ಮಂಗಳವಾರ, ನವೆಂಬರ್ 9, 2010

ಜಲ್ ಜಲ ಧಾರೆಯ ಅವಾಂತರ


  ಕೃ
ಷಿಬದುಕಿನ ಸುಗ್ಗಿಯ  ಆರಂಭದ ಕಾಲವಿದು. ಗದ್ದೆ ಕೊಯ್ಲು,ಅಡಿಕೆಕೊಯ್ಲಿಗೆ ಇದು ಸಕಾಲ.ಆದರೆ  ಅಕ್ಟೋಬರ್ ೨೮ ರಂದು ದಕ್ಷಿಣ ಚೈನಾ ಸಮುದ್ರತೀರದಲ್ಲಿ ಜನಿಸಿದ ಜಲ್ ಹೆಸರಿನ ಚಂಡಮಾರುತವು ಭಾಗಶಃ ಕರ್ನಾಟಕವನ್ನು ತೋಸಿಯಿ ಜನಸಾಮಾನ್ಯರ ಬದುಕಿನ ಹಾದಿ ತಪ್ಪಿಸುತ್ತಿದೆ.
                                  ಚಂಡಮಾರುತ ಸಾಗಿಬಂದ ಹಾದಿ.


ತಕಾರಿ ಬೆಳೆ,ತೊಗರಿ ಬೆಳೆ,ಈರುಳ್ಳಿ,ನೆಲಗಡಲೆ ಹೀಗೆ ಹತ್ತು ಹಲವು ಬೆಳೆಗಳು ಇನ್ನೇನು ಕೈಗೆ ಬರುವ ಹಂತದಲ್ಲಿ  ಜಲ್ ಚಂಡಮಾರುತಕ್ಕೆ ಈಗಾಗಲೇ ಸಿಕ್ಕಿ  ಹಾಳಾಗಿದೆ.  ಭರ್ತಿಯಾದ ಅಣೇಕಟ್ಟುಗಳು ಈಗ ಮತ್ತೊಮ್ಮೆ ಹೆಚ್ಚುವರಿ ನೀರು ಬಿಡಲು ಸಜ್ಜಾಗುತ್ತಿವೆ.ಅಣೇಕಟ್ಟುಗಳು ತುಂಬಿದೊಡೆ ಕರೆಂಟಿಗೆ ಬರವಿಲ್ಲದಿದ್ದರೂ ಕೃಷಿ ಉತ್ಪನ್ನಗಳಿಗೆ ಬರದ ಛಾಯೆ ಕಾಡುತ್ತಿದೆ. ಉತ್ತರ ಕರ್ನಾಟಕ ಈಗಾಲೇ ಮಹಾಪೂರಕ್ಕೆ ನಲುಗಿ ಚೇತರಿಕೆಯ ಹಾದಿಯಲ್ಲಿರುವಾಗಲೇ ಜನರ ಹೊಸ ಬದುಕ ಕನಸಿಗೆ ಜಲ್ ಚಂಡಮಾರುತವು  ಬರೆ ಹಾಕತೊಡಗಿದೆ.
ಮಂದ ತೇವಾಂಶ ಭರಿತ ವಾತಾವರಣದಿಂದ ಈಗಾಗಲೇ ಕಟಾವಾದ ಆಹಾರ ಧಾನ್ಯಗಳು ಹಾಳಾಗುತ್ತಿದೆ.ಮಳೆಹನಿಯ ಅಬ್ಬರವಿಲ್ಲದಿದ್ದರೂ ಅಕಾಲದ ಮಳೆ ಎಲ್ಲರಿಗೂ ಅನಾನುಕೂಲವಾಗಿ ಪರಿಣಮಿಸಿದೆ.
                                      ತಯಾರಿ ಹಂತದ ಪಾಲಿಹೌಸ್ಈ ನಡುವೆ ಕೃಷಿ ಉತ್ಪನ್ನಗಳನ್ನು ಒಣಗಿಸಲು  ಕೆಲ ರೈತರು  ಡ್ರಾರ್ಯರ್, ಯು ವಿ ಪ್ಲಾಸ್ಟಿಕ್ ಬಳಸಿ ಮಾಡಿದ ಪಾಲಿಹೌಸ್ ಗಳಿಗೆ ಮೊರೆ ಹೋಗಿದ್ದಾರೆ.(ಇವು ತಾತ್ಕಾಲಿಕ ಹಾಗೂ ಸ್ವಲ್ಪ ಶ್ರಮ ದಾಯಕ. ಬಿಸಿಲಿನಲ್ಲಿ ಸಂಸ್ಕರಣೆ ಮಾಡಿದಷ್ಟು ಸುಲಭವಲ್ಲ.)
  ಚಂಡಮಾರುತ ಈಗಾಲೇ ತನ್ನ ಪ್ರಭಾವ ಬೀರುತ್ತಿದ್ದು ಮುಂದೆ ಯಾವ ಬದಲಾವಣೆ ಆಗಬಹುದೆಂದು ಕಾದು ನೋಡಬೇಕಿದೆ.ಒಣ ಹವೆ ಮುಂದುವರಿದಲ್ಲಿ ಮಾತ್ರ ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಎಲ್ಲರೂ ಅದಕ್ಕೇ  ಕಾಯುತ್ತಿದ್ದಾರೆ.