ಜೂನ್ ೧: ಬಾಬಾ ರಾಮ್ ದೇವ್ ರವರಭಾರತ್ ಸ್ವಾಭಿಮಾನ್ ಯಾತ್ರೆಯು ಭಾರತ್ ಸ್ವಾಭಿಮಾನ್ ಯಾತ್ರೆ ಯಾತ್ರೆಯು ಕೊನೆ ಗೊಳ್ಳುವ ಹಂತಕ್ಕೆ ಬರುತ್ತಿದ್ದಂತೆ ಕೇಂದ್ರ ಸರಕಾರಕ್ಕೆ ತಲೆನೂವು ಶುರುವಾಗಿದೆ. ಈಗಾಗಲೆ ಜನಲೋಕಪಾಲ ವಿವಾದ ಬಿಸಿ ಇರುವಾಗ ಬಾಬಾ ರಾಮ್ ದೇವ್ ಸಿಂಹ ಸ್ವಪ್ನವಾಗಿ ಕೆಲವರಿಗೆ ಕಾಣತೊಡಗಿದ್ದಾರೆ. ಅವರದು ಒ0ದೇ ಹಟ. ಕಪ್ಪು ಹಣ ಮರಳಿ ಬರಲಿ. ಇದಕ್ಕಾಗಿಯೇ ಹಲವಾರು ತಿಂಗಳಿನಿಂದ ಉಚಿತ ಯೋಗ ಶಿಬಿರವನ್ನು ದೇಶದ ಮೂಲೆ ಮೂಲೆಯಲ್ಲಿ ಆಯೋಜಿಸುತ್ತಾ ಜನರಲ್ಲಿ ಸಾಕಷ್ಟು ದೇಶಾಭಿಮಾನವನ್ನು ಹುಟ್ಟು ಹಾಕಿದ್ದಾರೆ. ಇದೇ ಬರುವ ೪ ನೇ ತಾರಿಖಿಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ತಮ್ಮ ಲಕ್ಷಾಂತರ ಅಭಿಮಾನೀ ಬೆಂಬಲಿಗರ ಜೊತೆ ಉಪವಾಸದ ಸತ್ಯಾಗ್ರಹದ ಮೂಲಕ ಕಪ್ಪು ಹಣದ ವಾಪಸಾತಿಗೆ ಸಜ್ಜಾಗಿದ್ದಾರೆ. ಹೆಚ್ಚು ಪ್ರಚಾರ ಬಯಸದ ಬಾಬಾ ರಾಮ್ ದೇವ್ ತಮ್ಮ ಯೋಗದ ಮೂಲಕ ಜನಪ್ರೀಯವಾಗಿದ್ದು ಭಾರತೀಯ ಇತಿಹಾದಲ್ಲಿ ಅಚ್ಚಳಿಯದೇ ಉಳಿಯುವ ವಿಷಯ. ಎಲ್ಲ ತ್ಯಜಿಸಿದ ಸನ್ಯಾಸಿ ಈಗ ಹಿಡಿದ ಪಟ್ಟು ಬಿಡದೇ ಕಪ್ಪು ಹಣ ಹಾಗು ಭ್ರಷ್ಟಾಚಾರದ (ಭ್ರಷ್ಟಾಚಾರ ವೆಂದರೆ ತಾನುಮಾಡುವ ಆಚಾರದಲ್ಲಿ ತಪ್ಪು ರೀತಿಯಲ್ಲಿ ನೆಡೆದು ಕೊಳ್ಳುವದು ಎಂದರ್ಥ.ಲಂಚ ಕೊಡುವದು/ತೆಗೆದು ಕೊಳ್ಳುವದು,ತೆರಿಗೆ ತುಂಬವದನ್ನು ತಪ್ಪಿಸಿಕೊಳ್ಳುವದು ಇವೆಲ್ಲವೂ ಭ್ರಷ್ಟಾಚಾರವೇ.)
ವಿರುದ್ದ ಮಾಡುತ್ತಿರುವ ಹೋರಾಟ ಜನಸಾಮಾನ್ಯ ರಲ್ಲಿ ಕುತೂಹಲಕ್ಕೆ ಕಾರಣವಾವಾಗಿದೆ. ಎನೇ ಇರಲಿ ಬಾಬಾ ರಾಮ್ ದೇವ್ ರವರು ಭ್ರಷ್ಟಾಚಾರರೂಪಿ ಮದ್ದಾನೆಗಳನ್ನು ಬೀಳಿಸಲು ಖೆಡ್ಡಾವನ್ನೇ ತೋಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಾಥ್ ನೀಡೋಣ.
ಒಮ್ಮೆ ಇಲ್ಲಿ ಭೇಟಿ ಕೊಡಿ. http://www.bharatswabhimantrust.org/bharatswa/
ಭೋಲೋ ಭಾರತ್ ಮಾತಾಕೀ ... ಜೈ. !
1 ಕಾಮೆಂಟ್:
"ಮಾಹಿತಿ ಹಕ್ಕು" ಎಂಬ ಆಯುದ ಹಿರಿದು ಭ್ರಷ್ಟಾಚಾರದ ವಿರುದ್ದ ಪ್ರತಿಯೊಬ್ಬರೂ ಹೋರಾಟ ಶುರುಮಾಡಿದರೆ ಇಂದಲ್ಲಾ ನಾಳೆ ಕ್ರಾಂತಿಯಾಗಬಹುದು!!
ಕಾಮೆಂಟ್ ಪೋಸ್ಟ್ ಮಾಡಿ