ಶುಕ್ರವಾರ, ಸೆಪ್ಟೆಂಬರ್ 18, 2015

Tech ಟಾನಿಕ್ -01: ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್ ಫೋನ್ Redmi 2


ಡಿಜಿಟಲ್ ಯುಗದಲ್ಲಿ ಕಾಲ ಕಾಲಕ್ಕೆ ಅಪ್ ಗ್ರೇಡ್ ಆದವನೇ ಜಾಣ ಎಂದರೆ ಅದು ಅತಿಶಯೋಕ್ತಿ ಎಂದೆನಿಸದು. ಇದಕ್ಕೆ ನಾನೂ ಕೂಡಾ ಹೊರತಾಗಿಲ್ಲ. ನನ್ನ ಈ ಹಿಂದಿನsamsung s duos 1 ಸೆಟ್ (ಆವೃತ್ತಿ4.0.4 ) ಹಲವಾರು apk ತಂತ್ರಾಂಶ ಗಳಿಗೆ ಸಹಕರಿಸದೇ  ಹೋ
ದಕಾರಣ ಕಡಿಮೆ ಬಜೆಟ್ಟಿನ ಉತ್ತಮ ಸ್ಮಾರ್ಟ್ ಫೋನ್ ಹುಡುಕತೊಡಗಿದೆ. ವಾಟ್ಸಾಪ್ ನಲ್ಲಿ, ಅಲ್ಲಿ ಇಲ್ಲಿ ಜಾಲಾಡಿ ಕೊನೆಗೂ Redmi 2 ಆನ್ ಲೈನ್ ನಲ್ಲಿ  ಖರೀದಿಸಿದೆ.

 ಚೀನಾದ ಮಿಲೇನಿಯರ ಲೀ ಜುನ್ ರವರ ಕನಸಿನ ಕಂಪನಿ ಶಿಯಾಮಿ . ಶಿಯಾಮಿ ಕಂಪನಿ  ಕಿಟ್ಕ್ಯಾಟ್ ಆಧಾರಿತ ತಂತ್ರಜ್ನಾನವನ್ನು ಮುತುವರ್ಜಿಯಿಂದ ಸಾಕಷ್ಟು ಬದಲಾಯಿಸಿ ಜನರ ಕೈಗೆ ಕೊಟ್ಟಿದ್ದಾರೆ.
ಶಿಯಾಮಿ  ಸ್ಮಾರ್ಟ್ ಫೋನ್ ಬಂದಾಗ ತನ್ನ ಮಾರುಕಟ್ಟೆ ಪ್ರವೇಶ ಹಾಗೂ ತನ್ನ ಹೊಸತನದ ವೈಶಿಷ್ಟ್ಯಗಳಿಂದ ಜಗತ್ತಿನಾದ್ಯಂತ ಮನೆಮಾತಾಗಿದ್ದು ಇತಿಹಾಸ. ದೈತ್ಯ ಕಂಪನಿಗಳಾದ ಆಪಲ್, ಸ್ಯಾಮ್ಸಂಗ್ ಗಳಿಗೆ ಪ್ರಬಲ ಪೈಪೋಟಿ ಒಡ್ಡಿದಂತೂ ನಿಜ.ಬನ್ನಿ Redmi 2 ನ ಬಗ್ಗೆ ಕೊಂಚ ನೋಟ ಹರಿಸೋಣ.

Android v4.4 (KitKat) OS
8 MP Primary Camera
Dual Sim (GSM + LTE)
Wi-Fi Enabled
2 MP Secondary Camera
4.7 inch Touchscreen
FM Radio
1.2 GHz Qualcomm Snapdragon 410 MSM8916 Quad Core Processor
Expandable Storage Capacity of 32 GB
Rs. 5,999

