ಮಂಗಳವಾರ, ಮಾರ್ಚ್ 5, 2013

ಆಹಾ! ನೊರೆ ಬೆಲ್ಲ


        ಆಹಾ! ನೊರೆ ಬೆಲ್ಲ


ಮಲೆನಾಡಿನಲ್ಲಿ ಆಲೆಮನೆಯ ಸೊಗಡು ಶುರುವಾಗುತ್ತಿದೆ.   ಆಲೆಮನೆಯಲ್ಲಿ ಕಬ್ಬಿನ ಹಾಲು ಹಾಗೂ  ನೊರೆ ಬೆಲ್ಲದ ಔತಣ  ನೆಡೆಯುತ್ತಿರುತ್ತದೆ.  ಕಬ್ಬಿನ ಹಾಲು  ಈಗ ನಗರಗಳಲ್ಲಿಯೂ ಲಭ್ಯ.ಆದರೆ ನೊರೆ ಬೆಲ್ಲದ ಸವಿ ನೋಡಬೇಕಾದರೆ ನೀವು ಮಲೆನಾಡಿನ ಆಲೆಮನೆಯ ಅಥಿತಿಯಾಗಲೇ ಬೇಕು. ಗಾಣ ದಿಂದ ಹೊರಬಂದ ಕಬ್ಬಿನ ಹಾಲನ್ನು ಕೊಪ್ಪರಿಗೆಯಲ್ಲಿ ಕಾಯಿಸುತ್ತಾರೆ.ನಾಲ್ಕಾರು ಘಂಟೆಗಳ ನಂತರ   ಕೊಪ್ಪರಿಗೆಯ ಮೇಲೆ ಹೆಗ್ಗುದಿ  ಬೀಳುತ್ತದೆ (ಹೆಗ್ಗುದಿ; ಕಬ್ಬಿನ ಹಾಲಿನ ಕೊನೆಯ ಕುದಿಯುವ ಬಿಂದು.ಅದೇ ಬೆಲ್ಲ ಪರಿಪಕ್ವ ವಾಗುವ ಸಮಯ) ಆ ಬೆಲ್ಲದ ಪರಿಮಳವು ಒಂದೆರಡು ಕಿಲೋಮೀಟರ್ ತನಕ ಹರಡುತ್ತದೆ.ಆ ಹೊತ್ತಿಗೆ ಕೊಪ್ಪರಿಗೆಯಲ್ಲಿ  ಬೆಲ್ಲ ಸಿದ್ಧವಾಗಿರುತ್ತದೆ.ನಂತರ ಅದನ್ನು ಪಾಕದ ಮರಿಗೆಯಲ್ಲಿ ಆರಲು ಬಿಡುತ್ತಾರೆ. ಆ ಹೊತ್ತಿನಲ್ಲಿ   ಬಿಸಿ ಬಿಸಿ ಬೆಲ್ಲದ ಮೇಲೆ ಹೊಂಬಣ್ಣದ ನೊರೆ ಬೆಲ್ಲ ಸಿಗುತ್ತದೆ ಇದೇ ನೊರೆ ಬೆಲ್ಲ.



 ಆಲೆಮನೆಯಲ್ಲಿ ಕಬ್ಬಿನ ಹಾಲನ್ನು ಕುಡಿದು  ಕಬ್ಬಿನ ಸಿಪ್ಪೆಯನ್ನೇ ಚಮಚವನ್ನಾಗಿಸಿ ಬಾಳೆ ದೊನ್ನೆಯಲ್ಲಿ ನೊರೆ ಬೆಲ್ಲವನ್ನು ತಿನ್ನುವಾಗ ಸಿಗುವ  ಮಜವೇ ಬೇರೆ.  ಈ ಅವಕಾಶ ಸಿಕ್ಕರೆ ತಪ್ಪಿಸಕೊಳ್ಳಬೇಡಿ.



