ಶುಕ್ರವಾರ, ಸೆಪ್ಟೆಂಬರ್ 10, 2010

ಪ್ಯಾಷನ್ ಹಾಗೂ ಗಣೇಶ




 
ಹಬ್ಬ ಬಂದೇ ಬಿಡ್ತು.ತಗೋಳಿ ಪಟಾಕಿ,ಸಿಹಿ ತಿಂಡಿ,ಹತ್ತು ಹಲವು ಬಗೆಯ ಸಂಭ್ರಮ. ಎಲ್ಲರಿಗೂ ಹೊಸ  ಹುರುಪು. ಹೌದು ಗಣೇಶನ ಮಹಿಮೆಯೇ ಅಂತಹುದು.ಭಕ್ತಿಯಿಂದ ಆತನನ್ನು ನೆನೆದಲ್ಲಿ  ಆತ ನಮ್ಮ ಕೈ ಬಿಡಲಾರ ಎಂಬ ನಂಬಿಕೆಯಿಂದ ಆಸ್ತಿಕತೆಯು ನಮ್ಮಲ್ಲಿ ಉಳಿದಿದೆ.  ಕಾಲಕ್ಕೆ ತಕ್ಕಂತೆ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರವಾಗಿ  ಗಣಪನನ್ನು ಮನೆಗೆ ಕರೆಸಿ ಅಥವಾ ಮನೆಯಲ್ಲಿ ವಿಶೇಷ ಪೂಜೆಯ ಮೂಲಕ ಹಬ್ಬ ಆಚರಿಸುತ್ತಿದ್ದಾರೆ.
                                                    
ಪ್ಯಾಷನ್ ವಿಷಯಕ್ಕೆ ಬರುವದಾದರೆ;
 ನಾನು ಇದುವರೆಗೂ  ಗಣೇಶನ ಬಗೆ ಬಗೆಯ ಕಾರ್ಟೂನ್ ಗಳನ್ನು ಓದಿ ನಕ್ಕಿದ್ದರೆ ಸಂತೋಷದಿಂದಲ್ಲ  ಅದು   ವಿಷಾದದಿಂದ.  











ಬಹುಶಃ ಕೆಲವು ವ್ಯಂಗ್ಯಚಿತ್ರಕಾರರು  ಗಣೇಶನ ಹಬ್ಬಕ್ಕೆ ಕಾಯುತ್ತಿದ್ದರೆನೋ ಎಂಬಂತೆ ಭಾಸವಾಗುತ್ತದೆ.         ಪಾರ್ವತಿಯು ಕೈಲಾಸದಿಂದ ಗಣೇಶನಿಗೆ ನಮ್ಮಲ್ಲಿಯ ಟ್ರಾಫಿಕ್,ಬೆಲೆ ಏರಿಕೆ,ರಸ್ತೆಯ ಹೊಂಡ ಇನ್ನಿತರ ದಿನನಿತ್ಯ ಕಂಡು ಬರುವ ರಗಳೆಯ ಬಗ್ಗೆ ಎಚ್ಚರಿಸುತ್ತಾಳೆ .ಈ ಬಗ್ಗೆ  ಬಿಡಿಸಿದ ಕಾರ್ಟೂನ್ ತಮ್ಮ ಟೇಬಲ್ಲಿಗೆ ಬರುವದೇ ತಡ ಪತ್ರಿಕೆಯವರು ಛಾಪಿಸಿ ಕುಳಿತುಬಿಡುತ್ತಾರೆ.  
ಕೆಲವು ವಿಗ್ರಹ ತಯಾಕರು ಜನಾಗ್ರಹ ಆಥವಾ ತಮ್ಮ ನೈಪುಣ್ಯ ಪ್ರದರ್ಶನಕ್ಕೆ ಬೇಕಾಬಿಟ್ಟಿಯಾಗಿ ಗಣೇಶನನ್ನು ತಯಾರಿಸುತ್ತಿದ್ದಾರೆ ಅದನ್ನು ಜನರು ಕೊಳ್ಳುತ್ತಿದ್ದಾರೆ. (ಉದಾ: ರಾಜಕಾರಣಿ  ಗೆಟಪ್ಪಿನ ಗಣೇಶ,ಮಿಲಿಟರಿ ಬಂಕೂಕುಧಾರಿ ಗಣೇಶ,  ಕ್ರಿಕೆಟ್ ಬ್ಯಾಟ್ ಹಿಡಿದ  ಗಣೇಶ)  ಇದು ಬಹುಶಃ ಹಿಂದೂ ಧರ್ಮದಲ್ಲಿ ಅದೂ ಭಾರತದಲ್ಲಿ ಮಾತ್ರ ಕಾಣಬಹುದೇನೋ? ನಮ್ಮ ಧರ್ಮದ ದೇವರ ವ್ಯಂಗ್ಯಚಿತ್ರವನ್ನು ನೋಡಿ ಇತರರು ನಗುತ್ತಾರೆ.ಅದಕ್ಕೆ ನಾವೂ ನಗಬೇಕೆ? ಗಣಪ ಆ ಮಟ್ಟಿಗೆ ತಮಾಶೆಗೆ ಒಳಪಡುವ ದೇವರೇ? ನಾನು ಉತ್ತರಕ್ಕೆ ಕಾಯುತ್ತಿದ್ದೇನೆ.