Redmi 2 ಇದು Corning Gorilla Glass 2 ಹೊಂದಿದ್ದು  ಗೀರು ತರಚುವಿಕೆಯ ಸಮಸ್ಯೆಯಿಂದ ಮುಕ್ತವಾಗಿದೆ.ಇದು ಕಿಟ್ಕ್ಯಾಟ್ ಆಧಾರಿತ ರೋಮ್ ಅನ್ನುಹೊದಿದ್ದು ಕಂಪನಿಯು ಸಾಕಷ್ಟು ಮುತುವರ್ಜಿಯಿಂದ  ಬದಲಾಯಿಸಿ ಜನರ ಕೈಗೆ ಕೊಟ್ಟಿದ್ದಾರೆ. ಬಳಸುವಿಕೆಯು ಹೊಸತನ ನೀಡುತ್ತದೆ.ಕೆಮರಾವುಫೋಟೋತೆಗೆಯಲು ಅತ್ಯುತ್ತಮ ವಾಗಿದೆ.  LED ಪ್ಲಾಷ್ ಲೈಟ್ ತುಂಬಾ ಪ್ರಖರವಾಗಿದೆ . ಪ್ರಂಟ್ ಕ್ಯಾಮರಾ ದಲ್ಲಿ ಪುರುಷರ ವಯಸ್ಸನ್ನು ಮುಖವನ್ನು ಅಳೆಯುವದರ ಮೂಲಕ  ಅಜಮಾಸಾಗಿ ತೋರಿಸುತ್ತದೆ!. 


                                   (Redmi 2  ಮೋಬೈಲ್ ಕೆಮೆರಾದಿಂದ ತೆಗೆದ ಫೋಟೊ)

ರಾತ್ರಿ ವೇಳೆ ವೇದಿಕೆಯ ವೀಡಿಯೋ ಚಿತ್ರೀಕರಣದಲ್ಲಿ ಕೆಮರಾದ  ವೈಟ್ ಬ್ಯಾಲೆನ್ಸ್ ಸೆಟ್ಟಿಂಗ್ಸ್ ಸರಿಯಾಗಿ ಸಹಕರಿಸುತ್ತಿಲ್ಲವೆನ್ನುವದು ಕಂಡುಬಂತು.ಆದರೆ ಹಗಲಿನ ಚನ್ನಾಗಿ  ವೀಡಿಯೋ ಚಿತ್ರೀಕರಣ ಮಾಡಬಹುದು.
ಬಣ್ಣಗಳಲ್ಲಿ ಬೆಳಗುವ LED ನೋಟಿಫಿಕೇಷನ್ ವ್ಯವಸ್ಥೆಯು ಫೋನಿನ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸಿದೆ.  ಇಲ್ಲಿ ನಾವು ಕಡಿಮೆ ದರದ ಸ್ಮಾರ್ಟ್ ಫೋನ್ ಗಳೆಗೆ ಬೆಳಗುವ LED ನೋಟಿಫಿಕೇಷನ್ ವ್ಯವಸ್ಥೆಯನ್ನು ನೀಡಿದ್ದು ಒಂದು ಪ್ರಮುಖ ಅಂಶವೆಂದು ನೆನಪಿಟ್ಟು ಕೊಳ್ಳಬೇಕು.(ಈ ಬಗೆಯ ಸೌಲತ್ತು ಐದಂಕಿಯ ದರದ ಮೊಬೈಲ್ ಗಳಿಗೆ ಮಾತ್ರ ಲಭ್ಯವಿದೆ.)

 ಫೋನ್ ನ ಮಾಟವೆನೋ ಸುಂದರವಾಗಿದೆ ಆದರೆ ಇದರ ಹೊರ ಕವಚವು ನುಣುಪಾಗಿದ್ದು ಫೋನ್ ಹಿಡಿದುಕೊಂಡಾಗ ನಿಮ್ಮ ಕೈಯಿಂದ ಜಾರಿಬಬೀಳುವಂತಿದೆ (ನಾನು ಎರಡು ಬಾರಿ ಬೀಳಿಸಿ ಕೊಂಡಿದ್ದೇನೆ.) ಇದಕ್ಕೆ ಕವರ್ ಅನ್ನು ಖರೀದಿಸುವದು ಅತೀ ಅಗತ್ಯ.

ಫೋನ್ ನ ಸ್ಪೀಕರ್ ಗುಣಮಟ್ಟ ತುಂಬಾಚನ್ನಾಗಿದೆ. ಹಾಡುಗಳನ್ನು ಸ್ಪೀಕರ್ ಮೂಲಕವೇ ಚನ್ನಾಗಿ ಆಲಿಸಬಹುದು.(3.5 mm ನ)ಹೆಡ್ ಪೋನ್ ಹಾಕಿಕೊಂಡರಂತೂ ಕರ್ಣಾನಂದ.


