ಮಂಗಳವಾರ, ಫೆಬ್ರವರಿ 2, 2010

ವೆನಿಸ್ಸಿನ ವ್ಯಾಪಾರ -ನಾಟಕದ ವಿಮರ್ಶೆ.


ವಿಲಿಯಂಶೆಕ್ಸಪಿಯರಗೆ ಹೆಸರು ತಂದುಕೊಟ್ಟನಾಟಕಗಳಲ್ಲಿ ವೆನಿಸ್ಸಿನ ವ್ಯಾಪಾರವೂ ಒಂದು.ಸಾಗರದ ನೀನಾಸಂ ತಂಡವು ಮಂಚಿಕೇರಿಯಲ್ಲಿ ಈ ನಾಟಕವನ್ನು ಇತ್ತೀಚೆಗೆ ಪ್ರದರ್ಶಿಸಿತು.ಕಥಾ ಸಾರಂಶ:ಆಂಟೊನಿಯೊ ಮತ್ತು ಬಸಾನಿಯೋ ಮಿತ್ರರು. ಮಿತ್ರ ಬಸಾನಿಯೋಗೆ ಆತನ ಪ್ರೀತಿಸಿದ ಹುಡುಗಿಯನ್ನು ಭೇಟಿಯಾಗಲು ಹಣದ ಅವಶ್ಯವಿರುಗಾಗಿ ಆಂಟೊನಿಯೊ ಪ್ರೀತಿಯ ಗೆಳಯನಿಗಾಗಿ ಜಾತೀಯ ಸ್ವಾಭಿಮಾನ ಬಿಟ್ಟು ಯಹೂದಿ ಒಬ್ಬನ ಹತ್ತಿರ ಸಾಲಪಡೆಯುತ್ತಾನೆ.ಯಹೂದಿ ಶೈಲಾಕ್ ನು ಸಾಲದ ಜಾಮೀನಿಗೆ ಆಂಟೊನಿಯೊನ ಒಂದು ಶೇರುಮಾಂಸ ಪಡೆಯುವದಾಗಿ ಕರಾರು ಆಗುತ್ತದೆ. ಹಡಗಿನ ವ್ಯಾಪಾರಿ ಆದ ಆಂಟೊನಿಯೊ ಸಮಯಕ್ಕೆ ಸರಿಯಾಗಿ ಸಾಲ ಹಿಂದಿರುಗಿಸಲಾಗದೇ ಕರಾರಿನ ಪ್ರಕಾರ ದೇಹತ್ಯಾಗ ಮಾಡುವ ಸನ್ನಿವೇಶ ಬರುತ್ತದೆ.ಅಷ್ಟರಲ್ಲಿ ಆತನ ಗೆಳೆಯ ಬಸಾನಿಯೊ ಪ್ರೇಯಸಿಯ ಮನ ಗೆದ್ದು ಅವಳಿಗೆ ಮಾತು ಕೊಟ್ಟಂತೆ ಅವಳ ನೆನಪಿನ ಉಂಗುರ ಜೊತೆಗೆ ಅಪಾರ ಹಣದೊಂದಿಗೆ ಆಂಟೊನಿಯೊನ ಋಣತೀರಿಸಲು ವೆನಿಸ್ಸಿಗೆ ಮರಳುತ್ತಾನೆ. ನಾಟಕಕಾರ ಇಷ್ಟಕ್ಕೇ ಸುಮ್ಮನಿರದೇ ಹೊಸ ತಿರುವು ಕೊಡುತ್ತಾನೆ.ಅಪಾರ ಹಣವನ್ನು ಕೊಟ್ಟಹುಡುಗಿಯು ತನ್ನ ಪತಿಯು ವೆನಿಸ್ಸಿಗೆ ತಲುಪುವ ಮುನ್ನ ಅಲ್ಲಿಸೇರುತ್ತಾಳೆ.ಕರಾರಿನ ಹಕ್ಕು ಪಡೆಯಲು ಯಹೂದಿ ಶೈಲಾಕ್ ನು ನ್ಯಾಯಲಯಕ್ಕೆ ಮೊರೆಹೋಗುತ್ತಾನೆ.ಅವಳು ನ್ಯಾಯವಾದಿಯ ವೇಷದಲ್ಲಿ ಆಂಟೊನಿಯೊ ನ ಮಾಂಸ ತೆಗೆಯಲು ಅಡ್ಡಿಇಲ್ಲ ಆದರೆ ಮಾಂಸತೆಗೆಯುವಾಗ ಒಂದು ಹನಿ ರಕ್ತ ಬೀಳಬಾರದು ಎಂದು ಕರಾರಿನಲ್ಲಿದ್ದ ಲೋಪ ಎತ್ತಿಹಿಡಿದು ದುರಾಸೆಯ ಯಹೂದಿಯ ಯೋಜನೆ ತಲೆಕೆಳಗೆ ಮಾಡಿ ಗಂಡನ ಗೆಳೆಯನನ್ನು ಸಾವಿನಾಂಚಿನಿಂದ ರಕ್ಷಿಸುತ್ತಾಳೆ.ವಕಾಲತ್ತಿನ ಸಂಭಾವನೆಯಾಗಿ ಅವಳೇಕೊಟ್ಟ ಉಂಗುರ ಕೇಳಿ ಆತನನ್ನು ಪೆಚಿಗೆ ಸಿಲುಕಿಸಿ ಪರೀಕ್ಷೆಗೆ ಒಡ್ಡುತ್ತಾಳೆ.ನಂತರ ಎಲ್ಲವೂ ಸುಖಾಂತ್ಯ. ಈ ನಾಟಕದಲ್ಲಿ ಜಾತೀಯ ಸಂಘರ್ಷ,ವ್ಯಾಪಾರಿ ಬದುಕು,ಸುಂದರ ಪ್ರೇಮಕಥೆ ಈ ಮೂರೂ ವಿಷಯವನ್ನು ಚನ್ನಾಗಿ ಬಳಸಿಕೊಳ್ಳಲಾಗಿದೆ.ನವಿರಾದ ನಿರೂಪಣೆ ಚಕಚಕ ಸಾಗುವ ದೃಶ್ಯಾವಳಿ ನೋಡುಗರಿಗೆ ಸಮಯ ಸರಿದಿದ್ದು ಗೊತ್ತಾಗದಂತೆ ಮಾಡುತ್ತವೆ.ಉಡುಗೆಯ ಆಯ್ಕೆ ಒಂದು ಹೊರತು ಪಡಿಸಿದರೆ ಸರಳ ರಂಗ ವಿನ್ಯಾಸ ,ಪಾಶ್ಚಾತ್ಯಹಾಗೂ ದೇಸಿಯ ಮಿಶ್ರಣದ ಹಿನ್ನಲೆ ಸಂಗೀತ ನಾಟಕವು ನೋಡುಗರಿಗೆ ಒಂದುತರಹದ ಆಹ್ಲಾದತಂದುಕೊಟ್ಟಿತು ಎಂದರೆಅದುಅತಿಶಯೋಕ್ತಿಎನಿಸಲಾರದು





