ಮಂಗಳವಾರ, ಜನವರಿ 3, 2012

ಕಾಲಚಕ್ರ ತಿರುಗುತಿದೆ

ಕಳೆದ ಸಾಲಿನಲ್ಲಿ ಮೂಡಿಬಂದ ರಾಕ್ ಸ್ಟಾರ್ ಸಿನಿಮಾ ಎಷ್ಟು ಹಣಗಳಿಸಿತೋ ನನಗೆ ಗೊತ್ತಿಲ್ಲ ಆದರೆ ಆ ಸಿನೆಮಾ  ದಶಕಗಳ ಹಿಂದಿನ ಸಿನೆಮಾಗಳ ಬ್ಯಾನರ್ ಅನ್ನು ನೆನಪಿಸಿದ್ದು ಸತ್ಯ. ಆಧುನಿಕ ಯಂತ್ರೋಪಕರಣಗಳು ಕೆಲಸಗಳನ್ನು ಹಗುರ ಮಾಡುತ್ತವೆ .ಹಳೆಯ ತಲೆಮಾರಿನ ಕೆಲ ಕೆಲಸಗಾರರಿಗೆ ಅಂದರೆ ಚಿತ್ರ ಕಲಾವಿದರು ಸಂಗೀತ ಕಲಾವಿದರಿಗೆ  ಹೊಸ ನಮೂನೆಯ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ತುಸು ಕಂಗೆಡಿಸಲು ಸಾಕು. ವಿಷಯ ಮತ್ತೇನಲ್ಲ ಈಗ ಮತ್ತೆ ಹಳೆಯ ಜಮಾನದ್ದು   ಫ್ಯಾಶನ್ ಆಗುತ್ತಿದೆ.ಫ್ಯಾಶನ್ ಅನ್ನುವದಕ್ಕಿತಲೂ ಹೊಸ ಟ್ರೆಂಡ್ ಅದರೆ ತಪ್ಪೇನಿಲ್ಲ.





ಹಳೆಯ ಕಾಲದ ಬ್ಯಾನರ್ಮುಕದ್ದರ್ ಕಾ ಸಿಕಂದರ್  ಒಮ್ಮೆ  ನೋಡಿ ಆ ಕಲಾವಿದನ ಕಲ್ಪನೆಗೆ ತಲೆದೂಗಲೇ  ಬೇಕು.ಇಲ್ಲಿ  ಆ ನಾಲ್ಕು ಜನರ ನಡುವೆ ನಿರ್ಭೀಡೆಯಿಂದ ಬೈಕ್ ಚಲಾಯಿಸುತ್ತಿರುವ ಹೀರೋ, ಆ ಸಿನೆಮಾದ ಹೆಸರು  ಆದು ಮೂಡಿಬಂದ ರೀತಿ ಎನೋ ಹೊಸತನ ಇಂದಿಗೂ ಕಂಡುಬರುತ್ತದೆ.










 ಅದೇನೆ ಇರಲಿ ನನಗನಿಸಿದಂತೆ ರಾಕ್ ಸ್ಟಾರ್ ನಿಂದ ಹುಟ್ಟಿದ
ಹೊಸ ಬ್ಯಾನರ್  ಟ್ರೆಂಡ್  ಇನ್ನು ಕೆಲ ವರ್ಷ ಖಾಯಂ ಆಗಿ ಉಳಿಯ ಬಹುದು. ಇನ್ನೂ ಕನ್ನಡದವರು ಇದರ ಬಗ್ಗೆ ಯೋಚಿಸಿದಂತೆ ಕಂಡು ಬಂದಿಲ್ಲ.ರಾಕ್ ಸ್ಟಾರ್ ನಂತರ ಡರ್ಟಿ ಪಿಚ್ಚರ್ ಹಾಗೂ ಜೂನ್ ೧೫  ೨೦೧೨ ರಂದು ಬಿಡುಗಡೆ ಆಗಲಿರುವ ರೌಡಿ ರಾಥೋರ್ ಸಿನೆಮಾ ಕೂಡಾ ಆ ಶೈಲಿಯ ಬ್ಯಾನರಿನಲ್ಲಿಯೇ  ಮೂಡಿ ಬಂದಿದೆ. 