ಶನಿವಾರ, ಫೆಬ್ರವರಿ 2, 2013

ಹಿಲಾಲು ಬೆಳಕಿನಲ್ಲಿ ಯಕ್ಷಗಾನ



                        

ಸುಮಾರು ಆರು ದಶಕದ ಹಿಂದೆ  ದೊಂದಿ ಅಥವಾ ಹಿಲಾಲು ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನವು ನೆಡೆಯುತ್ತಿತ್ತು.ತರುವಾಯ ಹೊಸ ಹೊಸ ಸಂಶೋಧನೆಗೆ ರಂಗಸ್ಥಳವು ಒಗ್ಗಿಕೊಂಡು ಬೆಳಕಿನ ಆಕರಕ್ಕೆ ಬಾಡಿಗೆಗೆ ತಂದ ಸೀಮೆ ಎಣ್ಣೆಯ ಗ್ಯಾಸ್ ಲೈಟ್ (ಗ್ಯಾಸೋಲಿನ್ ದೀಪ) , ನಂತರ ವಿದ್ಯುತ್ ಶಕ್ತಿಯು ಬಳಕೆಯಲ್ಲಿ ಬಂದವು.












ಪೂರ್ವದಲ್ಲಿ ನೆಡೆಯುತ್ತಿದಂತಹ ಹಿಲಾಲು ಬೆಳಕಿನಲ್ಲಿ ನೆಡೆಯುತ್ತಿದಂತಹ ಯಕ್ಷಗಾನವು ಇತ್ತಿಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಕತ್ಲೆಹಳ್ಲದಲ್ಲಿ ಜರುಗಿತು.{ಇಲ್ಲಿ ಅರಿವೆಯನ್ನು ಚಂಡಿನ ಆಕಾರದಲ್ಲಿ ಸುತ್ತಿ ಅದನ್ನು ಕಬ್ಬಿಣದ ಬಂಡಿಯ ಮೇಲೆ ಇಟ್ಟು ಎಣ್ಣೆಯನ್ನು ಆಗಾಗ ಹಾಕುತ್ತಾ ಬೆಳಕನ್ನು ಮಾಡಿದ್ದಾರೆ}ಸಾಂಪ್ರದಾಯ ಬದ್ಧವಾಗಿ ಕೋಂಡಗಿ ವೇಷ, ಪೀಟಿಕಾ ಸ್ತ್ರೀ ವೇಷ, ಹಾಗೂ ಬಾಲಗೋಪಾಲವೇಷಗಳಿಂದ ಶುರುವಾದ ."ಕಾಲನೇಮಿ ಕಾಳಗ"ವೆಂಬ ಯಕ್ಷಗಾನವು   ಹೊಸ ತನಕ್ಕೆ ಹೊಂದಿಕೊಂಡಂತಹ   ಪ್ರೇಕ್ಷಕರಿಗೆ ಒಂದು ಐತಿಹಾಸಿಕ ಹಿನ್ನೂಟಕ್ಕೆ ಕೊಂಡೊಯ್ದು ತನ್ಮೂಲಕ ವಿಶಿಷ್ಟವಾದ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಶನಿವಾರ, ಮಾರ್ಚ್ 24, 2012

