ಕಪ್ಪೆರಡೋ ಬಿಳಿಮೂರೋ ಯಾವುದೋ ಒಂದು ಶೃತಿಯಲ್ಲಿ ಕೊಳಲುಮಾರುವ ಹುಡುಗ "ಹೊಸ ಗಾನಾ ಬಜಾನ" ಎಂಬ ಇತ್ತೀಚಿಗಿನ ಸಿನಿಮಾ ಹಾಡು ಹೊಮ್ಮಿಸಿ ಕೊಳ್ಳುವವರಿಗೆ ಕಾಯುತ್ತಿದ್ದಾನೆ. ಸೇಲ್ ಎಂಬ ಬೋರ್ಡ್ ಹಾಕಿಕೊಂಡು ಬೊಬ್ಬಿಡುವ ವ್ಯಾಪಾರಿಗಳು. ಬಳೆ ಇನ್ನಿತರ ಸಾಮಗ್ರಿ ಕೊಳ್ಳಲು ಬಂದ ಹೆಂಗಳೆಯರ ದಂಡು. ಮಾರಿ ಚಪ್ಪರದ ಹತ್ತಿರ ಸಿಹಿತಿಂಡಿ ವ್ಯಾಪರಿಗಳಲ್ಲಿ ಕರಿದು ಹಾಗೇಯೇ ಮಾರಾಟ ವಾಗುತ್ತಿರುವ ಜಿಲೇಬಿ!. ಇದು ನಾನು ಶಿರಸಿ ಜಾತ್ರೆ ಯಲ್ಲಿ ಕಂಡ ಸನ್ನಿವೇಶಗಳು. ಜನರಲ್ಲಿ ದೇವರಮೇಲೆ ಎಷ್ಟು ಭಯ ಭಕ್ತಿ ಇದೆ ಎಂದುನೋಡುವದಾದರೆ ಇಲ್ಲಿಗೆಬರಬೇಕು.
ನಾನಾ ರೀತಿಯ ಸೇವೆ, ಹರಕೆಗಳನ್ನು ಸಲ್ಲಿಸಲು ಕರ್ನಾಟಕದ ಹೊರತಾಗಿ ದೇಶದ ಹಲವು ರಾಜ್ಯದ ಭಕ್ತಾದಿಗಳು ಮಾರಿಕಾಂಬೆಗೆ ನಡೆದುಕೊಳ್ಳುತ್ತಾರೆ. ಜಾತ್ರೆ ಎಂದರೆ ಕೇಳಬೇಕೆ? ಕಿಲೋಮೀಟರುಗಟ್ಟಲೆ ಅಂಗಡಿಸಾಲುಗಳು,ಮನೋರಂಜನಾ ಆಟಗಳು, ನಾಟಕ, ಸರ್ಕಸ್ ಯಕ್ಷಗಾನಗಳು ನೋಡಲು ಬಂದವರಿಗೆ ಖುಷಿ ಕೊಡುತ್ತಿವೆ. ನಾನು ಚಾಟಿನಲ್ಲಿ ಸಿಕ್ಕ ಸ್ನೇಹಿತರಲ್ಲಿ ಜಾತ್ರೆಯ ಪೂರ್ತಿ ಅನಾವರಣ ಮಾಡುವದಾಗಿ ಹೇಳಿಕೊಂಡಿದ್ದೆ. ಅನಿವಾರ್ಯಕಾರಣಗಳಿಂದ ಸಂಜೆಯ ಜನಜಂಗುಳಿ, ಹಾಗೂ ಕರೆಂಟ್ ಬೆಳಕಿನಲ್ಲಿ ರಾತ್ರಿಯ ಚಿತ್ರ ತೆಗೆಯುವ ಅವಕಾಶ ನನಗೆ ಮಿಸ್ ಆಗಿದೆ. ಜಾತ್ರೆಯಲ್ಲಿ ನನಗೆ ಸಿಕ್ಕ ಅರ್ಧಗಂಟೆಯಲ್ಲಿ ಇಷ್ಟನ್ನೇ ಹಂಚಿಕೊಳ್ಳುತಿದ್ದೇನೆ. ಒಟ್ಟಿನಲ್ಲಿ ಶಿರಸಿ ಪೇಟೆಯು ಮಾರಿಜಾತ್ರೆಯ ನೆಪದಲ್ಲಿ ಲಕ್ಷಾಂತರ ಜನರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದೆ.
ಸೇಲ್, ಸೇಲ್ ಸಸ್ತಾ! ಭಾರಿ ಮಾರಾಟಾ.
