ಮೊದಲಿನಿಂದಲೂ ಕೃಷಿ ಬದುಕಿನಲ್ಲಿ ಮಳೆ ನಕ್ಷತ್ರಗಳು ಹಾಸು ಹೊಕ್ಕಾಗಿವೆ.ಉತ್ತಲು,ಬಿತ್ತಲು ಪಂಚಾಂಗ ಆಧರಸಿ ಹಲವರು ಕೆಲಸ ಆರಂಭಿಸುತ್ತಾರೆ.ಈ ಪದ್ಧತಿ ಈಗಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ. ಹಲವು ವರ್ಷಗಳ ಬಳಿಕ ಮಲೆನಾಡನ್ನು ಮೃಗಶಿರಾ ನಕ್ಷತ್ರದ ಮಳೆ ಚನ್ನಾಗಿಯೇ ತೋಯಿಸಿದೆ.ವಾರಗಟ್ಟಲೇ ಬಿಡುವಿಲ್ಲದಂತೆ ಬಂದಿದ್ದು ಎಲ್ಲರಿಗೂ ಖುಶಿಯೇ.ಬಿದ್ದ ಮಳೆ ಭೂಮಿಗೆ ತಾಕುತ್ತಲೇ ಜೀವ ರಾಶಿಗಳು ಹೇಳಿಕೊಳ್ಳಲಾಗದಷ್ಟು ಸಂಭ್ರಮಿಸಿದೆ. ಗಿಡಗಳಿಗೆಲ್ಲಾ ಹೊಸ ಚಿಗುರು, ಕೀಟ ಪ್ರಪಂಚದ ಕಲರವ. ಹೀಗೆ ಮಳೆಯ ಬಿಡುವಿನ ನಡುವೆ ಕ್ಯಾಮರವನ್ನು ಹಿಡಿದು ಹೊರಟಾಗ ನನ್ನ ಕಲ್ಪನೆಗೆ ಭೂಮಿಯು ಹೀಗೆ ಕಂಡುಬಂತು.
"ಮೋಡಗಳ ಓಟದ ಸಮಯದಿ ಮಬ್ಬೆಳಕು ಭುವಿಗೆಲ್ಲ
ಜೊತೆಗೆ ಮೆಲ್ಲಗೆ ಹಬ್ಬುತಿಹ ಹಸಿರ ಹೊದಿಕೆಯ ಹಾಸು
ಕಂಡುಬರುತಿಹುದು ಭುವಿಯು ಹದಿಹರೆಯದ ಕೂಸು"
ಮಾಡಂಚಿಂದ ಮಳೆಯ ಪಯಣ.
ಸಂಜೆ ಬೆಳಕ ಹೊತ್ತಲ್ಲಿ : ಪೂರಾ ಕಲರೂ ಅಲ್ಲದ ಕಪ್ಪು ಬಿಳುಪೂ ಅಲ್ಲದ ಚಿತ್ರ.
ಹಸಿರ ಬಟ್ಟಲೊಳು ಮಳೆಹನಿಗೆ ತುಸು ಕಾಲ ವಿಶ್ರಾಂತಿ.
ಬಿದಿರ ಬದುಕಿಗೆ ಮೋಡದ ಮುಸುಕಿಂದ ಸೂರ್ಯನ ಮೃದು ಸ್ಪರ್ಷ.
ಹಸಿರ ವೇದಿಕೆ ಮೇಲೆ ಹನಿಯ ನರ್ತನ.
ಮಳೆ ಬರುದ್ರೊಳ್ಗೆ ಕೆಲ್ಸಾ ಮುಗೀಲಿ.