ಶಿರಸಿ ಜಾತ್ರೆಯಲ್ಲೊಂದು ಸುತ್ತು

ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜರುಗುವ    ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯು ಬಹಳ ಹೆಸರುವಾಸಿಯಾಗಿದೆ.    ಜಾತ್ರೆಯ ಸಮಯದಲ್ಲಿ ಎಲ್ಲಿದ್ದರೂ   ನೆಂಟರಿಷ್ಟರು  ಪರವೂರಿನಲ್ಲಿ ಬೀಡುಬಿಟ್ಟ ಮೂಲನಿವಾಸಿಗಳು ಜಾತ್ರೆಯನ್ನು ಖಂಡಿತ ಮಿಸ್ ಮಾಡಿಕೊಳ್ಳುವದಿಲ್ಲ. ಜಾತ್ರೆ ಪೇಟೆಯಲ್ಲಿ ರಾತಿ ವೇಳೆಯಲ್ಲಿ ತಿರುಗಾಡುವದೇ ಒಂದು ಸೊಗಸು ಒಂಥರಾ ಉಮೇದಿ!.  ಜಾತ್ರೆ ಪೇಟೆಯಲ್ಲಿಒಂದು ಸಲ  ಸುತ್ತಾಡಿದವರು ಮತ್ತೆರಡು ದಿನ ಬಿಟ್ಟು ಪುನಃ ತಾಸುಗಟ್ಟಲೇ ಸ್ನೇಹಿತರು ಮನೆಯವರೊಡನೆ ಸುತ್ತಾಡುವದು ಸಾಮಾನ್ಯ. ಇದಕ್ಕೆ ನಾನೂ ಕೂಡಾ ಹೊರತಾಗಿಲ್ಲವಾಗಿತ್ತು. ಎರಡು ಮೂರುದಿನ ಜಾತ್ರೆಯಲ್ಲಿ ತಿರುಗಾಡಿ ,ಪೋಟೋಗ್ರಫಿ ಮಾಡುವ ಸಲುವಾಗಿ ಮತ್ತೊಮ್ಮೆ ಜಾತ್ರೆಗೆ ತೆರಳಿದೆ. ಆ ಹೊತ್ತಿಗಾಗಲೇ ಜಾತ್ರಾ ವಿಧಿವಿಧಾನಗಳು ಮುಗಿದು ಮಾರಿಕಾಂಬಾ ದೇವಿಯು ಮಾರಿ ಚಪ್ಪರದಿಂದ ನಿರ್ಗಮಿಸಿಯಾಗಿತ್ತು.


      



 






ಮಂಗಳವಾರ, ಜನವರಿ 3, 2012

ಕಾಲಚಕ್ರ ತಿರುಗುತಿದೆ

ಕಳೆದ ಸಾಲಿನಲ್ಲಿ ಮೂಡಿಬಂದ ರಾಕ್ ಸ್ಟಾರ್ ಸಿನಿಮಾ ಎಷ್ಟು ಹಣಗಳಿಸಿತೋ ನನಗೆ ಗೊತ್ತಿಲ್ಲ ಆದರೆ ಆ ಸಿನೆಮಾ  ದಶಕಗಳ ಹಿಂದಿನ ಸಿನೆಮಾಗಳ ಬ್ಯಾನರ್ ಅನ್ನು ನೆನಪಿಸಿದ್ದು ಸತ್ಯ. ಆಧುನಿಕ ಯಂತ್ರೋಪಕರಣಗಳು ಕೆಲಸಗಳನ್ನು ಹಗುರ ಮಾಡುತ್ತವೆ .ಹಳೆಯ ತಲೆಮಾರಿನ ಕೆಲ ಕೆಲಸಗಾರರಿಗೆ ಅಂದರೆ ಚಿತ್ರ ಕಲಾವಿದರು ಸಂಗೀತ ಕಲಾವಿದರಿಗೆ  ಹೊಸ ನಮೂನೆಯ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ತುಸು ಕಂಗೆಡಿಸಲು ಸಾಕು. ವಿಷಯ ಮತ್ತೇನಲ್ಲ ಈಗ ಮತ್ತೆ ಹಳೆಯ ಜಮಾನದ್ದು   ಫ್ಯಾಶನ್ ಆಗುತ್ತಿದೆ.ಫ್ಯಾಶನ್ ಅನ್ನುವದಕ್ಕಿತಲೂ ಹೊಸ ಟ್ರೆಂಡ್ ಅದರೆ ತಪ್ಪೇನಿಲ್ಲ.





