ಬುಧವಾರ, ಜನವರಿ 29, 2014

ಮಾವಿನ ಕಸ್ತ್ರದ ತಂಬುಳಿ

ಯಾ  ಋತುಮಾನದಲ್ಲಿ  ತಕ್ಕಂತೆ ನೈಸರ್ಗಿಕವಾಗಿ ಸಿಗುವಂತಹ  ಬಳ್ಳಿ, ಚಿಗುರು,ಎಲೆ ಹೂವು ,ಕಾಯಿ ,ಹಣ್ಣುಗಳನ್ನು ಬಳಸಿಕೊಂಡು ಅಡುಗೆಮಾಡುವ ವಿಧಾನ ಬಹಳ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ.ಈಗ ನಮ್ಮಲ್ಲಿ ಮಾವಿನ ಕಸ್ತ್ರ  (ಮಾವಿನ ಹೂ)  ಸಾಕಷ್ಟುಅರಳಿದೆ. ಮಾವಿನ ಕಸ್ತ್ರದಿಂದ ರುಚಿಯಾದ ತಂಬುಳಿ ತಯಾರಿಸುವ ವಿಧಾನ ಇಲ್ಲಿದೆ.


                              

ಮೊದಲು ಸ್ವಲ್ಪ ಎಳೆಯ ಮಾವಿನಹೂವನ್ನು  ಉಪ್ಪುನೀರಿನಲ್ಲಿ ತೊಳೆದುಕೊಳ್ಳಿ   ನಂತರ ಅರ್ಧ ಚಮಚ ಉದ್ದಿನ ಬೇಳೆ, ಕಾಲು ಚಮಚಎಳ್ಳು, ಸಣ್ಣ ಚೂರು ಹಸಿಮೆಣಸಿನ ಕಾಯಿ  ಹಾಗು ಮಾವಿನಹೂವನ್ನು    ಸ್ವಲ್ಪ ಹುರಿದುಕೊಂಡು  ಕಾಯಿತುರಿಯ ಸಂಗಡ ರುಬ್ಬಿಕೊಳ್ಳಬೇಕು.  ಕಾಲು  ಲೋಟ  ಮಜ್ಜಿಗೆಯೊಂದಿಗೆ  ರುಚಿಗೆ ತಕ್ಕಷ್ಟು ಉಪ್ಪು ಹಾಗೂ  ಇಂಗು ,ಸಾಸಿವೆ   ಒಗ್ಗರಣೆ ಹಾಕಿ ಸೇರಿಸಿದರೆ   ಮಾವಿನಕಸ್ತ್ರದ   ರುಚಿಯಾದ ತಂಬುಳಿ ಸಿದ್ಧ . 

ಶಿವಾನಂದ ಕಳವೆಯವರು  ಬರೆದಂತೆ ಆಧುನಿಕ ಭರಾಟೆಯಲ್ಲಿ ಹಲವಾರು ವಿಷಯಗಳನ್ನು ’ಮಿಸ್’ ಮಾಡಿಕೊಂಡವರಲ್ಲಿ ನೀವೂ ಆಗಿರ ಬಹುದೇ? ಹಾಗೆ ಆದಲ್ಲಿ ತಂಬುಳಿ ಟ್ರೈ ಮಾಡಿನೋಡಿ ಮತ್ತು ಆರೋಗ್ಯದಿಂದಿರಿ.ಇದೇ ನಮ್ಮೊಳಗೆ ಬ್ಲಾಗ್ ನ ಕಳಕಳಿ.