ಗುರುವಾರ, ಏಪ್ರಿಲ್ 1, 2010

ಅಳಿಯುವ ಮುನ್ನ

ಅಳಿಯುವ ಮುನ್ನ.


ನಿನ್ನೆ ಹಾಕಿದ ಕನಸ ರಂಗೋಲಿ
ಇಂದು ಹೆದರುತಿದೆ ತನ್ನ ಬದುಕ ಕಂಡು
ಲೆಕ್ಕವಿಟ್ಟು ಪ್ರೀತಿಯಿಂದ ಚುಕ್ಕೆ ಇತ್ತು
ಮನೆಯಂಗಳದಲ್ಲಿ ಮಿನುಗಿದ್ದ ನೀನು
ಆಡುವ ಕಂದಮ್ಮನ ಓಡುವ ಮಂದಿಯ 
ಅಡಿಯಲ್ಲಿಯೇ ಸಿಕ್ಕೆ  ಅದು ಹಣೆಬರಹ.
ಹೊಳೆವ ಬಣ್ಣದಿ ನೀನ್ ಕಣ್ಸೆಳೆದು
ಗುಡಿಸುವ ಪೊರಕೆಗಂಜುವೇಕೀಗ?
ತಿಳಿ ನೀನ್ ನಿನ್ನ ಬದುಕಿನ ಪರಿಯ
ಅಳಿಗೆ ಅಂಜದೇ ಮುಂದೆ  ಬಾಳು.

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ನಿಜ,
ಬದುಕೂ ಹಾಗೆ ಅಲ್ಲವೇ

Jagadeesh Balehadda ಹೇಳಿದರು...

ಗುರುಮೂರ್ತಿಯವರೇ ,ನಮ್ಮ ಬದುಕಿಗೇ ಇದನ್ನು ಬರೆದಿದ್ದೇನೆ.ಇಲ್ಲಿ ರಂಗೋಲಿ ಒಂದು ವ್ಯಕ್ತಿಯಾಗಿ ಅದರ ಕೊನೆಯನ್ನು (ಸಾವು) ಗುಡಿಸುವ ಪೊರಕೆಗೆ ಹೋಲಿಸಲಾಗಿದೆ.

ಮನಮುಕ್ತಾ ಹೇಳಿದರು...

ಸು೦ದರ ರ೦ಗೋಲಿಯನ್ನು ಬದುಕಿಗೆ ಹೋಲಿಸಿ ಬರೆದ ಕವನ ತು೦ಬಾ ಚೆನ್ನಾಗಿದೆ.

Medha bhat ಹೇಳಿದರು...

Jagadeeshanna its truely heart touching