ನಾ ಬಾರ್ಸೊ ಪದ್ಯಾನಾ ಕೇಳೊರು ಯಾರು?
ಹೌದಪಾ,ಜಾತ್ರೆ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು .
11 ಕಾಮೆಂಟ್ಗಳು:
ಜಾತ್ರೆ ಇನ್ನೂ ಎಷ್ಟು ದಿನ ಇರುತ್ತೆ?
ಸುಬ್ರಮಣ್ಯರವರೇ,ಮಾರ್ಚ್ ಮೂರಕ್ಕೆ ಜಾತ್ರೆ ಮುಗಿಯುತ್ತದೆ.ಅಂಗಡಿ, ಆಟಗಳು ಸುಮಾರು ಎರಡು ವಾರಗಳ ತನಕ ತೆರೆದಿರುತ್ತದೆ.ಬನ್ನಿ.
nice to see....plcan u post more photos.....
ಒಂದನ್ನು ಸ್ಪಷ್ಟಪಡಿಸುತ್ತೇನೆ.. !!! ಈ ಸಲದ ಜಾತ್ರೆಯಲ್ಲಿ ಅತಿ ಹೆಚ್ಚು ಬಂದಿರುವದು ಹಾಗೂ ಸಮಾನ್ಯರ ಕಣ್ಣಿಗೆ ಗೋಚರಿಸದೇ ಎಲ್ಲವನ್ನೂ ತನ್ನಲ್ಲಿ ಸೆರೆಹಿಡಿಯುತ್ತಿರುವದು..... ಗಲ್ಲಿ-ಗಲ್ಲಿಯಲ್ಲೂ ಪೋಲೀಸರು ಅಳವಡಿಸಿಟ್ಟ cctv ಕ್ಯಾಮರಾಗಳು..!!!
ಜಗದೀಶ್,
ಒಳ್ಳೆ ಜಾತ್ರೆ ದರ್ಶನ ಮಾಡಿಸಿದಿರಿ
ಊರಿಗೆ ಹೋದ ಹಾಗೆ ಆಯಿತು
jaatre torsiddakke thank u boss:)
ಜಾತ್ರೆಗೆ ಬರಬೇಕು ಅಂತಿತ್ತು. ಆದರೆ, ಬಿಡುವೇ ಇಲ್ಲ. ಸರಿಯಾಗಿ ಜಾತ್ರೆ ಸಮಯಕ್ಕೆ ಇಲ್ಲಿ ಅಧಿವೇಶನ ಆರಂಭ ಆಯ್ತು. ಇರಲಿ, ನಿಮ್ಮ ಫೋಟೊ ನೋಡಿ ಖುಷಿ ಆಯ್ತು.
ಜಾತ್ರೆ ನೋಡದೆ ಎಷ್ಟೋ ವರ್ಷಗಳಾಯ್ತು..
ಮತ್ತೆ ಸು೦ದರ ಚಿತ್ರಗಳ ಮೂಲಕ ಜಾತ್ರೆಯ ಮಜವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
ಜಗದೀಶ್ ಅವರೇ,
ನಿಮ್ಮ ಫೋಟೋಗಳು ಚೆನ್ನಾಗಿವೆ.
ನೀವು ಕಾನಗೋಡ್ ಸಮೀಪದ ಬಾಳೆಹದ್ದದವರೋ..!?
-ಗಣೇಶ್ ಕಾಳೀಸರ
ಗಣೇಶಣ್ಣಾ ಹೌದು. ಬಾಳೆಹದ್ದ ಚವತ್ತಿ ಕಾನಗೋಡ ಸಮೀಪ ಇದೆ.
ನಮ್ಮೂರು ಶಿರಸಿಯ ಜಾತ್ರೆ ಬಗ್ಗೆ ಚೆನ್ನಾಗಿ ಬರಹ ಕೊಟ್ಟಿದ್ದೀರಿ. ಈ ವರ್ಷ ನನಗೆ ಜಾತ್ರೆಗೆ ಬರಲಾಗಲಿಲ್ಲ. ಹೋದ ಸಲದ ಜಾತ್ರೆಯಲ್ಲಿ ವಿಪರೀತ ಮಳೆ. ಆದರೂ ಓಡಾಡಿದ್ದು ತುಂಬ ಮಜಾ ಕೊಟ್ಟಿತ್ತು
ಕಾಮೆಂಟ್ ಪೋಸ್ಟ್ ಮಾಡಿ