ಹಳೆಯ ಕಾಲದ ಬ್ಯಾನರ್ಮುಕದ್ದರ್ ಕಾ ಸಿಕಂದರ್  ಒಮ್ಮೆ  ನೋಡಿ ಆ ಕಲಾವಿದನ ಕಲ್ಪನೆಗೆ ತಲೆದೂಗಲೇ  ಬೇಕು.ಇಲ್ಲಿ  ಆ ನಾಲ್ಕು ಜನರ ನಡುವೆ ನಿರ್ಭೀಡೆಯಿಂದ ಬೈಕ್ ಚಲಾಯಿಸುತ್ತಿರುವ ಹೀರೋ, ಆ ಸಿನೆಮಾದ ಹೆಸರು  ಆದು ಮೂಡಿಬಂದ ರೀತಿ ಎನೋ ಹೊಸತನ ಇಂದಿಗೂ ಕಂಡುಬರುತ್ತದೆ.










 ಅದೇನೆ ಇರಲಿ ನನಗನಿಸಿದಂತೆ ರಾಕ್ ಸ್ಟಾರ್ ನಿಂದ ಹುಟ್ಟಿದ
ಹೊಸ ಬ್ಯಾನರ್  ಟ್ರೆಂಡ್  ಇನ್ನು ಕೆಲ ವರ್ಷ ಖಾಯಂ ಆಗಿ ಉಳಿಯ ಬಹುದು. ಇನ್ನೂ ಕನ್ನಡದವರು ಇದರ ಬಗ್ಗೆ ಯೋಚಿಸಿದಂತೆ ಕಂಡು ಬಂದಿಲ್ಲ.ರಾಕ್ ಸ್ಟಾರ್ ನಂತರ ಡರ್ಟಿ ಪಿಚ್ಚರ್ ಹಾಗೂ ಜೂನ್ ೧೫  ೨೦೧೨ ರಂದು ಬಿಡುಗಡೆ ಆಗಲಿರುವ ರೌಡಿ ರಾಥೋರ್ ಸಿನೆಮಾ ಕೂಡಾ ಆ ಶೈಲಿಯ ಬ್ಯಾನರಿನಲ್ಲಿಯೇ  ಮೂಡಿ ಬಂದಿದೆ. 







                                                             (ರೌಡಿ ರಾಥೋರ್)


ಇನ್ನು ಮುಂದೆ ಜನರಿಗೆ ಮಾಲ್ ಮಲ್ಟಿಪ್ಲೆಕ್ಸ್ ಗಳು ಜನರಗೆ  ಬೇಜಾರಾಗಿ ಮತ್ತೆ ಹಳೆ ಕಾಲದ ಟೆಂಟ್ ಸಿನೆಮಾ ಶೋ ಶಹರದಲ್ಲಿ   ಶುರುವಾದರೆ ಆಶ್ಚರ್ಯವಿಲ್ಲ!.

ಭಾನುವಾರ, ಆಗಸ್ಟ್ 28, 2011

ಮೈದಾನದಲ್ಲಿ





 ಮೈದಾನದಲ್ಲಿ


ಅಣ್ಣನ ಕೂಗಿಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಜನ ಹಾಜರು
ಬಾಯೇ ಬಿಡದ ಕೋಟಿ ಹಣಕ್ಕೆ ಹರಾಜಾದ ಕ್ರಿ'ಕೆಟ್ಟಿಗ'ರು. 


ಒಮ್ಮೆ ಕೂಗಿದರೂ ಸಾಕಿತ್ತು ಸಚಿನ್ನು , ಧೋನಿ
ರಾಮಲೀಲಾ ದಲ್ಲಿ ಮೊಳಗುತ್ತಿತ್ತು ಇನ್ನಷ್ಟು ದನಿ


 ಕ್ರಿಕೆಟಿಗರೇ ಇನ್ನಾದರೂ ದೇಶದ ಹಿತಕ್ಕೆ ಎದ್ದು ನಿಲ್ಲಿ
ನಿಮ್ಮ ಆರಾಧಿಸುವ ಕೋಟಿ  ಮನವನ್ನು  ಗೆಲ್ಲಿ


ಹೀಗಿದ್ದರೂ  ಕೆಲವರಿಗೆ  ನೀವೇ ಹೀರೋಗಳು
ನಿಮ್ಮನ್ನೂ ಆಡಿಸುತ್ತಿದೆಯೇ ಕಾಣದ ಕೈಯ ನೆರಳು?.


