ಮಂಗಳವಾರ, ಜನವರಿ 12, 2010

ಸಂಕ್ರಾಂತಿ ಬರುತ್ತಿದೆ



ಸಂಕ್ರಾಂತಿ ರೈತರ ಹಬ್ಬ. ವರ್ಷವಿಡೀಶ್ರಮಪಟ್ಟು ಬೆಳೆದ ಬೆಳೆಯು ಕೈಗೆ ಬರುವ ಪರ್ವಕಾಲ. ಈ ಬಾರಿ  ಮಳೆಯು ಉತ್ತರ ಕರ್ನಾಟಕದಲ್ಲಿ ನೆರೆ ತಂದು ಹಾವಳಿ ಎಬ್ಬಿಸಿದ ನಂತರ ಈಗ ಮತ್ತೆ ಹೊಯ್ಯುತ್ತಾ ಪುನಃ  ಪುನಃ  ಬರೆ ಹಾಕುತ್ತಲೇ ಇದೆ. ಪರಿಣಾಮವಾಗಿ ಉತ್ತರ ಕನ್ನಡದಲ್ಲಿ ಭತ್ತದಗದ್ದೆ ಮತ್ತು ಕೊಯ್ದು ಸಂಸ್ಕರಣೆ ಆಗುತ್ತಿದ್ದ ಭತ್ತ,ಹುಲ್ಲು,ಅಟ್ಟದಲ್ಲಿ ಒಣಹಾಕಿದ ಅಡಿಕೆ ಫಸಲು ಈಗಾಗಲೇ  ಹಾಳಾಗಿದೆ.ರೈತರ ಬದುಕು ಏರಿದ ಬೆಲೆ ಮತ್ತು ಕೃಷಿ ಕಾರ್ಮಿಕರ ಕೊರತೆಯ ನಡುವೆ ಕಂಗಾಲಾಗಿದೆ.ಬದಲಾದ ಈಗಿನ ಕೃಷಿಕಾರ್ಮಿಕ ಜನರ ಮನಸ್ಥಿತಿ ನೋಡಿದ ಹಳಬರು ಕೃಷಿ ಮುಂದುವರಿಸಿಕೊಂಡು ಹೋಗುವದು ಕಷ್ಟ ಎನ್ನುತ್ತಿದ್ದಾರೆ.ಕೃಷಿಕರ ಮಕ್ಕಳು ವ್ಯವಸಾಯ ಸಾಕಪ್ಪಾ .ಇದರ ಉಸಾಬರಿ ಬೇಡ ಎಂದೆನಿಸುವಷ್ಟರ ಮನ ಸ್ಥಿತಿಗೆ ತಲುಪುತ್ತಿದ್ದಾರೆ. ಇದು ನಿಜಕ್ಕೂ ದುರಂತ. ಈಗ  ಸಂಕ್ರಾಂತಿಯ ಸಂಭ್ರಮವನ್ನು ಮಳೆಯ ಕಸಿದುಕೊಂಡಿದೆ.ಭರವಸೆಯ ದಿನಗಳು ಬಂದೇಬರುತ್ತದೆ ಎಂಬ ನಿರೀಕ್ಷೆಯಲ್ಲಿ  ಎಂದಿನಂತೆ ರೈತ ತನ್ನಕಾರ್ಯದಲ್ಲಿ ಮಗ್ನನಾಗಿದ್ದಾನೆ.ಎಲ್ಲರಿಗೂ ಮುಂದೆ ಒಳ್ಳೆಯ ದಿನ ಬರಲಿ.ರೈತನ ಉಳುಮೆ ಆನಂದದಾಯಕವಾಗಲಿ.  ಬರುವ ಸಂಕ್ರಾಂತಿಯುಎಲ್ಲರಿಗೂ ಒಳಿತು ಉಂಟುಮಾಡಲಿ. ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.



