ಇಲ್ಲಿ ಹುಡುಗನು ತನ್ನ ಪ್ರೇಮದ ಅಳಲನ್ನು ಪ್ರೇಯಸಿಯೊಂದಿಗೆ ತೋಡಿಕೊಳ್ಳಲು ಹನಿಸಾಲಿಗೆ ಮೊರೆಹೋಗಿದ್ದಾನೆ.
ಸಂದರ್ಭ: ದಿನಾಲೂ ದಾರಿಯ ಮೇಲೆ ಎದುರಾಗುವ ಆ ಹುಡುಗಿಯ ಕಂಡಾಗ ಆ ದಿನ ಎನೋ ಒಂಥರಾ ಅನಿಸಿಬಿಟ್ಟಿತು.ಇಲ್ಲ ಹುಡುಗನಿಗೆ ತಡೆಯಲಾಗುತ್ತಿಲ್ಲ. ಬಹಳ ದಿನಗಳಿಂದ ತನ್ನೊಳಗೆ ಅದುಮಿಟ್ಟುಕೊಂಡ ಭಾವನೆ ವ್ಯಕ್ತಪಡಿಸಲು ಆತ ಕಾಯುತ್ತಿದ್ದಾನೆ.ಇಂದು ಆ ದಿನ ಬಂದಿದೆ.ಎಂದಿನಂತೆ ದಾರಿಯಲ್ಲಿ ಮತ್ತೆ ಎದುರಾಗಿ ತನ್ನ ನೋಡಿ ಮುಗುಳ್ನಕ್ಕಾಗ ಈ ಸಾಲನ್ನು ಹುಡುಗಿಗೆ ಹೇಳಲು ಕಾದು ನಿಂತಿದ್ದಾನೆ.
**ನಿ-ವೇದನೆ**
ಪ್ರೇಮದ ಹಾಯಿದೋಣಿಯ ಸವಾರ
ತೆಲಿಸುವೆಯೋ ಮುಳುಗಿಸುವೆಯೋ
ಅದು ನಿನ್ನ ಮನದಲೆಗೆ ಬಿಟ್ಟ ವಿಚಾರ..
4 ಕಾಮೆಂಟ್‌ಗಳು:
va va va
ಕನಸು ನನಸಾಗತ್ತೋ ಇಲ್ಲವೋ ದೇವರಿಗೆ ಮಾತ್ರ ಗೊತ್ತು... ನಿವೇದನೆ ಮಾಡಲಾಗದೆ, ನೀ-ವೇದನೆ ಆಗಿ ಕಾಡುತಿದೆ ಕತ್ತಲು...!!
ಚೆನ್ನಾಗಿದೆ ನಾಲ್ಕು ಸಾಲುಗಳು! ಆದರೆ 'ನೀ-ವೇದನೆ' ಯಾಕೆ ಅಂತ ಅರ್ಥ ಆಗಲಿಲ್ಲ!!!
ಧನ್ಯವಾದಗಳು ಸುಮನರವರೇ.ನಾ ಬರೆದ ಹನಿ ಸಾಲಲ್ಲಿ ಹುಡುಗನಿಗೆ ಅವಳ ಮೋಹಕ ನಗುವು ಆತನಲ್ಲಿ ಪ್ರೇಮದ ವಾಂಛೆ ಹುಟ್ಟಿಸುತ್ತದೆ.ಆಗ ಒಂದುತರಹದ ಯಾತನೆ ಉಂಟಾಗಿ ಅವಳಲ್ಲಿ ತನ್ನಲ್ಲಾಗುವ ತಲ್ಲಣವನ್ನು ಕೇಳಿಕೊಳ್ಳುವಾಗ ನಿನ್ನಿಂದ ತಾನು ಪಡುತ್ತಿರುವ ಸಂಕಟವನ್ನು* ನಿ-ವೇದನೆ* ಮೂಲಕ ಹೇಳಿಕೊಳ್ಳುತ್ತಿದ್ದಾನೆ.
ಕಾಮೆಂಟ್ ಪೋಸ್ಟ್ ಮಾಡಿ