ನಿಮ್ಮನೆಬ್ಬಿಸಲು ಬರಬೇಕೆ ಇನ್ನೂ ಬರಬೇಕೇ ಅಣ್ಣಾ?
ದೇಶಕ್ಕೇ ಬೆಳಗಾಗಿ ಹೋಗಿದೆ  ಈಗಲಾದರೂ ನೀವು ಏಳಿರಣ್ಣಾ.

ಶುಕ್ರವಾರ, ಜೂನ್ 10, 2011

ಮಾವಿನಕಾಯಿಯ ಪಾರಂಪರಿಕ ಮೌಲ್ಯವರ್ಧನೆ.


ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಸಾಲುಗಳಲ್ಲಿ
ಪಾರಂಪರಿಕವಾಗಿ ಬೆಳೆದು ಬಂದ ಮಾವಿನಮರಗಳು ತಮ್ಮದೇ ಆದ ಹಲವಾರು ವಿಷೇಶತೆ ಹೊಂದಿದೆ . ಸಾಸ್ಮೆಮಾವು,ಅಪ್ಪೆಮಾವು,ವರಟೇ ಗಿಡುಗ, ಕರಿ ಈಷಾಢ  ಹೀಗೆ ಹಲವಾರು ತಳಿಯ ಮಾವಿನ ಮರಗಳನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಈ ವಿಡಿಯೋದಲ್ಲಿ  ತಲತಲಾಂತರದಿಂದ ಹವ್ಯಕ ಸಮುದಾಯದವರು ಮುಂದುವರಿಸಿಕೊಂಡು ಬಂದಂತಹ  ಕೊಸಗಾಯಿ ಎಂಬ  ಬಗೆಯ ಮಾವಿನ ಕಾಯಿಯ ಸಂಸ್ಕರಣೆಯ ವಿಧಾನವನ್ನುನೀವು ನೋಡಲಿದ್ದೀರಿ.ಕೊಸಗಾಯಿ ತಳಿಯ ಮಾವಿನಮರವು ಇಲ್ಲಿನ ಊರು ಕೇರಿಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದರ ಕಾಯನ್ನು ಒಮ್ಮೆ ಬೇಯಿಸಿ ಶೇಖರಿಸಿ ಇಟ್ಟುಕೊಂಡಲ್ಲಿ ವರ್ಷಗಳತನಕ ಮಾವಿನ ಕಾಯಿಯ ಬಗೆ ಬಗೆಯ ಅಡುಗೆಯನ್ನು ಮಾಡಿಕೊಳ್ಳಬಹುದು.ಮಲೆನಾಡ ವೈವಿಧ್ಯವನ್ನು ತೋರಿಸುವಲ್ಲಿ ಒಂದು ಚಿಕ್ಕ ಯತ್ನವಿದು.
ಜಗದೀಶ. ಬಾಳೆಹದ್ದ.

ಬುಧವಾರ, ಜೂನ್ 1, 2011

ಇನ್ನು ಮೂರೇ ದಿನಕ್ಕೆ ಇನ್ನೊಂದು ಕ್ರಾಂತಿ ?