                                                             (ರೌಡಿ ರಾಥೋರ್)


ಇನ್ನು ಮುಂದೆ ಜನರಿಗೆ ಮಾಲ್ ಮಲ್ಟಿಪ್ಲೆಕ್ಸ್ ಗಳು ಜನರಗೆ  ಬೇಜಾರಾಗಿ ಮತ್ತೆ ಹಳೆ ಕಾಲದ ಟೆಂಟ್ ಸಿನೆಮಾ ಶೋ ಶಹರದಲ್ಲಿ   ಶುರುವಾದರೆ ಆಶ್ಚರ್ಯವಿಲ್ಲ!.

ಭಾನುವಾರ, ಆಗಸ್ಟ್ 28, 2011

ಮೈದಾನದಲ್ಲಿ





 ಮೈದಾನದಲ್ಲಿ


ಅಣ್ಣನ ಕೂಗಿಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಜನ ಹಾಜರು
ಬಾಯೇ ಬಿಡದ ಕೋಟಿ ಹಣಕ್ಕೆ ಹರಾಜಾದ ಕ್ರಿ'ಕೆಟ್ಟಿಗ'ರು. 


ಒಮ್ಮೆ ಕೂಗಿದರೂ ಸಾಕಿತ್ತು ಸಚಿನ್ನು , ಧೋನಿ
ರಾಮಲೀಲಾ ದಲ್ಲಿ ಮೊಳಗುತ್ತಿತ್ತು ಇನ್ನಷ್ಟು ದನಿ


 ಕ್ರಿಕೆಟಿಗರೇ ಇನ್ನಾದರೂ ದೇಶದ ಹಿತಕ್ಕೆ ಎದ್ದು ನಿಲ್ಲಿ
ನಿಮ್ಮ ಆರಾಧಿಸುವ ಕೋಟಿ  ಮನವನ್ನು  ಗೆಲ್ಲಿ


ಹೀಗಿದ್ದರೂ  ಕೆಲವರಿಗೆ  ನೀವೇ ಹೀರೋಗಳು
ನಿಮ್ಮನ್ನೂ ಆಡಿಸುತ್ತಿದೆಯೇ ಕಾಣದ ಕೈಯ ನೆರಳು?.


ನಿಮ್ಮನೆಬ್ಬಿಸಲು ಬರಬೇಕೆ ಇನ್ನೂ ಬರಬೇಕೇ ಅಣ್ಣಾ?
ದೇಶಕ್ಕೇ ಬೆಳಗಾಗಿ ಹೋಗಿದೆ  ಈಗಲಾದರೂ ನೀವು ಏಳಿರಣ್ಣಾ.

ಶುಕ್ರವಾರ, ಜೂನ್ 10, 2011

ಮಾವಿನಕಾಯಿಯ ಪಾರಂಪರಿಕ ಮೌಲ್ಯವರ್ಧನೆ.


ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲುಗಳಲ್ಲಿ
ಪಾರಂಪರಿಕವಾಗಿ ಬೆಳೆದು ಬಂದ ಮಾವಿನಮರಗಳು ತಮ್ಮದೇ ಆದ ಹಲವಾರು ವಿಷೇಶತೆ ಹೊಂದಿದೆ . ಸಾಸ್ಮೆಮಾವು,ಅಪ್ಪೆಮಾವು,ವರಟೇ ಗಿಡುಗ, ಕರಿ ಈಷಾಢ  ಹೀಗೆ ಹಲವಾರು ತಳಿಯ ಮಾವಿನ ಮರಗಳನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಈ ವಿಡಿಯೋದಲ್ಲಿ  ತಲತಲಾಂತರದಿಂದ ಹವ್ಯಕ ಸಮುದಾಯದವರು ಮುಂದುವರಿಸಿಕೊಂಡು ಬಂದಂತಹ  ಕೊಸಗಾಯಿ ಎಂಬ  ಬಗೆಯ ಮಾವಿನ ಕಾಯಿಯ ಸಂಸ್ಕರಣೆಯ ವಿಧಾನವನ್ನುನೀವು ನೋಡಲಿದ್ದೀರಿ.ಕೊಸಗಾಯಿ ತಳಿಯ ಮಾವಿನಮರವು ಇಲ್ಲಿನ ಊರು ಕೇರಿಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದರ ಕಾಯನ್ನು ಒಮ್ಮೆ ಬೇಯಿಸಿ ಶೇಖರಿಸಿ ಇಟ್ಟುಕೊಂಡಲ್ಲಿ ವರ್ಷಗಳತನಕ ಮಾವಿನ ಕಾಯಿಯ ಬಗೆ ಬಗೆಯ ಅಡುಗೆಯನ್ನು ಮಾಡಿಕೊಳ್ಳಬಹುದು.ಮಲೆನಾಡ ವೈವಿಧ್ಯವನ್ನು ತೋರಿಸುವಲ್ಲಿ ಒಂದು ಚಿಕ್ಕ ಯತ್ನವಿದು.
ಜಗದೀಶ. ಬಾಳೆಹದ್ದ.

ಬುಧವಾರ, ಜೂನ್ 1, 2011

ಇನ್ನು ಮೂರೇ ದಿನಕ್ಕೆ ಇನ್ನೊಂದು ಕ್ರಾಂತಿ ?