ಸೋಮವಾರ, ಜೂನ್ 21, 2010
ಭಾನುವಾರ, ಮೇ 16, 2010
ಯಕ್ಷಗಾನದ ಛಾಯಾಚಿತ್ರ
(ಚೌಕಿಯಲ್ಲಿ ಗಣಪತಿ ಪೂಜೆಯ ವೇಳೆ)
ಮೊದಲಿನಿಂದಲೂ ಯಕ್ಷಗಾನವೆಂದರೆ ಒಂತರಾ ಸೆಳೆತ.ದೂರದಲ್ಲಿ ಚಂಡೆ ಮದ್ದಳೆ ಸಪ್ಪಳ ಕೇಳಿದಾಗ ಪುಳಕ.ಹಾದಿ ಬದಿಯ ಗೋಡೆಗೆ ಅಂಟಿಸಿದ ಪೋಸ್ಟರುಗಳು ನನ್ನನ್ನು ಆಟಕ್ಕೆ ಸೆಳೆದು ಒಯ್ಯುತ್ತದೆ.
ಮೊನ್ನೆ ಆಗಿದ್ದೂ ಅದೇ. ಇರಲಿ , ಅಪರೂಪಕ್ಕೆ ಟೆಂಟ್ ಮೇಳದ ಆಟ ನೋಡುವ ಅವಕಾಶ ಸಿಕ್ಕಿತ್ತು. ಆ ಹೊತ್ತಿನಲ್ಲಿ ಕೆಲ ಚಿತ್ರ ತೆಗೆದಿದ್ದು ಈಗ ನಿಮ್ಮ ಮುಂದಿದೆ.

ಮೊನ್ನೆ ಆಗಿದ್ದೂ ಅದೇ. ಇರಲಿ , ಅಪರೂಪಕ್ಕೆ ಟೆಂಟ್ ಮೇಳದ ಆಟ ನೋಡುವ ಅವಕಾಶ ಸಿಕ್ಕಿತ್ತು. ಆ ಹೊತ್ತಿನಲ್ಲಿ ಕೆಲ ಚಿತ್ರ ತೆಗೆದಿದ್ದು ಈಗ ನಿಮ್ಮ ಮುಂದಿದೆ.
ಗುರುವಾರ, ಏಪ್ರಿಲ್ 1, 2010
ಅಳಿಯುವ ಮುನ್ನ
ಸೋಮವಾರ, ಮಾರ್ಚ್ 1, 2010
ಶಿರಸಿ ಜಾತ್ರೆ.
ಕಪ್ಪೆರಡೋ ಬಿಳಿಮೂರೋ ಯಾವುದೋ ಒಂದು ಶೃತಿಯಲ್ಲಿ ಕೊಳಲುಮಾರುವ ಹುಡುಗ "ಹೊಸ ಗಾನಾ ಬಜಾನ" ಎಂಬ ಇತ್ತೀಚಿಗಿನ ಸಿನಿಮಾ ಹಾಡು ಹೊಮ್ಮಿಸಿ ಕೊಳ್ಳುವವರಿಗೆ ಕಾಯುತ್ತಿದ್ದಾನೆ. ಸೇಲ್ ಎಂಬ ಬೋರ್ಡ್ ಹಾಕಿಕೊಂಡು ಬೊಬ್ಬಿಡುವ ವ್ಯಾಪಾರಿಗಳು. ಬಳೆ ಇನ್ನಿತರ ಸಾಮಗ್ರಿ ಕೊಳ್ಳಲು ಬಂದ ಹೆಂಗಳೆಯರ ದಂಡು. ಮಾರಿ ಚಪ್ಪರದ ಹತ್ತಿರ ಸಿಹಿತಿಂಡಿ ವ್ಯಾಪರಿಗಳಲ್ಲಿ ಕರಿದು ಹಾಗೇಯೇ ಮಾರಾಟ ವಾಗುತ್ತಿರುವ ಜಿಲೇಬಿ!. ಇದು ನಾನು ಶಿರಸಿ ಜಾತ್ರೆ ಯಲ್ಲಿ ಕಂಡ ಸನ್ನಿವೇಶಗಳು. ಜನರಲ್ಲಿ ದೇವರಮೇಲೆ ಎಷ್ಟು ಭಯ ಭಕ್ತಿ ಇದೆ ಎಂದುನೋಡುವದಾದರೆ ಇಲ್ಲಿಗೆಬರಬೇಕು.