     *ಚಿತ್ರ ಅರುಣೋದಯ.   
       ನವಿಲುಗುಡ್ಡ (ಶಿವಮೊಗ್ಗ)





ಮಂಗಳವಾರ, ಡಿಸೆಂಬರ್ 29, 2009

**ನಿ-ವೇದನೆ**

ಇಲ್ಲಿ ಹುಡುಗನು ತನ್ನ ಪ್ರೇಮದ ಅಳಲನ್ನು ಪ್ರೇಯಸಿಯೊಂದಿಗೆ ತೋಡಿಕೊಳ್ಳಲು ಹನಿಸಾಲಿಗೆ ಮೊರೆಹೋಗಿದ್ದಾನೆ.
ಸಂದರ್ಭ: ದಿನಾಲೂ ದಾರಿಯ ಮೇಲೆ ಎದುರಾಗುವ ಆ ಹುಡುಗಿಯ ಕಂಡಾಗ ಆ ದಿನ ಎನೋ ಒಂಥರಾ ಅನಿಸಿಬಿಟ್ಟಿತು.ಇಲ್ಲ ಹುಡುಗನಿಗೆ ತಡೆಯಲಾಗುತ್ತಿಲ್ಲ. ಬಹಳ ದಿನಗಳಿಂದ ತನ್ನೊಳಗೆ ಅದುಮಿಟ್ಟುಕೊಂಡ ಭಾವನೆ ವ್ಯಕ್ತಪಡಿಸಲು ಆತ ಕಾಯುತ್ತಿದ್ದಾನೆ.ಇಂದು ಆ ದಿನ ಬಂದಿದೆ.ಎಂದಿನಂತೆ ದಾರಿಯಲ್ಲಿ ಮತ್ತೆ ಎದುರಾಗಿ ತನ್ನ ನೋಡಿ ಮುಗುಳ್ನಕ್ಕಾಗ ಈ ಸಾಲನ್ನು ಹುಡುಗಿಗೆ ಹೇಳಲು ಕಾದು ನಿಂತಿದ್ದಾನೆ.

**ನಿ-ವೇದನೆ**


...ನಿನ್ನ ಹೃದಯದ ಹರಿವಿನಲ್ಲಿ ನಾನು
ಪ್ರೇಮದ ಹಾಯಿದೋಣಿಯ ಸವಾರ
ತೆಲಿಸುವೆಯೋ ಮುಳುಗಿಸುವೆಯೋ
ಅದು ನಿನ್ನ ಮನದಲೆಗೆ ಬಿಟ್ಟ ವಿಚಾರ..

ಭಾನುವಾರ, ನವೆಂಬರ್ 8, 2009

ಹೂ ಮಾತಾಡಲಿಲ್ಲ...


ಮೊನ್ನೆ ದಾರಿಅಂಚಿನಲ್ಲಿ ಹೋಗುತ್ತಿದ್ದಾಗ ಸಣ್ಣಗೆ ಯಾರೋ ಕರೆದಂತಾಯಿತು.ತಿರುಗಿ ನೋಡಿದರೆ ಹೂವು!.ನನ್ನ ಖುಷಿಗೆ ಪಾರವೇ ಇಲ್ಲದಾಯಿತು. ಒಂದು ಹೂ ನನ್ನ ಕರೆದಾಗ ನಾ ಸುಮ್ಮನಿರಲು ಸಾಧ್ಯವೇ? ಅದೂ ಕೈಯಲ್ಲಿ ಕ್ಯಾಮರಾ ಇರುವಾಗ.ಹೂವನ್ನು ಪ್ರೀತಿಯಿಂದ ಮುಟ್ಟಿದೆ ಅದು ನಕ್ಕಿತು .ಆ ಕ್ಷಣಕ್ಕೆ ಬೀಸಿದ ಬಿಸಿಗಾಳಿಗೆ ಅಲ್ಲಾಡಿದರೂ ಸ್ವಲ್ಪಹೊತ್ತಿಗೆ ಸಾವರಿಸಿಕೊಂಡು ಮಾತನಾಡಲು ಶುರುಮಾಡಿತು.ಇಬ್ಬರೂ ತುಂಬಾ ಮಾತನಾಡಿದೆವು.ಕಷ್ಟಸುಖ ಹಂಚಿಕೊಡೆವು.ಇಬ್ಬರಿಗೂ ಕಾಡುತ್ತಿದ್ದ ಒಂಟಿತನ ಕೆಲ ಸಮಯ ದೂರವಾಯಿತು.