ಜೂನ್ ೧: ಬಾಬಾ ರಾಮ್ ದೇವ್ ರವರಭಾರತ್ ಸ್ವಾಭಿಮಾನ್ ಯಾತ್ರೆಯು  ಭಾರತ್ ಸ್ವಾಭಿಮಾನ್ ಯಾತ್ರೆ ಯಾತ್ರೆಯು ಕೊನೆ ಗೊಳ್ಳುವ ಹಂತಕ್ಕೆ ಬರುತ್ತಿದ್ದಂತೆ ಕೇಂದ್ರ ಸರಕಾರಕ್ಕೆ ತಲೆನೂವು ಶುರುವಾಗಿದೆ. ಈಗಾಗಲೆ ಜನಲೋಕಪಾಲ ವಿವಾದ ಬಿಸಿ ಇರುವಾಗ ಬಾಬಾ ರಾಮ್ ದೇವ್ ಸಿಂಹ ಸ್ವಪ್ನವಾಗಿ ಕೆಲವರಿಗೆ ಕಾಣತೊಡಗಿದ್ದಾರೆ. ಅವರದು ಒ0ದೇ ಹಟ. ಕಪ್ಪು ಹಣ ಮರಳಿ ಬರಲಿ. ಇದಕ್ಕಾಗಿಯೇ ಹಲವಾರು ತಿಂಗಳಿನಿಂದ ಉಚಿತ ಯೋಗ ಶಿಬಿರವನ್ನು ದೇಶದ ಮೂಲೆ ಮೂಲೆಯಲ್ಲಿ ಆಯೋಜಿಸುತ್ತಾ ಜನರಲ್ಲಿ ಸಾಕಷ್ಟು ದೇಶಾಭಿಮಾನವನ್ನು ಹುಟ್ಟು ಹಾಕಿದ್ದಾರೆ. ಇದೇ ಬರುವ ೪ ನೇ ತಾರಿಖಿಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ  ತಮ್ಮ ಲಕ್ಷಾಂತರ ಅಭಿಮಾನೀ ಬೆಂಬಲಿಗರ ಜೊತೆ ಉಪವಾಸದ ಸತ್ಯಾಗ್ರಹದ ಮೂಲಕ ಕಪ್ಪು ಹಣದ ವಾಪಸಾತಿಗೆ   ಸಜ್ಜಾಗಿದ್ದಾರೆ. ಹೆಚ್ಚು ಪ್ರಚಾರ ಬಯಸದ ಬಾಬಾ ರಾಮ್ ದೇವ್ ತಮ್ಮ ಯೋಗದ ಮೂಲಕ ಜನಪ್ರೀಯವಾಗಿದ್ದು ಭಾರತೀಯ ಇತಿಹಾದಲ್ಲಿ ಅಚ್ಚಳಿಯದೇ ಉಳಿಯುವ ವಿಷಯ. ಎಲ್ಲ ತ್ಯಜಿಸಿದ ಸನ್ಯಾಸಿ ಈಗ ಹಿಡಿದ ಪಟ್ಟು ಬಿಡದೇ ಕಪ್ಪು ಹಣ ಹಾಗು ಭ್ರಷ್ಟಾಚಾರದ (ಭ್ರಷ್ಟಾಚಾರ ವೆಂದರೆ  ತಾನುಮಾಡುವ  ಆಚಾರದಲ್ಲಿ ತಪ್ಪು ರೀತಿಯಲ್ಲಿ ನೆಡೆದು ಕೊಳ್ಳುವದು ಎಂದರ್ಥ.ಲಂಚ ಕೊಡುವದು/ತೆಗೆದು ಕೊಳ್ಳುವದು,ತೆರಿಗೆ ತುಂಬವದನ್ನು ತಪ್ಪಿಸಿಕೊಳ್ಳುವದು ಇವೆಲ್ಲವೂ ಭ್ರಷ್ಟಾಚಾರವೇ.)
ವಿರುದ್ದ  ಮಾಡುತ್ತಿರುವ ಹೋರಾಟ ಜನಸಾಮಾನ್ಯ ರಲ್ಲಿ ಕುತೂಹಲಕ್ಕೆ ಕಾರಣವಾವಾಗಿದೆ. ಎನೇ ಇರಲಿ ಬಾಬಾ ರಾಮ್ ದೇವ್ ರವರು ಭ್ರಷ್ಟಾಚಾರರೂಪಿ  ಮದ್ದಾನೆಗಳನ್ನು ಬೀಳಿಸಲು ಖೆಡ್ಡಾವನ್ನೇ ತೋಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಾಥ್ ನೀಡೋಣ.

ಒಮ್ಮೆ ಇಲ್ಲಿ ಭೇಟಿ ಕೊಡಿ. http://www.bharatswabhimantrust.org/bharatswa/




 ಭೋಲೋ ಭಾರತ್ ಮಾತಾಕೀ ... ಜೈ. !