ಶನಿವಾರ, ಮಾರ್ಚ್ 24, 2012

ಶಿರಸಿ ಜಾತ್ರೆಯಲ್ಲೊಂದು ಸುತ್ತು

ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜರುಗುವ    ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯು ಬಹಳ ಹೆಸರುವಾಸಿಯಾಗಿದೆ.    ಜಾತ್ರೆಯ ಸಮಯದಲ್ಲಿ ಎಲ್ಲಿದ್ದರೂ   ನೆಂಟರಿಷ್ಟರು  ಪರವೂರಿನಲ್ಲಿ ಬೀಡುಬಿಟ್ಟ ಮೂಲನಿವಾಸಿಗಳು ಜಾತ್ರೆಯನ್ನು ಖಂಡಿತ ಮಿಸ್ ಮಾಡಿಕೊಳ್ಳುವದಿಲ್ಲ. ಜಾತ್ರೆ ಪೇಟೆಯಲ್ಲಿ ರಾತಿ ವೇಳೆಯಲ್ಲಿ ತಿರುಗಾಡುವದೇ ಒಂದು ಸೊಗಸು ಒಂಥರಾ ಉಮೇದಿ!.  ಜಾತ್ರೆ ಪೇಟೆಯಲ್ಲಿಒಂದು ಸಲ  ಸುತ್ತಾಡಿದವರು ಮತ್ತೆರಡು ದಿನ ಬಿಟ್ಟು ಪುನಃ ತಾಸುಗಟ್ಟಲೇ ಸ್ನೇಹಿತರು ಮನೆಯವರೊಡನೆ ಸುತ್ತಾಡುವದು ಸಾಮಾನ್ಯ. ಇದಕ್ಕೆ ನಾನೂ ಕೂಡಾ ಹೊರತಾಗಿಲ್ಲವಾಗಿತ್ತು. ಎರಡು ಮೂರುದಿನ ಜಾತ್ರೆಯಲ್ಲಿ ತಿರುಗಾಡಿ ,ಪೋಟೋಗ್ರಫಿ ಮಾಡುವ ಸಲುವಾಗಿ ಮತ್ತೊಮ್ಮೆ ಜಾತ್ರೆಗೆ ತೆರಳಿದೆ. ಆ ಹೊತ್ತಿಗಾಗಲೇ ಜಾತ್ರಾ ವಿಧಿವಿಧಾನಗಳು ಮುಗಿದು ಮಾರಿಕಾಂಬಾ ದೇವಿಯು ಮಾರಿ ಚಪ್ಪರದಿಂದ ನಿರ್ಗಮಿಸಿಯಾಗಿತ್ತು.