ನಿನಗೆ ಏನು ಇಷ್ಟಅಂತ ಕೇಳಿದೆ ಪುಟ್ಟ ಮಕ್ಕಳು ವಾಲಾಡುತ್ತಾ ನನ್ನಬಳಿ ಬಂದು ನನ್ನ ಮೊಗ್ಗು ಹಾಗೂ ಹೂಗಳನ್ನುಹರಿಯುವಾಗ ಪರಮಾನಂದ ವಾದರೆ ಆ ಸಮಯದಲ್ಲಿ ಹೂ ಅರಳಲು ನಾನೇ ಕಾರಣ, ಅದು ನನ್ನ ಗಿಡ ಎನ್ನುವ ಅವರ ತಾಯಿ ಮಗುವನ್ನು ಎಳೆದೊಯ್ಯುವಾಗ ತನಗೆ ದುಃಖ ಆಗುವದು ಎಂದಿತು.ಆ ಹೊತ್ತಿನಲ್ಲಿ ಫೋಟೊತೆಗೆಯಲು ಶುರುಮಾಡಿದೆ ಪಾಪ ಹೂ flashlight ಗೆ ಬೆಚ್ಚಿತು.ಪ್ರೀತಿಯಿಂದ ಮುಟ್ಟಿದೆ ಮತ್ತೆ ನಕ್ಕಳು!ನಾ ಹೇಳಿದೆ ನೀನು ಹಿಂದಿನಿಂದ ನೋಡಿದರೂ ಸುಂದರವಾಗಿದ್ದಿಯಾ ಎನ್ನುತ್ತಾ ಫೋಟೊತೆಗೆದೆ ಹೂ ನಾಚಿತು.


ಕಪ್ಪು ಬಣ್ಣದ ಗುಂಗಾಡು (ದುಂಬಿ) ಬಗ್ಗೆ ಕೇಳಿದೆ ಬಂದಾಗ ಭಯವೇ ಜಾಸ್ತಿ ಅದೋ ಅದರ ರೆಕ್ಕೆಬಡಿತದ ಸದ್ದು ಅಬ್ಬಾ ಎಂದಿತು.ಪಾತರಗಿತ್ತಿ ಬಂದಾಗ ಅದು ಕೊಡುವ ಕಚಗುಳಿ, ಆಗ ಆಗುವ ಸಂತೋಷ ಅದರ ಭಾಷೆಯಲ್ಲಿ ಹೇಳಿತು ಕೆಲವು ಮಾತ್ರ ಅರ್ಥವಾದವು.ಕೆಲ ಹೊತ್ತು ಹೂ ಜೊತೆಮಾತನಾಡುವ ಅಪರೂಪದ ಭಾಗ್ಯನನ್ನದಾಯಿತು.
ಸ್ನೇಹಿತರೇ ತುಂಬಬೇಜಾರಾಗುತ್ತಿದೆ. ಆ ಹೂವು ನಾಳೆ ಅಷ್ಟರಲ್ಲಿ ಬಾಡಿಹೋಗುವದರ ಜೊತೆಗೆ ಈ ಮಳೆಗಾಲದ ಬದುಕು ಮುಗಿಸುತ್ತದೆ. ಬೀಳ್ಕೊಡುವಾಗ ಹೂವಿಗೆ ಮುತ್ತಕೊಟ್ಟೆ.ಜೊತೆಗೆ ಹೇಳಿದೆ ಮುಂದಿನ ಮಳೆಗಾಲಕ್ಕೆ ಸಾವಿರ ಸಂಖ್ಯೆಯಲ್ಲಿಸಾವಿರದೇ ಹುಟ್ಟಿಬಾ. ನಾ ನಿನ್ನಗೌರವಿಸುತ್ತೆನೆ. ನಿನಗೆ ವಂದಿಸುತ್ತೇನೆ ಯಾಕೆ ಗೊತ್ತೆ? ನಿನ್ನನ್ನು ಎಲ್ಲೇ ಹಾಕಿದರೂ ನಿನ್ನ ಪರಿಮಳ, ಸೌಂದರ್ಯ ಕೆಡದು. ಹೂವೇ ನಿನ್ನ ಎತ್ತರ ಅಪರಿಮಿತ. ನೀ ಸಣ್ಣವನಲ್ಲ,ಸಣ್ಣವನಲ್ಲಎಂದೆ. ಹೂ ಮಾತಾಡಲಿಲ್ಲ...

