ್ಲಿ ಗಣಪತಿ ಪೂಜೆಯ ವೇಳೆ) ಮೊದಲಿನಿಂದಲೂ ಯಕ್ಷಗಾನವೆಂದರೆ ಒಂತರಾ ಸೆಳೆತ.ದೂರದಲ್ಲಿ ಚಂಡೆ ಮದ್ದಳೆ ಸಪ್ಪಳ ಕೇಳಿದಾಗ ಪುಳಕ.ಹಾದಿ ಬದಿಯ ಗೋಡೆಗೆ ಅಂಟಿಸಿದ ಪೋಸ್ಟರುಗಳು ನನ್ನನ್ನು ಆಟಕ್ಕೆ ಸೆಳೆದು ಒಯ್ಯುತ್ತದೆ.


ಮೊನ್ನೆ ಆಗಿದ್ದೂ ಅದೇ. ಇರಲಿ , ಅಪರೂಪಕ್ಕೆ ಟೆಂಟ್ ಮೇಳದ ಆಟ ನೋಡುವ ಅವಕಾಶ ಸಿಕ್ಕಿತ್ತು. ಆ ಹೊತ್ತಿನಲ್ಲಿ ಕೆಲ ಚಿತ್ರ ತೆಗೆದಿದ್ದು ಈಗ ನಿಮ್ಮ ಮುಂದಿದೆ.