ನಾನಾ ರೀತಿಯ ಸೇವೆ, ಹರಕೆಗಳನ್ನು ಸಲ್ಲಿಸಲು ಕರ್ನಾಟಕದ ಹೊರತಾಗಿ ದೇಶದ ಹಲವು ರಾಜ್ಯದ ಭಕ್ತಾದಿಗಳು ಮಾರಿಕಾಂಬೆಗೆ ನಡೆದುಕೊಳ್ಳುತ್ತಾರೆ. ಜಾತ್ರೆ ಎಂದರೆ ಕೇಳಬೇಕೆ? ಕಿಲೋಮೀಟರುಗಟ್ಟಲೆ ಅಂಗಡಿಸಾಲುಗಳು,ಮನೋರಂಜನಾ ಆಟಗಳು, ನಾಟಕ, ಸರ್ಕಸ್ ಯಕ್ಷಗಾನಗಳು ನೋಡಲು ಬಂದವರಿಗೆ ಖುಷಿ ಕೊಡುತ್ತಿವೆ. ನಾನು ಚಾಟಿನಲ್ಲಿ ಸಿಕ್ಕ ಸ್ನೇಹಿತರಲ್ಲಿ ಜಾತ್ರೆಯ ಪೂರ್ತಿ ಅನಾವರಣ ಮಾಡುವದಾಗಿ ಹೇಳಿಕೊಂಡಿದ್ದೆ. ಅನಿವಾರ್ಯಕಾರಣಗಳಿಂದ ಸಂಜೆಯ ಜನಜಂಗುಳಿ, ಹಾಗೂ ಕರೆಂಟ್ ಬೆಳಕಿನಲ್ಲಿ ರಾತ್ರಿಯ ಚಿತ್ರ ತೆಗೆಯುವ ಅವಕಾಶ ನನಗೆ ಮಿಸ್ ಆಗಿದೆ. ಜಾತ್ರೆಯಲ್ಲಿ ನನಗೆ ಸಿಕ್ಕ ಅರ್ಧಗಂಟೆಯಲ್ಲಿ ಇಷ್ಟನ್ನೇ ಹಂಚಿಕೊಳ್ಳುತಿದ್ದೇನೆ. ಒಟ್ಟಿನಲ್ಲಿ ಶಿರಸಿ ಪೇಟೆಯು ಮಾರಿಜಾತ್ರೆಯ ನೆಪದಲ್ಲಿ ಲಕ್ಷಾಂತರ ಜನರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದೆ.
ಸೇಲ್, ಸೇಲ್ ಸಸ್ತಾ! ಭಾರಿ ಮಾರಾಟಾ.
ಹೌದಪಾ,ಜಾತ್ರೆ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು .
ಮಂಗಳವಾರ, ಫೆಬ್ರವರಿ 2, 2010
ವೆನಿಸ್ಸಿನ ವ್ಯಾಪಾರ -ನಾಟಕದ ವಿಮರ್ಶೆ.