ಜೂನ್ ೧: ಬಾಬಾ ರಾಮ್ ದೇವ್ ರವರಭಾರತ್ ಸ್ವಾಭಿಮಾನ್ ಯಾತ್ರೆಯು  ಭಾರತ್ ಸ್ವಾಭಿಮಾನ್ ಯಾತ್ರೆ ಯಾತ್ರೆಯು ಕೊನೆ ಗೊಳ್ಳುವ ಹಂತಕ್ಕೆ ಬರುತ್ತಿದ್ದಂತೆ ಕೇಂದ್ರ ಸರಕಾರಕ್ಕೆ ತಲೆನೂವು ಶುರುವಾಗಿದೆ. ಈಗಾಗಲೆ ಜನಲೋಕಪಾಲ ವಿವಾದ ಬಿಸಿ ಇರುವಾಗ ಬಾಬಾ ರಾಮ್ ದೇವ್ ಸಿಂಹ ಸ್ವಪ್ನವಾಗಿ ಕೆಲವರಿಗೆ ಕಾಣತೊಡಗಿದ್ದಾರೆ. ಅವರದು ಒ0ದೇ ಹಟ. ಕಪ್ಪು ಹಣ ಮರಳಿ ಬರಲಿ. ಇದಕ್ಕಾಗಿಯೇ ಹಲವಾರು ತಿಂಗಳಿನಿಂದ ಉಚಿತ ಯೋಗ ಶಿಬಿರವನ್ನು ದೇಶದ ಮೂಲೆ ಮೂಲೆಯಲ್ಲಿ ಆಯೋಜಿಸುತ್ತಾ ಜನರಲ್ಲಿ ಸಾಕಷ್ಟು ದೇಶಾಭಿಮಾನವನ್ನು ಹುಟ್ಟು ಹಾಕಿದ್ದಾರೆ. ಇದೇ ಬರುವ ೪ ನೇ ತಾರಿಖಿಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ  ತಮ್ಮ ಲಕ್ಷಾಂತರ ಅಭಿಮಾನೀ ಬೆಂಬಲಿಗರ ಜೊತೆ ಉಪವಾಸದ ಸತ್ಯಾಗ್ರಹದ ಮೂಲಕ ಕಪ್ಪು ಹಣದ ವಾಪಸಾತಿಗೆ   ಸಜ್ಜಾಗಿದ್ದಾರೆ. ಹೆಚ್ಚು ಪ್ರಚಾರ ಬಯಸದ ಬಾಬಾ ರಾಮ್ ದೇವ್ ತಮ್ಮ ಯೋಗದ ಮೂಲಕ ಜನಪ್ರೀಯವಾಗಿದ್ದು ಭಾರತೀಯ ಇತಿಹಾದಲ್ಲಿ ಅಚ್ಚಳಿಯದೇ ಉಳಿಯುವ ವಿಷಯ. ಎಲ್ಲ ತ್ಯಜಿಸಿದ ಸನ್ಯಾಸಿ ಈಗ ಹಿಡಿದ ಪಟ್ಟು ಬಿಡದೇ ಕಪ್ಪು ಹಣ ಹಾಗು ಭ್ರಷ್ಟಾಚಾರದ (ಭ್ರಷ್ಟಾಚಾರ ವೆಂದರೆ  ತಾನುಮಾಡುವ  ಆಚಾರದಲ್ಲಿ ತಪ್ಪು ರೀತಿಯಲ್ಲಿ ನೆಡೆದು ಕೊಳ್ಳುವದು ಎಂದರ್ಥ.ಲಂಚ ಕೊಡುವದು/ತೆಗೆದು ಕೊಳ್ಳುವದು,ತೆರಿಗೆ ತುಂಬವದನ್ನು ತಪ್ಪಿಸಿಕೊಳ್ಳುವದು ಇವೆಲ್ಲವೂ ಭ್ರಷ್ಟಾಚಾರವೇ.)
ವಿರುದ್ದ  ಮಾಡುತ್ತಿರುವ ಹೋರಾಟ ಜನಸಾಮಾನ್ಯ ರಲ್ಲಿ ಕುತೂಹಲಕ್ಕೆ ಕಾರಣವಾವಾಗಿದೆ. ಎನೇ ಇರಲಿ ಬಾಬಾ ರಾಮ್ ದೇವ್ ರವರು ಭ್ರಷ್ಟಾಚಾರರೂಪಿ  ಮದ್ದಾನೆಗಳನ್ನು ಬೀಳಿಸಲು ಖೆಡ್ಡಾವನ್ನೇ ತೋಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಾಥ್ ನೀಡೋಣ.

ಒಮ್ಮೆ ಇಲ್ಲಿ ಭೇಟಿ ಕೊಡಿ. http://www.bharatswabhimantrust.org/bharatswa/




 ಭೋಲೋ ಭಾರತ್ ಮಾತಾಕೀ ... ಜೈ. !


ಶನಿವಾರ, ಏಪ್ರಿಲ್ 23, 2011

ಬಹು ಉಪಯೋಗಿದೊಡ್ಡಪತ್ರೆ






ಸ್ಥಳೀಯ ಹೆಸರು :     ದೊಡ್ಡಪತ್ರೆ,ಸಂಬಾರ ಸೊಪ್ಪು.
 ಕುಟುಂಬ : ಲ್ಯಾಮಿನೆಸಿ (laminaceae)  
 ಸಸ್ಯ ಶಾಸ್ತ್ರೀಯ ಹೆಸರು :ಕಾಲಿಯಸ್ ಅರೋಮ್ಯಾಟಿಕಸ್
(caleus aromaticus)   
ಮೂಲ:ಭಾರತ,ಸೀಕಾಲ್ಸ ದ್ವೀಪ ಹಾಗೂ ಆಗ್ನೇಯ ಏಶಿಯಾ.