ಸೋಮವಾರ, ಅಕ್ಟೋಬರ್ 19, 2009

ಕಪ್ಪು+ ಬಿಳಪು=ಹೊಸಹೊಳಪು.









ಕಪ್ಪು ಬಿಳಪು ಚಿತ್ರಗಳೇ ಹೀಗೆ ಯಾವಾಗಲೂ ತಮ್ಮತನ ಹೊಂದುಕೊಂಡಿರುತ್ತದೆ.ಇಲ್ಲಿ ನೆರಳುಬೆಳಕಿನಾಟ ಚನ್ನಾಗಿ ಆಡಬಹುದು.ಅಲ್ಲದೇ ಭಾವನೆ,ವಿಷಾದಗಳನ್ನು ಗಾಢವಾಗಿ ತೋರಿಸಬಹುದು.ಬಣ್ಣದ ಚಿತ್ರದ ಮುಂದೆ ಇವು ತಮ್ಮದೇ ಆದ ಒಂದು ಚೌಕಟ್ಟಿನಲ್ಲಿ ಅಜರಾಮರವಾಗಿದೆ.ಜೊತೆಗೆ ಅದರದೇ ಆದ ಅಭಿಮಾನಿ ಬಳಗಹೊಂದಿದೆ.ನಮ್ಮೊಳಗೆ ಹಂಚಿಕೊಳ್ಳಲು ಚಿತ್ರಗಳನ್ನು ಹಾಕಿದ್ದೇನೆ.ನೋಡಿ.ಅಭಿಪ್ರಾಯತಿಳಿಸಿ.

ಸೋಮವಾರ, ಸೆಪ್ಟೆಂಬರ್ 28, 2009

ಎಚ್ಚರಾ..



ಎಚ್ಚರಾ..
ಕಾಡಂಚಿನ ಗಿಡಗಂಟಿಗಳಲ್ಲಿ
ಬಳುಕುವ ನಡನಡುವಿನಲ್ಲಿ
ಹೊಳೆವ ಕಾಮನಬಿಲ್ಲತೆರದಿ
ಮೈ ಮನಮರೆತು ತೇಲಾಡುವ
ಜೀವ ರಾಶಿಗೆ ಕಾದು ಕುಳಿತಿದೆ.!

ಮಂಗಳವಾರ, ಸೆಪ್ಟೆಂಬರ್ 1, 2009

ಮಳೆನಿಂತಮೇಲೆ...












ಮಳೆನಿಂತಮೇಲೆ....