ಈ ತರಹದ ನಮ್ಮಲ್ಲಿಯ ಭಾವನೆ ಇರುವದಲಿಂದಲೋ ಎನೋ ವಿದೇಶಗಳಲ್ಲಿ ಚಪ್ಪಲಿ,ಇನ್ನಿತರ ವಸ್ತುಗಳಮೇಲೆ ಹಿಂದೂ ದೇವರ ಚಿತ್ರಗಳ ಪ್ರಕಟನೆಯಾಗುತ್ತಿರುತ್ತದೆ.ಅದರ ಬಗ್ಗೆ  ಆ ದೇಶವಾಸಿ ಭಾರತೀಯರ ಹಮ್ಮಿಕೊಂಡ ಪ್ರತಿಭಟನೆ ಬಗ್ಗೆ ನೀವು ಹಿಂದೆ ಓದಿರಬಹುದು. ಈಗ ಪ್ಯಾಷನ್ ಗೆ ಹೊಸ ಸೇರ್ಪಡೆ. ಅಂತರ್ಜಾಲದಲ್ಲಿ  ಗಣಪನ ಟ್ಯಾಟೂಗಳನ್ನು ಹಾಕಿಸಿಕೊಂಡ ಹೈಕುಳುಗಳ ಚಿತ್ರ!.
ಮಾಧ್ಯಮ, ಹಾಗೂ ವ್ಯಾಪಾರಿ ರಂಗದಲ್ಲಿ ದೇವತೆಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವ ಬಗ್ಗೆ ವಿಷಾದವಿದೆ.ನನಗನಿಸಿದಂತೆ ನಮ್ಮ ವ್ಯವಸ್ಥೆಯೇ ಅದಕ್ಕೆ  ಹೊಂದಿಕೊಂಡಂತಿದೆ.

2 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

naavu summaniddeve, adara prayojana, athava durupayoga avaru maadikolluttiddaare

Jagadeesh Balehadda ಹೇಳಿದರು...

ಗುರು ಮೂರ್ತಿಯವರೇ ನೀವು ಹೇಳಿದ್ದು ಹೌದು. ಆದರೆ ನಮ್ಮಲ್ಲಿಯ ಭಜರಂಗದಳದಂತಹ ಧಾರ್ಮಿಕ ಸಂಘಟನೆಗಳು್, ಮಠಾಧಿಪತಿಗಳು ಈ ಬಗ್ಗೆ ಇನ್ನೂ ಎಚ್ಚೆತ್ತಿಕೊಂಡಿಲ್ಲ.