ಬಹಳ ಹಿಂದಿನ ಕಾಲದಿಂದಲೂ ಮಾನವನು  ನಿಸರ್ಗದ ಸಸ್ಯ ವೈವಿಧ್ಯಗಳಲ್ಲಿ ತನ್ನ ಹಲವು ಅವಶ್ಯಕತೆಗಳನ್ನು ಪೂರೈಸಿಕೊಂಡು  ಬೆಳೆದು ಬಂದಿದ್ದಾನೆ.   ಇವುಗಳಲ್ಲಿ ಔಷಧ ಹಾಗೂ ಅಡುಗೆ ಇವೆರಡಕ್ಕೂ ಬಳಕೆ ಆಗುವ ಹಲವಾರು ಸಸ್ಯ ವೈವಿಧ್ಯಗಳು ನಮ್ಮ ಸುತ್ತಲಿನಲ್ಲಿ ಬಹಳಷ್ಟಿದೆ ಅವುಗಳಲ್ಲಿ ದೊಡ್ಡಪತ್ರೆಯೂ ಒಂದು.                                    
 ಅರ್ಧದಿಂದ ಎರಡು ಅಡಿ ಬೆಳೆಯುವ ದಪ್ಪನೆ ಎಲೆಯುಳ್ಳ ದೊಡ್ಡಪತ್ರೆ  ಗಿಡದ  ಎಲೆಯ ಅಂಚು ಗರಗಸದಂತಹ ಆಕಾರದಲ್ಲಿರುತ್ತದೆ. ಸಾಮಾನ್ಯವಾಗಿ ನೀರು ಬಸಿದು ಹೋಗುವ ಸ್ಥಳಗಳಲ್ಲಿ ಕಂಡುಬರುತ್ತದೆ..
ಅಡುಗೆ:  ದೊಡ್ಡಪತ್ರೆಯ ಎಲೆಯಿಂದ ತಯಾರಿಸಿದ ಸಾಂಬಾರು, ಚಟ್ನಿ,ದೋಸೆ ,ಗೊಜ್ಜು ,ತಂಬಳಿಗಳು ರುಚಿಕರ ಅಷ್ಟೇ ಅಲ್ಲ ಆರೋಗ್ಯಕ್ಕೆ ಹಿತಕರ ಕೂಡಾ ಹೌದು. ಮಸಾಲೆ ಬೆರಸಿದ ಕಡಲೆ ಹಿಟ್ಟಿನ ಜೊತೆ ಈ ಗಿಡದ ಎಲೆಯನ್ನು ಎಣ್ಣೆಯಲ್ಲಿ ಕರಿದರೆ ಬಾಯಲ್ಲಿ ನೀರೂರಿಸುವ ಬಜೆ ಸಿದ್ದ. ಅಲ್ಲದೇ ಇದನ್ನು  ಸಣ್ಣಗೆ ಹೆಚ್ಚಿದ ಈರುಳ್ಳಿಯ  ಜೊತೆ ಇದರ  ಎಲೆಯನ್ನು ಹೆಚ್ಚಿ  ಕಡಲೆ ಹಿಟ್ಟಿನಲ್ಲಿ ಕರಿದು  ಬೋಂಡಾ ಮಾಡಬಹುದು.
ಔಷಧ:ಶೀತ ನೆಗಡಿ ಕಫದ ತೊಂದರೆಗಳಲ್ಲಿ  ಈ ಗಿಡದ ಎಲೆಯ ರಸವನ್ನು ಜೇನುತುಪ್ಪದ ಜೊತೆ ಬಳಸಿದಾಗ   ಪರಿಣಾಮಕಾರಿ  ಮನೆ ಔಷಧವಾಗಿ  ಪರಿಣಾಮ ಕಂಡುಬಂದಿದೆ.
 ಯಾವುದೇ ಸಮಯದಲ್ಲೂ ದೊಡ್ಡಪತ್ರೆ ಗಿಡದ ಕಾಂಡದ ಭಾಗವನ್ನು ಕುಂಡ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ತಾರಸಿ ಮನೆಗಳಲ್ಲೂ ಸುಲಭವಾಗಿ ಬೆಳಸಿಕೊಳ್ಳಬಹುದು. ಅಡುಗೆ,ಔಷಧ,ಹಾಗೂ ಅಲಂಕಾರಿಕವಾಗಿ ಬೆಳೆಸಿಕೊಳ್ಳಲು ಸುಲಭವಾಗಿ ಬೆಳೆಯುವ ಅಪರೂದ  ಗಿಡವಿದು.                                                 
                                                                     ಜಗದೀಶ ಬಾಳೆಹದ್ದ.

