ಸ್ಥಳೀಯ ಹೆಸರು : ದೊಡ್ಡಪತ್ರೆ,ಸಂಬಾರ ಸೊಪ್ಪು.
ಕುಟುಂಬ : ಲ್ಯಾಮಿನೆಸಿ (laminaceae)
ಸಸ್ಯ ಶಾಸ್ತ್ರೀಯ ಹೆಸರು :ಕಾಲಿಯಸ್ ಅರೋಮ್ಯಾಟಿಕಸ್
(caleus aromaticus)
ಮೂಲ:ಭಾರತ,ಸೀಕಾಲ್ಸ ದ್ವೀಪ ಹಾಗೂ ಆಗ್ನೇಯ ಏಶಿಯಾ.
ಬಹಳ ಹಿಂದಿನ ಕಾಲದಿಂದಲೂ ಮಾನವನು ನಿಸರ್ಗದ ಸಸ್ಯ ವೈವಿಧ್ಯಗಳಲ್ಲಿ ತನ್ನ ಹಲವು ಅವಶ್ಯಕತೆಗಳನ್ನು ಪೂರೈಸಿಕೊಂಡು ಬೆಳೆದು ಬಂದಿದ್ದಾನೆ. ಇವುಗಳಲ್ಲಿ ಔಷಧ ಹಾಗೂ ಅಡುಗೆ ಇವೆರಡಕ್ಕೂ ಬಳಕೆ ಆಗುವ ಹಲವಾರು ಸಸ್ಯ ವೈವಿಧ್ಯಗಳು ನಮ್ಮ ಸುತ್ತಲಿನಲ್ಲಿ ಬಹಳಷ್ಟಿದೆ ಅವುಗಳಲ್ಲಿ ದೊಡ್ಡಪತ್ರೆಯೂ ಒಂದು.
ಅರ್ಧದಿಂದ ಎರಡು ಅಡಿ ಬೆಳೆಯುವ ದಪ್ಪನೆ ಎಲೆಯುಳ್ಳ ದೊಡ್ಡಪತ್ರೆ ಗಿಡದ ಎಲೆಯ ಅಂಚು ಗರಗಸದಂತಹ ಆಕಾರದಲ್ಲಿರುತ್ತದೆ. ಸಾಮಾನ್ಯವಾಗಿ ನೀರು ಬಸಿದು ಹೋಗುವ ಸ್ಥಳಗಳಲ್ಲಿ ಕಂಡುಬರುತ್ತದೆ..
ಅಡುಗೆ: ದೊಡ್ಡಪತ್ರೆಯ ಎಲೆಯಿಂದ ತಯಾರಿಸಿದ ಸಾಂಬಾರು, ಚಟ್ನಿ,ದೋಸೆ ,ಗೊಜ್ಜು ,ತಂಬಳಿಗಳು ರುಚಿಕರ ಅಷ್ಟೇ ಅಲ್ಲ ಆರೋಗ್ಯಕ್ಕೆ ಹಿತಕರ ಕೂಡಾ ಹೌದು. ಮಸಾಲೆ ಬೆರಸಿದ ಕಡಲೆ ಹಿಟ್ಟಿನ ಜೊತೆ ಈ ಗಿಡದ ಎಲೆಯನ್ನು ಎಣ್ಣೆಯಲ್ಲಿ ಕರಿದರೆ ಬಾಯಲ್ಲಿ ನೀರೂರಿಸುವ ಬಜೆ ಸಿದ್ದ. ಅಲ್ಲದೇ ಇದನ್ನು ಸಣ್ಣಗೆ ಹೆಚ್ಚಿದ ಈರುಳ್ಳಿಯ ಜೊತೆ ಇದರ ಎಲೆಯನ್ನು ಹೆಚ್ಚಿ ಕಡಲೆ ಹಿಟ್ಟಿನಲ್ಲಿ ಕರಿದು ಬೋಂಡಾ ಮಾಡಬಹುದು.
ಔಷಧ:ಶೀತ ನೆಗಡಿ ಕಫದ ತೊಂದರೆಗಳಲ್ಲಿ ಈ ಗಿಡದ ಎಲೆಯ ರಸವನ್ನು ಜೇನುತುಪ್ಪದ ಜೊತೆ ಬಳಸಿದಾಗ ಪರಿಣಾಮಕಾರಿ ಮನೆ ಔಷಧವಾಗಿ ಪರಿಣಾಮ ಕಂಡುಬಂದಿದೆ.
ಯಾವುದೇ ಸಮಯದಲ್ಲೂ ದೊಡ್ಡಪತ್ರೆ ಗಿಡದ ಕಾಂಡದ ಭಾಗವನ್ನು ಕುಂಡ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ತಾರಸಿ ಮನೆಗಳಲ್ಲೂ ಸುಲಭವಾಗಿ ಬೆಳಸಿಕೊಳ್ಳಬಹುದು. ಅಡುಗೆ,ಔಷಧ,ಹಾಗೂ ಅಲಂಕಾರಿಕವಾಗಿ ಬೆಳೆಸಿಕೊಳ್ಳಲು ಸುಲಭವಾಗಿ ಬೆಳೆಯುವ ಅಪರೂದ ಗಿಡವಿದು.

ಜಗದೀಶ ಬಾಳೆಹದ್ದ.
(ಉದಯವಾಣಿ ದಿನಪತ್ರಿಕೆಯ ಕೃಷಿಸಂಪದ ಪುರವಣಿಯಲ್ಲಿ ಪ್ರಕಟವಾದ ಲೇಖನ.)
2 ಕಾಮೆಂಟ್ಗಳು:
liked...
good info..
ಕಾಮೆಂಟ್ ಪೋಸ್ಟ್ ಮಾಡಿ