ವಿಲಿಯಂಶೆಕ್ಸಪಿಯರಗೆ ಹೆಸರು ತಂದುಕೊಟ್ಟನಾಟಕಗಳಲ್ಲಿ ವೆನಿಸ್ಸಿನ ವ್ಯಾಪಾರವೂ ಒಂದು.ಸಾಗರದ ನೀನಾಸಂ ತಂಡವು ಮಂಚಿಕೇರಿಯಲ್ಲಿ ಈ ನಾಟಕವನ್ನು ಇತ್ತೀಚೆಗೆ ಪ್ರದರ್ಶಿಸಿತು.ಕಥಾ ಸಾರಂಶ:ಆಂಟೊನಿಯೊ ಮತ್ತು ಬಸಾನಿಯೋ ಮಿತ್ರರು. ಮಿತ್ರ ಬಸಾನಿಯೋಗೆ ಆತನ ಪ್ರೀತಿಸಿದ ಹುಡುಗಿಯನ್ನು ಭೇಟಿಯಾಗಲು ಹಣದ ಅವಶ್ಯವಿರುಗಾಗಿ ಆಂಟೊನಿಯೊ ಪ್ರೀತಿಯ ಗೆಳಯನಿಗಾಗಿ ಜಾತೀಯ ಸ್ವಾಭಿಮಾನ ಬಿಟ್ಟು ಯಹೂದಿ ಒಬ್ಬನ ಹತ್ತಿರ ಸಾಲಪಡೆಯುತ್ತಾನೆ.ಯಹೂದಿ ಶೈಲಾಕ್ ನು ಸಾಲದ ಜಾಮೀನಿಗೆ ಆಂಟೊನಿಯೊನ ಒಂದು ಶೇರುಮಾಂಸ ಪಡೆಯುವದಾಗಿ ಕರಾರು ಆಗುತ್ತದೆ. ಹಡಗಿನ ವ್ಯಾಪಾರಿ ಆದ ಆಂಟೊನಿಯೊ ಸಮಯಕ್ಕೆ ಸರಿಯಾಗಿ ಸಾಲ ಹಿಂದಿರುಗಿಸಲಾಗದೇ ಕರಾರಿನ ಪ್ರಕಾರ ದೇಹತ್ಯಾಗ ಮಾಡುವ ಸನ್ನಿವೇಶ ಬರುತ್ತದೆ.ಅಷ್ಟರಲ್ಲಿ ಆತನ ಗೆಳೆಯ ಬಸಾನಿಯೊ ಪ್ರೇಯಸಿಯ ಮನ ಗೆದ್ದು ಅವಳಿಗೆ ಮಾತು ಕೊಟ್ಟಂತೆ ಅವಳ ನೆನಪಿನ ಉಂಗುರ ಜೊತೆಗೆ ಅಪಾರ ಹಣದೊಂದಿಗೆ ಆಂಟೊನಿಯೊನ ಋಣತೀರಿಸಲು ವೆನಿಸ್ಸಿಗೆ ಮರಳುತ್ತಾನೆ. ನಾಟಕಕಾರ ಇಷ್ಟಕ್ಕೇ ಸುಮ್ಮನಿರದೇ ಹೊಸ ತಿರುವು ಕೊಡುತ್ತಾನೆ.ಅಪಾರ ಹಣವನ್ನು ಕೊಟ್ಟಹುಡುಗಿಯು ತನ್ನ ಪತಿಯು ವೆನಿಸ್ಸಿಗೆ ತಲುಪುವ ಮುನ್ನ ಅಲ್ಲಿಸೇರುತ್ತಾಳೆ.ಕರಾರಿನ ಹಕ್ಕು ಪಡೆಯಲು ಯಹೂದಿ ಶೈಲಾಕ್ ನು ನ್ಯಾಯಲಯಕ್ಕೆ ಮೊರೆಹೋಗುತ್ತಾನೆ.