. ಚಿತ್ರಕೃಪೆ :ನೀನಾಸಂ

6 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ನಾನು ನೀನಾಸಂ ನಾಟಕದ ಭಕ್ತ
ಮೊದಲು ತುಂಬಾ ನೋಡುತ್ತಿದ್ದೆ
ಹೊಸತನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅವರ ನಾಟಕ ವೈಖರಿ ನಂಗಿಷ್ಟ
ಫೋಟೋ ಗಳು ಅದ್ಭುತವಾಗಿವೆ

Narasimha Joshi Sonda ಹೇಳಿದರು...

ತಮ್ಮ ವಿಮರ್ಶೆ ನಮಗೆ ನಾಟಕ ನೋಡಿದಂತಹ ಅನುಭವವನ್ನು ನೀಡಿತು.

ಸುಬ್ರಮಣ್ಯ ಹೇಳಿದರು...

ನಾವು ಶಾಲೆಗೆ ಹೋಗುವಾಗ ಈ ನಾಟಕ ಇತ್ತು ಅಲ್ವಾ

ಮನಮುಕ್ತಾ ಹೇಳಿದರು...

ಅನೇಕ ವರ್ಷಗಳ ಹಿ೦ದೆ ಆ ಕಡೆ ಇದ್ದಾಗ ನಿನಾಸಮ್ ನ ನಾಟಕಗಳನ್ನು ನೋಡಿದ್ದೆ. ತು೦ಬಾ ಹಿಡಿಸಿತ್ತು. ನಿಮ್ಮ ವಿಮರ್ಶೆಯು ನಾಟಕ ಹೇಗಿರಬಹುದು ಎ೦ಬ ಕಲ್ಪನೆ ಕೊಟ್ಟಿತು.
ಧನ್ಯವಾದಗಳು.

ಚುಕ್ಕಿಚಿತ್ತಾರ ಹೇಳಿದರು...

ವಿಮರ್ಶೆ ಚೆನ್ನಾಗಿದೆ..
ಚಿಕ್ಕ೦ದಿನಲ್ಲಿ ನೀನಾಸ್೦ ನಾಟಕಗಳನ್ನು ನೋಡಿದ ನೆನಪಿದೆ...ಈಗಿತ್ತಲಾಗಿ ನೋಡುವ ಅವಕಾಶವಾಗಿಲ್ಲ..

Mohan Hegade ಹೇಳಿದರು...

ಗೆಳೆಯಾ,
ನಾ ಕೂಡಾ ಆ ಅದ್ಬುತ ನಾಟಕ ನೋಡಿದ್ದೇನೆ. ಫೆಬ್ರವರಿ ಎರಡನೇವಾರ ಉಡುಪಿಯ ಎಂ. ಜಿ. ಎಂ. ಕಾಲೇಜ್ನಲ್ಲಿ ಆಗಿತ್ತು. ನೀನಾಸಂ ತಂಡ ಅಂದರೆ ಒಂದು ಮಿಂಚು, ಲವಲವಿಕೆಯ ರಂಗಬೂಮಿಗೆ ಸುಂದರ ಅರ್ಥ ಕೊಡುವ ಗೆಳೆಯರ ಬಳಗ ಅದು. ಈ ನಾಟಕ ಬೇರೆ ಯಾರೇ ಮಾಡಿದ್ದರು ಬೋರು ಬರುವಂತ ತುಂಬ ಸೀರಿಯಸ್ ನಾಟಕ. ಆದರೆ ನೀನಾಸಂ ತಂಡದ ಅದ್ಬುತ ಅಬಿನಯದಿಂದ ಆ ನಾಟಕಕ್ಕೆ ಹೊಸ ಅರ್ಥ ಬಂದಿದೆ.
ದನ್ಯರಿ,

ಮೋಹನ ಹೆಗಡೆ