ಮಂಗಳವಾರ, ನವೆಂಬರ್ 9, 2010

ಜಲ್ ಜಲ ಧಾರೆಯ ಅವಾಂತರ


  ಕೃ
ಷಿಬದುಕಿನ ಸುಗ್ಗಿಯ  ಆರಂಭದ ಕಾಲವಿದು. ಗದ್ದೆ ಕೊಯ್ಲು,ಅಡಿಕೆಕೊಯ್ಲಿಗೆ ಇದು ಸಕಾಲ.ಆದರೆ  ಅಕ್ಟೋಬರ್ ೨೮ ರಂದು ದಕ್ಷಿಣ ಚೈನಾ ಸಮುದ್ರತೀರದಲ್ಲಿ ಜನಿಸಿದ ಜಲ್ ಹೆಸರಿನ ಚಂಡಮಾರುತವು ಭಾಗಶಃ ಕರ್ನಾಟಕವನ್ನು ತೋಸಿಯಿ ಜನಸಾಮಾನ್ಯರ ಬದುಕಿನ ಹಾದಿ ತಪ್ಪಿಸುತ್ತಿದೆ.
                                  ಚಂಡಮಾರುತ ಸಾಗಿಬಂದ ಹಾದಿ.


ತಕಾರಿ ಬೆಳೆ,ತೊಗರಿ ಬೆಳೆ,ಈರುಳ್ಳಿ,ನೆಲಗಡಲೆ ಹೀಗೆ ಹತ್ತು ಹಲವು ಬೆಳೆಗಳು ಇನ್ನೇನು ಕೈಗೆ ಬರುವ ಹಂತದಲ್ಲಿ  ಜಲ್ ಚಂಡಮಾರುತಕ್ಕೆ ಈಗಾಗಲೇ ಸಿಕ್ಕಿ  ಹಾಳಾಗಿದೆ.  ಭರ್ತಿಯಾದ ಅಣೇಕಟ್ಟುಗಳು ಈಗ ಮತ್ತೊಮ್ಮೆ ಹೆಚ್ಚುವರಿ ನೀರು ಬಿಡಲು ಸಜ್ಜಾಗುತ್ತಿವೆ.ಅಣೇಕಟ್ಟುಗಳು ತುಂಬಿದೊಡೆ ಕರೆಂಟಿಗೆ ಬರವಿಲ್ಲದಿದ್ದರೂ ಕೃಷಿ ಉತ್ಪನ್ನಗಳಿಗೆ ಬರದ ಛಾಯೆ ಕಾಡುತ್ತಿದೆ. ಉತ್ತರ ಕರ್ನಾಟಕ ಈಗಾಲೇ ಮಹಾಪೂರಕ್ಕೆ ನಲುಗಿ ಚೇತರಿಕೆಯ ಹಾದಿಯಲ್ಲಿರುವಾಗಲೇ ಜನರ ಹೊಸ ಬದುಕ ಕನಸಿಗೆ ಜಲ್ ಚಂಡಮಾರುತವು  ಬರೆ ಹಾಕತೊಡಗಿದೆ.
ಮಂದ ತೇವಾಂಶ ಭರಿತ ವಾತಾವರಣದಿಂದ ಈಗಾಗಲೇ ಕಟಾವಾದ ಆಹಾರ ಧಾನ್ಯಗಳು ಹಾಳಾಗುತ್ತಿದೆ.ಮಳೆಹನಿಯ ಅಬ್ಬರವಿಲ್ಲದಿದ್ದರೂ ಅಕಾಲದ ಮಳೆ ಎಲ್ಲರಿಗೂ ಅನಾನುಕೂಲವಾಗಿ ಪರಿಣಮಿಸಿದೆ.
                                      ತಯಾರಿ ಹಂತದ ಪಾಲಿಹೌಸ್