ಅವಳು ನ್ಯಾಯವಾದಿಯ ವೇಷದಲ್ಲಿ ಆಂಟೊನಿಯೊ ನ ಮಾಂಸ ತೆಗೆಯಲು ಅಡ್ಡಿಇಲ್ಲ ಆದರೆ ಮಾಂಸತೆಗೆಯುವಾಗ ಒಂದು ಹನಿ ರಕ್ತ ಬೀಳಬಾರದು ಎಂದು ಕರಾರಿನಲ್ಲಿದ್ದ ಲೋಪ ಎತ್ತಿಹಿಡಿದು ದುರಾಸೆಯ ಯಹೂದಿಯ ಯೋಜನೆ ತಲೆಕೆಳಗೆ ಮಾಡಿ ಗಂಡನ ಗೆಳೆಯನನ್ನು ಸಾವಿನಾಂಚಿನಿಂದ ರಕ್ಷಿಸುತ್ತಾಳೆ.ವಕಾಲತ್ತಿನ ಸಂಭಾವನೆಯಾಗಿ ಅವಳೇಕೊಟ್ಟ ಉಂಗುರ ಕೇಳಿ ಆತನನ್ನು ಪೆಚಿಗೆ ಸಿಲುಕಿಸಿ ಪರೀಕ್ಷೆಗೆ ಒಡ್ಡುತ್ತಾಳೆ.ನಂತರ ಎಲ್ಲವೂ ಸುಖಾಂತ್ಯ. ಈ ನಾಟಕದಲ್ಲಿ ಜಾತೀಯ ಸಂಘರ್ಷ,ವ್ಯಾಪಾರಿ ಬದುಕು,ಸುಂದರ ಪ್ರೇಮಕಥೆ ಈ ಮೂರೂ ವಿಷಯವನ್ನು ಚನ್ನಾಗಿ ಬಳಸಿಕೊಳ್ಳಲಾಗಿದೆ.ನವಿರಾದ ನಿರೂಪಣೆ ಚಕಚಕ ಸಾಗುವ ದೃಶ್ಯಾವಳಿ ನೋಡುಗರಿಗೆ ಸಮಯ ಸರಿದಿದ್ದು ಗೊತ್ತಾಗದಂತೆ ಮಾಡುತ್ತವೆ.ಉಡುಗೆಯ ಆಯ್ಕೆ ಒಂದು ಹೊರತು ಪಡಿಸಿದರೆ ಸರಳ ರಂಗ ವಿನ್ಯಾಸ ,ಪಾಶ್ಚಾತ್ಯಹಾಗೂ ದೇಸಿಯ ಮಿಶ್ರಣದ ಹಿನ್ನಲೆ ಸಂಗೀತ ನಾಟಕವು ನೋಡುಗರಿಗೆ ಒಂದುತರಹದ ಆಹ್ಲಾದತಂದುಕೊಟ್ಟಿತು ಎಂದರೆಅದುಅತಿಶಯೋಕ್ತಿಎನಿಸಲಾರದು
ಶುಕ್ರವಾರ, ಜನವರಿ 22, 2010
ವ್ಹಾ ಲಾಲ್ ಬಾಗ್!
ತರಕಾರಿ ಕೆತ್ತನೆ
ನಿಜಕ್ಕೂ ಲಾಲ್ ಬಾಗ್ ಹಸಿರು ಮತ್ತು
ಹೂಗಳಿಂದ ಕಂಗೊಳಿಸುತ್ತಿದೆ.ಈ ಬಾರಿ ಹೂಗಳನ್ನು ತುಂಬಾ ಚನ್ನಾಗಿ ಅಲಂಕರಿಸಿದ್ದಾರೆ.ಕೆಲ ಚಿತ್ರಗಳನ್ನು ಇಲ್ಲಿ ನೋಡಬಹುದು.ಹೂ ಬಾಡುವಮುನ್ನ ಒಮ್ಮೆ ನೋಡಿಬನ್ನಿ.ಹೊರಡುವಾಗ ನಿಮ್ಮ ಜೊತೆಗೆ ಆಪ್ತರನ್ನು ಕರೆದೊಯ್ಯಿರಿ ಅಲ್ಲಿ ನೀವು ಹೂಗಳ ಜೊತೆ ನಿಮ್ಮವರ ಮುಖ ಅರಳಿರುವದನ್ನು ಕಾಣುವಿರಿ!.ಭಾಂಧವ್ಯ ಮತ್ತಷ್ಟು ಹಸನಾಗಲಿ (ಸಂಜೆ ವೇಳೆ ಕಂಡು ಬಂದ ಲಾಲ್ ಬಾಗ್ ಕೆರೆ.)
