ಸೋಮವಾರ, ಜೂನ್ 21, 2010

ಮೃಗಶಿರಾ ಮಳೆ ನಡುವೆ.

  ಮೊದಲಿನಿಂದಲೂ ಕೃಷಿ ಬದುಕಿನಲ್ಲಿ ಮಳೆ ನಕ್ಷತ್ರಗಳು ಹಾಸು ಹೊಕ್ಕಾಗಿವೆ.ಉತ್ತಲು,ಬಿತ್ತಲು ಪಂಚಾಂಗ ಆಧರಸಿ ಹಲವರು ಕೆಲಸ ಆರಂಭಿಸುತ್ತಾರೆ.ಈ ಪದ್ಧತಿ ಈಗಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ.  ಹಲವು ವರ್ಷಗಳ ಬಳಿಕ ಮಲೆನಾಡನ್ನು ಮೃಗಶಿರಾ ನಕ್ಷತ್ರದ ಮಳೆ ಚನ್ನಾಗಿಯೇ ತೋಯಿಸಿದೆ.ವಾರಗಟ್ಟಲೇ ಬಿಡುವಿಲ್ಲದಂತೆ ಬಂದಿದ್ದು ಎಲ್ಲರಿಗೂ ಖುಶಿಯೇ.ಬಿದ್ದ ಮಳೆ ಭೂಮಿಗೆ ತಾಕುತ್ತಲೇ  ಜೀವ ರಾಶಿಗಳು ಹೇಳಿಕೊಳ್ಳಲಾಗದಷ್ಟು ಸಂಭ್ರಮಿಸಿದೆ. ಗಿಡಗಳಿಗೆಲ್ಲಾ ಹೊಸ ಚಿಗುರು, ಕೀಟ ಪ್ರಪಂಚದ ಕಲರವ. ಹೀಗೆ ಮಳೆಯ ಬಿಡುವಿನ ನಡುವೆ ಕ್ಯಾಮರವನ್ನು ಹಿಡಿದು ಹೊರಟಾಗ ನನ್ನ ಕಲ್ಪನೆಗೆ ಭೂಮಿಯು  ಹೀಗೆ ಕಂಡುಬಂತು.

       "ಮೋಡಗಳ  ಓಟದ ಸಮಯದಿ ಮಬ್ಬೆಳಕು ಭುವಿಗೆಲ್ಲ
        ಜೊತೆಗೆ ಮೆಲ್ಲಗೆ ಹಬ್ಬುತಿಹ ಹಸಿರ ಹೊದಿಕೆಯ ಹಾಸು
         ಕಂಡುಬರುತಿಹುದು ಭುವಿಯು  ಹದಿಹರೆಯದ ಕೂಸು"

                                          ಮಾಡಂಚಿಂದ ಮಳೆಯ ಪಯಣ.

                             ಸಂಜೆ ಬೆಳಕ ಹೊತ್ತಲ್ಲಿ : ಪೂರಾ ಕಲರೂ ಅಲ್ಲದ ಕಪ್ಪು ಬಿಳುಪೂ ಅಲ್ಲದ ಚಿತ್ರ.
                                      ಹಸಿರ ಬಟ್ಟಲೊಳು ಮಳೆಹನಿಗೆ ತುಸು ಕಾಲ ವಿಶ್ರಾಂತಿ. 
                                   ಬಿದಿರ ಬದುಕಿಗೆ ಮೋಡದ ಮುಸುಕಿಂದ ಸೂರ್ಯನ  ಮೃದು ಸ್ಪರ್ಷ. 
                                                 ಹಸಿರ ವೇದಿಕೆ ಮೇಲೆ ಹನಿಯ ನರ್ತನ.
                                            ಮಳೆ ಬರುದ್ರೊಳ್ಗೆ ಕೆಲ್ಸಾ ಮುಗೀಲಿ.