ಹಂಪಿಯು ೧೫ ನೆ ಶತಮಾನದಲ್ಲಿ ಭವ್ಯ ಆಡಳಿತಕ್ಕೆ ಸಾಕ್ಷಿಯಾಯಿತು. ವಿಜಯನಗರ ಸಾಮ್ರಾಜ್ಯವು ೧೩೩೬ ರಲ್ಲಿ ಹಕ್ಕಬುಕ್ಕರಿಂದ ಸ್ಥಾಪಿತವಾಗಿ ೧೫೬೫ ರವರೆಗೆ (೨೨೯ ವರ್ಷ) ತನ್ನ ವೈಭವವನ್ನು ಮೆರೆಯಿತು.
ಆ ಕಾಲದಲ್ಲಿ ಕಡೆದಿಟ್ಟ ಬೃಹತ್ ದೇವಾಲಯಗಳು,ಕೋಟೆಗಳು,ಮಾರುಕಟ್ಟೆಗಳು ಮಹಾನವಮಿ ದಿಬ್ಬ,ಕಲ್ಲಿನ ರಥ, ಪುಷ್ಕರಿಣಿ, ಕಲ್ಲುಬಂಡೆಗಳ ಮೇಲೆ ರಚಿಸಲ್ಪಟ್ಟ ಮಂಟಪಗಳು ಜಗತ್ತಿನಾದ್ಯಂತ ಪ್ರವಾಸಿಗರನ್ನು ಇಂದಿಗೂ ಆಕರ್ಷಿಸುತ್ತಿದೆ.
ಆನೆ ಲಾಯ
ಜಗತ್ ಪ್ರಸಿದ್ದ ಕಲ್ಲಿನ ರಥ.
ಕಲ್ಲಿನ ರಥದ ಸಮೀಪವಿರುವ ಸಂಗೀತನಾದ ಹೊಮ್ಮಿಸುವ ಕಲ್ಲು ಕಂಭದ ದೇವಾಲವು ದುರಸ್ತಿಗೆ ಶುರುವಾಗಿ ಮೂರು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ.ಅನೆಲಾಯ, ಲೋಟಸ್ ಮಹಲ್, ಗಣೇಶ ವಿಗ್ರಹಗಳು ಸುಂದರವಾಗಿದೆ.
ಕಮಲ್ ಮಹಲ್.
ಹಿಂದೊಮ್ಮೆ ಹೆಮ್ಮಯ ನಗರವಾಗಿದ್ದ ಹಂಪಿ ಮಾನವನಿಂದ ಬಹುಪಾಲು ಧ್ವಂಸಗೊಂಡಿದೆ.ಕೆಲವು ಕಾಲದ ಹೊಡೆತಕ್ಕೆ ಬಲಿಯಾಗಿದೆ. ಆದರೂ ಇಲ್ಲಿನ ಐತಿಹಾಸಿಕ ಸ್ಮಾರಕಗಳ ಭಗ್ನಾವಶೇಷಗಳು ಒಂದು ಕಾಲದ ಗತವೈಭವದ ಸಾಕ್ಷಿಯಾಗಿದೆ.
2 ಕಾಮೆಂಟ್‌ಗಳು:
Chayachitragalu mattu nimma barahagalu, bahala adbhutavagide.
ಉತ್ತಮ ಚಿತ್ರಗಳು.
ಕಾಮೆಂಟ್ ಪೋಸ್ಟ್ ಮಾಡಿ