ಶುಕ್ರವಾರ, ಜೂನ್ 10, 2011

ಮಾವಿನಕಾಯಿಯ ಪಾರಂಪರಿಕ ಮೌಲ್ಯವರ್ಧನೆ.


ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲುಗಳಲ್ಲಿ
ಪಾರಂಪರಿಕವಾಗಿ ಬೆಳೆದು ಬಂದ ಮಾವಿನಮರಗಳು ತಮ್ಮದೇ ಆದ ಹಲವಾರು ವಿಷೇಶತೆ ಹೊಂದಿದೆ . ಸಾಸ್ಮೆಮಾವು,ಅಪ್ಪೆಮಾವು,ವರಟೇ ಗಿಡುಗ, ಕರಿ ಈಷಾಢ  ಹೀಗೆ ಹಲವಾರು ತಳಿಯ ಮಾವಿನ ಮರಗಳನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಈ ವಿಡಿಯೋದಲ್ಲಿ  ತಲತಲಾಂತರದಿಂದ ಹವ್ಯಕ ಸಮುದಾಯದವರು ಮುಂದುವರಿಸಿಕೊಂಡು ಬಂದಂತಹ  ಕೊಸಗಾಯಿ ಎಂಬ  ಬಗೆಯ ಮಾವಿನ ಕಾಯಿಯ ಸಂಸ್ಕರಣೆಯ ವಿಧಾನವನ್ನುನೀವು ನೋಡಲಿದ್ದೀರಿ.ಕೊಸಗಾಯಿ ತಳಿಯ ಮಾವಿನಮರವು ಇಲ್ಲಿನ ಊರು ಕೇರಿಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದರ ಕಾಯನ್ನು ಒಮ್ಮೆ ಬೇಯಿಸಿ ಶೇಖರಿಸಿ ಇಟ್ಟುಕೊಂಡಲ್ಲಿ ವರ್ಷಗಳತನಕ ಮಾವಿನ ಕಾಯಿಯ ಬಗೆ ಬಗೆಯ ಅಡುಗೆಯನ್ನು ಮಾಡಿಕೊಳ್ಳಬಹುದು.ಮಲೆನಾಡ ವೈವಿಧ್ಯವನ್ನು ತೋರಿಸುವಲ್ಲಿ ಒಂದು ಚಿಕ್ಕ ಯತ್ನವಿದು.
ಜಗದೀಶ. ಬಾಳೆಹದ್ದ.

3 ಕಾಮೆಂಟ್‌ಗಳು:

V.R.BHAT ಹೇಳಿದರು...

ಈಗೀಗ ಮಾವಿನಕಾಯಿ ಕಡಗಾಯಿ, ಕೊಸಗಾಯಿ ಇವೆಲ್ಲಾ ನಿಧಾನವಾಗಿ ಮರೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ನಮ್ಮ ಹಳ್ಳಿಗಳಲ್ಲೂ ಉಪ್ಪಿನಕಾಯಿಗೋ ತಂಭ್ಳಿಗೋ ಮಾವಿನಕಾಯಿ ಮತ್ತು ಮಾವಿನಕಾಯಿ ಜನ್ಯ ಪದಾರ್ಥಗಳನ್ನು ಕೊಳ್ಳುವ ಪರಿಸ್ಥಿತಿ ಬರಬಹುದು. ಅಂತೂ ಕೆಲವುಕಡೆಗಾದರೂ ಹಳೆಯ ಸಂಪ್ರದಾಯ ಮುಂದುವರಿದು ಇನ್ನೂ ನಡೆಯುತ್ತಿದೆ ಎಂಬುದು ಸಂತೋಷದ ವಿಷಯ, ಶುಭಕಾಮನೆಗಳು.

Recipe world ಹೇಳಿದರು...

ಮಾವಿನಕಾಯಿ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಪ್ಪದು ಮಾವಿನಹಣ್ಣು ಮತ್ತೆ ಉಪ್ಪಿನಕಾಯಿ ಎರಡೆಯಾ..ಮಾವಿನಕಾಯಿಯ ಬಗ್ಗೆ ಶಾರ್ಟ್ ಅಂಡ್ ಸ್ವೀಟ್ ಆಗಿ ಉಪಯುಕ್ತ ಮಾಹಿತಿ ಇದ್ರಿಂದ ಸಿಕ್ತು.

ವಿ.ರಾ.ಹೆ. ಹೇಳಿದರು...

ವಿಡಿಯೋ ಚೆನ್ನಾಗಿ ಮಾಡಿದ್ದೀರಿ. ಧನ್ಯವಾದಗಳು..