(ಉದಯವಾಣಿ ದಿನಪತ್ರಿಕೆಯ ಕೃಷಿಸಂಪದ ಪುರವಣಿಯಲ್ಲಿ ಪ್ರಕಟವಾದ ಲೇಖನ.)



ಭಾನುವಾರ, ಡಿಸೆಂಬರ್ 5, 2010

ಯಕ್ಷಗಾನ- ಕ್ಲಿಕ್ಸ್.

ಗೆಳೆಯ ಗಣಪತಿಭಟ್ಟರ ಒಲಂಪಸ್ ಕ್ಯಾಮರದಲ್ಲಿ ತೆಗೆದ ಫೋಟೋಗಳಿವು. ಈ ಕ್ಯಾಮರದಲ್ಲೇ fisheye  effect ಹಾಗೂ   drawing effect   ಫೋಟೋತೆಗೆದಿದ್ದು  ಈ ಕ್ಯಾಮರಾ ಫೋಟೋಶಾಪ್  ಮಾಡುವಕೆಲಸ ಹಗುರವಾಗಿಸಿದೆ.


 .      ರಂಗಸ್ಥಳದ ನೋಟ






                                           Fisheye  effect




                                                          
                                                  ಸಾಕು ಸಾಕು ನಿನ್ನ ಪೌರುಷ!


.




                                          ಚೌಕಿಯಲ್ಲಿ ಸ್ತ್ರೀ ಪಾತ್ರಧಾರಿ






                                                        

 ಚಂಡೆವಾದನದಲ್ಲಿ  ಹಿಮ್ಮೇಳದ ಕಲಾವಿದ






 ಸ್ತ್ರೀ ಪಾತ್ರಧಾರಿಯ ಕನ್ನಡಿಯಲಿ ಇನ್ನೊಬ್ಬ ಕಲಾವಿದನ ಬಿಂಬ.


ಈ ಹಿಂದೆ ತೆಗೆದ ಯಕ್ಷಗಾನದ ಫೋಟೋಕ್ಕಾಗಿ ಇಲ್ಲಿ   ನೋಡಿ.http://nammolage.blogspot.com/2010_05_01_archive.html

ಮಂಗಳವಾರ, ನವೆಂಬರ್ 9, 2010

ಜಲ್ ಜಲ ಧಾರೆಯ ಅವಾಂತರ


  ಕೃ
ಷಿಬದುಕಿನ ಸುಗ್ಗಿಯ  ಆರಂಭದ ಕಾಲವಿದು. ಗದ್ದೆ ಕೊಯ್ಲು,ಅಡಿಕೆಕೊಯ್ಲಿಗೆ ಇದು ಸಕಾಲ.ಆದರೆ  ಅಕ್ಟೋಬರ್ ೨೮ ರಂದು ದಕ್ಷಿಣ ಚೈನಾ ಸಮುದ್ರತೀರದಲ್ಲಿ ಜನಿಸಿದ ಜಲ್ ಹೆಸರಿನ ಚಂಡಮಾರುತವು ಭಾಗಶಃ ಕರ್ನಾಟಕವನ್ನು ತೋಸಿಯಿ ಜನಸಾಮಾನ್ಯರ ಬದುಕಿನ ಹಾದಿ ತಪ್ಪಿಸುತ್ತಿದೆ.
                                  ಚಂಡಮಾರುತ ಸಾಗಿಬಂದ ಹಾದಿ.