 ಬ್ಯಾಟರಿ ಯು 2200 mah ಹೊಂದಿದ್ದು ಉತ್ತಮ ಬ್ಯಾಕಪ್ ನೀಡುತ್ತಿದೆ.( ಬ್ಯಾಟರಿಯನ್ನು ಬದಲಿಸಬಹುದಾಗಿದೆ)
 ಕಂಪನಿಯವರು  ಹೇಳಿಕೊಂಡಂತೆ ಫೋನ್ ನ ದೊಡ್ಡ ವಿಷೇಶ ಪಾಸ್ಟ್ ಚಾರ್ಜಿಂಗ್ ನ   ವ್ಯವಸ್ಥೆಯುಲ್ಲಿ  ಯಾವ ಬಗೆಯ ಹೊಸತನವೂ ಕಂಡು ಬಂದಿಲ್ಲ.


 ಶಕ್ತಿಶಾಲಿ ಪ್ರೊಸೆಸರ್ ನ ಸಹಾಯದಿಂದ ದೊಡ್ಡ ಗಾತ್ರದ ಆಟಗಳನ್ನು ಲೀಲಾಜಾಜವಾಗಿ ಆಡಬಹುದು.OTG ಸಪೋರ್ಟ್ ಚನ್ನಾಗಿಯೇ ಕೆಲಸ ಮಾಡುತ್ತದೆ. ನೆಟ್ ಅನ್ನು wifi ಮೂಲಕ ನನ್ನ ಹಿಂದಿನ ಸ್ಮಾರ್ಟ್ ಫೋನ್ ಗಿಂತಲೂ ವೇಗವಾಗಿ Redmi 2  ನಲ್ಲಿ ಜಾಲಾಡಬಹುದು.ಉಮ್ಮಚಗಿ ಹಾಗೂಸಿರಸಿಯಲ್ಲಿನ ಏರ್ ಟೆಲ್ ಡಾಟಾ ವೇಗ ಇತ್ತೀಚಿಗೆ ತುಂಬಾ ಕಡಿಮೆ ಇರುವದಕ್ಕೆ 3G ಬಗೆಗೆ ಹೇಳುವುದು ಸುಮ್ಮನೆ ಎನಿಸುತ್ತದೆ

      


           


      
    
     ಥೀಮ್ ನಲ್ಲಿ ನಿಮ್ಮ ಕೀ ಪ್ಯಾಡ್,ಕೂಡಾ  ಬದಲಾಗುತ್ತದೆ. ಇತರ ಫೋನ್ ಗಳಲ್ಲಿ ಈ ಸೌಲಭ್ಯವಿಲ್ಲ.

                      ಈ ಬ್ಲಾಗ್  ಬರೆಯುವ ಹೊತ್ತಿಗೆ ಫೋನ್ ನ್ ತಂತ್ರಾಶ MIUI 6 ಇದ್ದಿದ್ದು MIUI  6.7.1.0 ಗೆ ಅಪ್ ಡೇಟ್ ಆಗಿದೆ. ಹಲವಾರು ಹೊಸ ಹೊಸ ಬಗೆಯ ಥೀಮ್ ಗಳು ಫೋನ್ ನಲ್ಲಿ ಡೌನ್ ಲೋಡ್ ಮಾಡಿ ಕೊಂಡು ನಿಮ್ಮ ಫೋನ್ ಇನ್ನಷ್ಟು ಸ್ಮಾರ್ಟ್
ಆಗುವಂತೆ ಮಾಡಿಕೊಳ್ಳಬಹುದು. ಬಹು ಪಾಲು ಭಾರತದ ಮಾರುಕಟ್ಟೆ ನಂಬಿದ ಕಂಪನಿಯು ನಮ್ಮ ದೇಶದ ಬಗೆಗೆ ಹಬ್ಬಗಳ ಥೀಮ್ ತಯಾರಿಸಿ ಜನರ ಮನಕ್ಕೆ ಇನ್ನಷ್ಟು ಹತ್ತಿರವಾಗುವ ಕಂಪನಿಯ  ಮಾರುಕಟ್ಟೆ ತಂತ್ರಕ್ಕೆ ನಾವು ತಲೆದೂಗಲೇಬೇಕು.

ಪೋನ್ ನ ಕೆಳಭಾಗದ ಗುಂಡಿಗಳಿಗೆ ಬೆಳಕಿನ ವ್ಯವಸ್ಥೆ ಇಲ್ಲದಿರುವದು ದೊಡ್ಡ ನ್ಯೂನತೆಯೆಂದು ತೋರುತ್ತಿದೆ.ಇದನ್ನೊಂದು ಹೊರತಾಗಿ ನೋಡಿದರೆ ಫೋನ್ ಕೊಟ್ಟ ಬೆಲೆಗೆ ಎಷ್ಟೋ ಪಟ್ಟು ಚನ್ನಾಗಿಯೇ ಇದೆ.