ನೀರಾವಿ ಒಂದಾಗಿ, ಮೋಡವಾಗಿ ಕರಗಿ ಹನಿಯುವ ಮಳೆಗಾಲವೇ ಒಂದು ಅದ್ಭುತ! ಮಳೆಗಾಗಿ ಕಾದು,ಬಳಲಿ ಬೆಂಡಾದ ಪೃಕೃತಿ ಈಗ ಮಲೆನಾಡಿನಲ್ಲಿ ನೆನದಿದ್ದಾಳೆ. ಹಸಿರ ಹೊದಿಕೆ ಹಬ್ಬುತಿದೆ. ಬಳ್ಳಿ ಸಿಕ್ಕಸಿಕ್ಕ ಆಸರೆಯನ್ನು ಬಳಸಿ ಬಳುಕುತ್ತಿದ್ದಾಳೆ.ಎಂದೋ ಬಿದ್ದ ಕಾಡು ಬೀಜಗಳು ಮೊಳೆಯತೊಡಗಿವೆ. ಕೆರೆ ತೊರೆ ತುಂಬಿ ತೊನೆಯುತ್ತಿದೆ. ಈ ಸಮಯದಲ್ಲಿ ಎಲ್ಲಿ ನೊಡಿದರೂ ಹಸಿ ಹಸಿ ವಾತಾವರಣ. ಮಳೆನಿಂತರೂ ಮರದಎಲೆಗಳಲ್ಲಿ,ಹೂಗಿಡಗಳಲ್ಲಿ ಮೊದಲೇ ಬಿದ್ದ ಮಳೆಯಹನಿಗಳು ಚಿಟಪಟ ಸದ್ದುಮಡುತ್ತಾ, ಬೀಸುವ ಗಾಳಿಗೆ ಜಾರುತ್ತಿರುವ ಸೊಬಗು ವರ್ಣನಾತೀತ. ಮಳೆಹನಿಗಳಿಗೋ ಕೆಳಕ್ಕೆ ಬಿದ್ದು ತೊರೆಯಾಗಿ,ಹಳ್ಳವಾಗಿ,ಭೊರ್ಗೆರೆವನದಿಯಾಗಿ ಸಮುದ್ರರಾಜನ ಸೇರುವ ತವಕ!. ಹನಿಗಳಿಗೆ ಜಾರಲು ಸಹಕರಿಸಲು ಮಂದಗಮನೆಯಂತೆ ಬೀಸುವ ತಂಗಾಳಿಯ ಆಪ್ತತೆಯ ನೆರವಿದೆ. ಇಲ್ಲಿಸೊಬಗಿದೆ !ಈ ನಡುವೆ ದಿನ ನಿತ್ಯದ ಜಂಜಾಟವನ್ನು ಒಮ್ಮೆ ಬದಿಗೊತ್ತಿ,ಗಿಡಗಂಟಿಗಳ ನಡುವೆ ಹೊಕ್ಕಾಗ ಕಂಡು ಬಂದ ಚಿತ್ರ ಚಿತ್ತಾರವಿದು.




ಗುರುವಾರ, ಆಗಸ್ಟ್ 13, 2009


ದೇಶಪ್ರೇಮ

ಪ್ರತಿಬಾರಿ ಅಗಸ್ಟ ೧೫ ಬಂದೊಡನೆ ಒಂದು ಘಟನೆ ನೆನಪಾಗುತ್ತದೆ. ಬಹಳ ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಮರುದಿನ ನಾಗರಪಂಚಮಿ ಹಬ್ಬವಿತ್ತು.ಅದರ ಮಾರನೆದಿನ ಭಾನುವಾರ. ಸೊಮವಾರ ಒಂದು ರಜೆ ಹಾಕಿದರೆ ಒಟ್ಟೂ ೪ ದಿನದ ರಜೆ.
ಅಂದು ಶಾಲಾ ಮಕ್ಕಳು ಉತ್ಸಾಹದಿಂದ ಧ್ವಜಾರೋಹಣಕ್ಕೆ ತಯಾರಾಗುತ್ತಿದಂತೆ ಒಂದು ಟ್ರಕ್ ರಸ್ತೆಮೇಲೆ ನಿಂತಿತು. ಚಾಲಕ,ಸಹಾಯಕ ಇಬ್ಬರೂ ಗಾಡಿಯಿಂದ ಇಳಿದರು.ಜನಗಣಮನ ಹೇಳಿ ಮಕ್ಕಳೊಂದಿಗೆ ಬೆರತ ಟ್ರಕ್ ನವರು ಕರ್ತವ್ಯದಲ್ಲಿ ದೇಶಪ್ರೇಮ ಮೆರದರೆ, ಬ್ಯಾಗು, ಲಗೇಜು ಹೊತ್ತುಕೊಂಡ ಕರ್ತವ್ಯಕ್ಕೆ ರಜೆ ಹಾಕಿದ ಪ್ರವಾಸಿಗರ ಕಾರುಗಳು ಯಾವುದೇ ಪರಿವೆಇಲ್ಲದೇ ಸಾಗುತ್ತಲೇ ಇದ್ದವು. ಕೆಲ ನಿಮಿಷ ನಿಲ್ಲುವ ತಾಳ್ಮೆಕೂಡಾ ಅವರಲ್ಲಿ ಕಂಡುಬರಲಿಲ್ಲ. ವಾರದ ರಜೆ ಇಲ್ಲದೇ ಎಂದೋ ಒಮ್ಮೆ ಮನೆಯನ್ನು, ಬಂಧುಬಳಗ ಕಾಣುವ ಇವರ ದೇಶಪ್ರೇಮ ಅನುಕರಣಿಯ.