ತಕಾರಿ ಬೆಳೆ,ತೊಗರಿ ಬೆಳೆ,ಈರುಳ್ಳಿ,ನೆಲಗಡಲೆ ಹೀಗೆ ಹತ್ತು ಹಲವು ಬೆಳೆಗಳು ಇನ್ನೇನು ಕೈಗೆ ಬರುವ ಹಂತದಲ್ಲಿ  ಜಲ್ ಚಂಡಮಾರುತಕ್ಕೆ ಈಗಾಗಲೇ ಸಿಕ್ಕಿ  ಹಾಳಾಗಿದೆ.  ಭರ್ತಿಯಾದ ಅಣೇಕಟ್ಟುಗಳು ಈಗ ಮತ್ತೊಮ್ಮೆ ಹೆಚ್ಚುವರಿ ನೀರು ಬಿಡಲು ಸಜ್ಜಾಗುತ್ತಿವೆ.ಅಣೇಕಟ್ಟುಗಳು ತುಂಬಿದೊಡೆ ಕರೆಂಟಿಗೆ ಬರವಿಲ್ಲದಿದ್ದರೂ ಕೃಷಿ ಉತ್ಪನ್ನಗಳಿಗೆ ಬರದ ಛಾಯೆ ಕಾಡುತ್ತಿದೆ. ಉತ್ತರ ಕರ್ನಾಟಕ ಈಗಾಲೇ ಮಹಾಪೂರಕ್ಕೆ ನಲುಗಿ ಚೇತರಿಕೆಯ ಹಾದಿಯಲ್ಲಿರುವಾಗಲೇ ಜನರ ಹೊಸ ಬದುಕ ಕನಸಿಗೆ ಜಲ್ ಚಂಡಮಾರುತವು  ಬರೆ ಹಾಕತೊಡಗಿದೆ.
ಮಂದ ತೇವಾಂಶ ಭರಿತ ವಾತಾವರಣದಿಂದ ಈಗಾಗಲೇ ಕಟಾವಾದ ಆಹಾರ ಧಾನ್ಯಗಳು ಹಾಳಾಗುತ್ತಿದೆ.ಮಳೆಹನಿಯ ಅಬ್ಬರವಿಲ್ಲದಿದ್ದರೂ ಅಕಾಲದ ಮಳೆ ಎಲ್ಲರಿಗೂ ಅನಾನುಕೂಲವಾಗಿ ಪರಿಣಮಿಸಿದೆ.
                                      ತಯಾರಿ ಹಂತದ ಪಾಲಿಹೌಸ್



ಈ ನಡುವೆ ಕೃಷಿ ಉತ್ಪನ್ನಗಳನ್ನು ಒಣಗಿಸಲು  ಕೆಲ ರೈತರು  ಡ್ರಾರ್ಯರ್, ಯು ವಿ ಪ್ಲಾಸ್ಟಿಕ್ ಬಳಸಿ ಮಾಡಿದ ಪಾಲಿಹೌಸ್ ಗಳಿಗೆ ಮೊರೆ ಹೋಗಿದ್ದಾರೆ.(ಇವು ತಾತ್ಕಾಲಿಕ ಹಾಗೂ ಸ್ವಲ್ಪ ಶ್ರಮ ದಾಯಕ. ಬಿಸಿಲಿನಲ್ಲಿ ಸಂಸ್ಕರಣೆ ಮಾಡಿದಷ್ಟು ಸುಲಭವಲ್ಲ.)
  ಚಂಡಮಾರುತ ಈಗಾಲೇ ತನ್ನ ಪ್ರಭಾವ ಬೀರುತ್ತಿದ್ದು ಮುಂದೆ ಯಾವ ಬದಲಾವಣೆ ಆಗಬಹುದೆಂದು ಕಾದು ನೋಡಬೇಕಿದೆ.ಒಣ ಹವೆ ಮುಂದುವರಿದಲ್ಲಿ ಮಾತ್ರ ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಎಲ್ಲರೂ ಅದಕ್ಕೇ  ಕಾಯುತ್ತಿದ್ದಾರೆ.