ಸುಮಾರು ಆರು ದಶಕದ ಹಿಂದೆ ದೊಂದಿ ಅಥವಾ ಹಿಲಾಲು ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನವು ನೆಡೆಯುತ್ತಿತ್ತು.ತರುವಾಯ ಹೊಸ ಹೊಸ ಸಂಶೋಧನೆಗೆ ರಂಗಸ್ಥಳವು ಒಗ್ಗಿಕೊಂಡು ಬೆಳಕಿನ ಆಕರಕ್ಕೆ ಬಾಡಿಗೆಗೆ ತಂದ ಸೀಮೆ ಎಣ್ಣೆಯ ಗ್ಯಾಸ್ ಲೈಟ್ (ಗ್ಯಾಸೋಲಿನ್ ದೀಪ) , ನಂತರ ವಿದ್ಯುತ್ ಶಕ್ತಿಯು ಬಳಕೆಯಲ್ಲಿ ಬಂದವು.
ಪೂರ್ವದಲ್ಲಿ ನೆಡೆಯುತ್ತಿದಂತಹ ಹಿಲಾಲು ಬೆಳಕಿನಲ್ಲಿ ನೆಡೆಯುತ್ತಿದಂತಹ ಯಕ್ಷಗಾನವು ಇತ್ತಿಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಕತ್ಲೆಹಳ್ಲದಲ್ಲಿ ಜರುಗಿತು.{ಇಲ್ಲಿ ಅರಿವೆಯನ್ನು ಚಂಡಿನ ಆಕಾರದಲ್ಲಿ ಸುತ್ತಿ ಅದನ್ನು ಕಬ್ಬಿಣದ ಬಂಡಿಯ ಮೇಲೆ ಇಟ್ಟು ಎಣ್ಣೆಯನ್ನು ಆಗಾಗ ಹಾಕುತ್ತಾ ಬೆಳಕನ್ನು ಮಾಡಿದ್ದಾರೆ}ಸಾಂಪ್ರದಾಯ ಬದ್ಧವಾಗಿ ಕೋಂಡಗಿ ವೇಷ, ಪೀಟಿಕಾ ಸ್ತ್ರೀ ವೇಷ, ಹಾಗೂ ಬಾಲಗೋಪಾಲವೇಷಗಳಿಂದ ಶುರುವಾದ ."ಕಾಲನೇಮಿ ಕಾಳಗ"ವೆಂಬ ಯಕ್ಷಗಾನವು ಹೊಸ ತನಕ್ಕೆ ಹೊಂದಿಕೊಂಡಂತಹ ಪ್ರೇಕ್ಷಕರಿಗೆ ಒಂದು ಐತಿಹಾಸಿಕ ಹಿನ್ನೂಟಕ್ಕೆ ಕೊಂಡೊಯ್ದು ತನ್ಮೂಲಕ ವಿಶಿಷ್ಟವಾದ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
2 ಕಾಮೆಂಟ್ಗಳು:
ಸೂಪರ್ಬ್!
ಒಳ್ಳೇದಿತ್ತು
ಕಾಮೆಂಟ್ ಪೋಸ್ಟ್ ಮಾಡಿ