ಮಂಗಳವಾರ, ಜನವರಿ 12, 2010
ಸಂಕ್ರಾಂತಿ ಬರುತ್ತಿದೆ
ಸಂಕ್ರಾಂತಿ ರೈತರ ಹಬ್ಬ. ವರ್ಷವಿಡೀಶ್ರಮಪಟ್ಟು ಬೆಳೆದ ಬೆಳೆಯು ಕೈಗೆ ಬರುವ ಪರ್ವಕಾಲ. ಈ ಬಾರಿ ಮಳೆಯು ಉತ್ತರ ಕರ್ನಾಟಕದಲ್ಲಿ ನೆರೆ ತಂದು ಹಾವಳಿ ಎಬ್ಬಿಸಿದ ನಂತರ ಈಗ ಮತ್ತೆ ಹೊಯ್ಯುತ್ತಾ ಪುನಃ ಪುನಃ ಬರೆ ಹಾಕುತ್ತಲೇ ಇದೆ. ಪರಿಣಾಮವಾಗಿ ಉತ್ತರ ಕನ್ನಡದಲ್ಲಿ ಭತ್ತದಗದ್ದೆ ಮತ್ತು ಕೊಯ್ದು ಸಂಸ್ಕರಣೆ ಆಗುತ್ತಿದ್ದ ಭತ್ತ,ಹುಲ್ಲು,ಅಟ್ಟದಲ್ಲಿ ಒಣಹಾಕಿದ ಅಡಿಕೆ ಫಸಲು ಈಗಾಗಲೇ ಹಾಳಾಗಿದೆ.ರೈತರ ಬದುಕು ಏರಿದ ಬೆಲೆ ಮತ್ತು ಕೃಷಿ ಕಾರ್ಮಿಕರ ಕೊರತೆಯ ನಡುವೆ ಕಂಗಾಲಾಗಿದೆ.ಬದಲಾದ ಈಗಿನ ಕೃಷಿಕಾರ್ಮಿಕ ಜನರ ಮನಸ್ಥಿತಿ ನೋಡಿದ ಹಳಬರು ಕೃಷಿ ಮುಂದುವರಿಸಿಕೊಂಡು ಹೋಗುವದು ಕಷ್ಟ ಎನ್ನುತ್ತಿದ್ದಾರೆ.ಕೃಷಿಕರ ಮಕ್ಕಳು ವ್ಯವಸಾಯ ಸಾಕಪ್ಪಾ .ಇದರ ಉಸಾಬರಿ ಬೇಡ ಎಂದೆನಿಸುವಷ್ಟರ ಮನ ಸ್ಥಿತಿಗೆ ತಲುಪುತ್ತಿದ್ದಾರೆ. ಇದು ನಿಜಕ್ಕೂ ದುರಂತ. ಈಗ ಸಂಕ್ರಾಂತಿಯ ಸಂಭ್ರಮವನ್ನು ಮಳೆಯ ಕಸಿದುಕೊಂಡಿದೆ.ಭರವಸೆಯ ದಿನಗಳು ಬಂದೇಬರುತ್ತದೆ ಎಂಬ ನಿರೀಕ್ಷೆಯಲ್ಲಿ ಎಂದಿನಂತೆ ರೈತ ತನ್ನಕಾರ್ಯದಲ್ಲಿ ಮಗ್ನನಾಗಿದ್ದಾನೆ.ಎಲ್ಲರಿಗೂ ಮುಂದೆ ಒಳ್ಳೆಯ ದಿನ ಬರಲಿ.ರೈತನ ಉಳುಮೆ ಆನಂದದಾಯಕವಾಗಲಿ. ಬರುವ ಸಂಕ್ರಾಂತಿಯುಎಲ್ಲರಿಗೂ ಒಳಿತು ಉಂಟುಮಾಡಲಿ. ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
*ಚಿತ್ರ ಅರುಣೋದಯ.
ನವಿಲುಗುಡ್ಡ (ಶಿವಮೊಗ್ಗ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)