ಈ ನಡುವೆ ಕೃಷಿ ಉತ್ಪನ್ನಗಳನ್ನು ಒಣಗಿಸಲು  ಕೆಲ ರೈತರು  ಡ್ರಾರ್ಯರ್, ಯು ವಿ ಪ್ಲಾಸ್ಟಿಕ್ ಬಳಸಿ ಮಾಡಿದ ಪಾಲಿಹೌಸ್ ಗಳಿಗೆ ಮೊರೆ ಹೋಗಿದ್ದಾರೆ.(ಇವು ತಾತ್ಕಾಲಿಕ ಹಾಗೂ ಸ್ವಲ್ಪ ಶ್ರಮ ದಾಯಕ. ಬಿಸಿಲಿನಲ್ಲಿ ಸಂಸ್ಕರಣೆ ಮಾಡಿದಷ್ಟು ಸುಲಭವಲ್ಲ.)
  ಚಂಡಮಾರುತ ಈಗಾಲೇ ತನ್ನ ಪ್ರಭಾವ ಬೀರುತ್ತಿದ್ದು ಮುಂದೆ ಯಾವ ಬದಲಾವಣೆ ಆಗಬಹುದೆಂದು ಕಾದು ನೋಡಬೇಕಿದೆ.ಒಣ ಹವೆ ಮುಂದುವರಿದಲ್ಲಿ ಮಾತ್ರ ಕೃಷಿಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಎಲ್ಲರೂ ಅದಕ್ಕೇ  ಕಾಯುತ್ತಿದ್ದಾರೆ.

ಬುಧವಾರ, ಅಕ್ಟೋಬರ್ 6, 2010

ಹಂಪಿಯಲ್ಲೊಂದು ಸುತ್ತು.

ಹಂಪಿಯು ೧೫ ನೆ ಶತಮಾನದಲ್ಲಿ    ಭವ್ಯ  ಆಡಳಿತಕ್ಕೆ ಸಾಕ್ಷಿಯಾಯಿತು. ವಿಜಯನಗರ ಸಾಮ್ರಾಜ್ಯವು ೧೩೩೬ ರಲ್ಲಿ ಹಕ್ಕಬುಕ್ಕರಿಂದ ಸ್ಥಾಪಿತವಾಗಿ ೧೫೬೫ ರವರೆಗೆ  (೨೨೯ ವರ್ಷ) ತನ್ನ ವೈಭವವನ್ನು ಮೆರೆಯಿತು.

 

.
                                        

 ಆ ಕಾಲದಲ್ಲಿ ಕಡೆದಿಟ್ಟ ಬೃಹತ್ ದೇವಾಲಯಗಳು,ಕೋಟೆಗಳು,ಮಾರುಕಟ್ಟೆಗಳು ಮಹಾನವಮಿ ದಿಬ್ಬ,ಕಲ್ಲಿನ ರಥ, ಪುಷ್ಕರಿಣಿ, ಕಲ್ಲುಬಂಡೆಗಳ ಮೇಲೆ ರಚಿಸಲ್ಪಟ್ಟ ಮಂಟಪಗಳು ಜಗತ್ತಿನಾದ್ಯಂತ ಪ್ರವಾಸಿಗರನ್ನು  ಇಂದಿಗೂ ಆಕರ್ಷಿಸುತ್ತಿದೆ.

                                     ಆನೆ ಲಾಯ


                         ಜಗತ್ ಪ್ರಸಿದ್ದ ಕಲ್ಲಿನ ರಥ.


ಕಲ್ಲಿನ ರಥದ ಸಮೀಪವಿರುವ ಸಂಗೀತನಾದ ಹೊಮ್ಮಿಸುವ ಕಲ್ಲು ಕಂಭದ ದೇವಾಲವು ದುರಸ್ತಿಗೆ ಶುರುವಾಗಿ ಮೂರು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ.ಅನೆಲಾಯ, ಲೋಟಸ್ ಮಹಲ್, ಗಣೇಶ ವಿಗ್ರಹಗಳು ಸುಂದರವಾಗಿದೆ.

                                     ಕಮಲ್ ಮಹಲ್.

                                  
                                                       
ಹಿಂದೊಮ್ಮೆ ಹೆಮ್ಮಯ ನಗರವಾಗಿದ್ದ ಹಂಪಿ ಮಾನವನಿಂದ  ಬಹುಪಾಲು ಧ್ವಂಸಗೊಂಡಿದೆ.ಕೆಲವು ಕಾಲದ ಹೊಡೆತಕ್ಕೆ ಬಲಿಯಾಗಿದೆ. ಆದರೂ ಇಲ್ಲಿನ ಐತಿಹಾಸಿಕ ಸ್ಮಾರಕಗಳ ಭಗ್ನಾವಶೇಷಗಳು ಒಂದು ಕಾಲದ ಗತವೈಭವದ ಸಾಕ್ಷಿಯಾಗಿದೆ.

ಶುಕ್ರವಾರ, ಸೆಪ್ಟೆಂಬರ್ 10, 2010

ಪ್ಯಾಷನ್ ಹಾಗೂ ಗಣೇಶ




 
ಹಬ್ಬ ಬಂದೇ ಬಿಡ್ತು.ತಗೋಳಿ ಪಟಾಕಿ,ಸಿಹಿ ತಿಂಡಿ,ಹತ್ತು ಹಲವು ಬಗೆಯ ಸಂಭ್ರಮ. ಎಲ್ಲರಿಗೂ ಹೊಸ  ಹುರುಪು. ಹೌದು ಗಣೇಶನ ಮಹಿಮೆಯೇ ಅಂತಹುದು.ಭಕ್ತಿಯಿಂದ ಆತನನ್ನು ನೆನೆದಲ್ಲಿ  ಆತ ನಮ್ಮ ಕೈ ಬಿಡಲಾರ ಎಂಬ ನಂಬಿಕೆಯಿಂದ ಆಸ್ತಿಕತೆಯು ನಮ್ಮಲ್ಲಿ ಉಳಿದಿದೆ.  ಕಾಲಕ್ಕೆ ತಕ್ಕಂತೆ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರವಾಗಿ  ಗಣಪನನ್ನು ಮನೆಗೆ ಕರೆಸಿ ಅಥವಾ ಮನೆಯಲ್ಲಿ ವಿಶೇಷ ಪೂಜೆಯ ಮೂಲಕ ಹಬ್ಬ ಆಚರಿಸುತ್ತಿದ್ದಾರೆ.
                                                    
ಪ್ಯಾಷನ್ ವಿಷಯಕ್ಕೆ ಬರುವದಾದರೆ;
 ನಾನು ಇದುವರೆಗೂ  ಗಣೇಶನ ಬಗೆ ಬಗೆಯ ಕಾರ್ಟೂನ್ ಗಳನ್ನು ಓದಿ ನಕ್ಕಿದ್ದರೆ ಸಂತೋಷದಿಂದಲ್ಲ  ಅದು   ವಿಷಾದದಿಂದ.  











ಬಹುಶಃ ಕೆಲವು ವ್ಯಂಗ್ಯಚಿತ್ರಕಾರರು  ಗಣೇಶನ ಹಬ್ಬಕ್ಕೆ ಕಾಯುತ್ತಿದ್ದರೆನೋ ಎಂಬಂತೆ ಭಾಸವಾಗುತ್ತದೆ.         ಪಾರ್ವತಿಯು ಕೈಲಾಸದಿಂದ ಗಣೇಶನಿಗೆ ನಮ್ಮಲ್ಲಿಯ ಟ್ರಾಫಿಕ್,ಬೆಲೆ ಏರಿಕೆ,ರಸ್ತೆಯ ಹೊಂಡ ಇನ್ನಿತರ ದಿನನಿತ್ಯ ಕಂಡು ಬರುವ ರಗಳೆಯ ಬಗ್ಗೆ ಎಚ್ಚರಿಸುತ್ತಾಳೆ .ಈ ಬಗ್ಗೆ  ಬಿಡಿಸಿದ ಕಾರ್ಟೂನ್ ತಮ್ಮ ಟೇಬಲ್ಲಿಗೆ ಬರುವದೇ ತಡ ಪತ್ರಿಕೆಯವರು ಛಾಪಿಸಿ ಕುಳಿತುಬಿಡುತ್ತಾರೆ.  
ಕೆಲವು ವಿಗ್ರಹ ತಯಾಕರು ಜನಾಗ್ರಹ ಆಥವಾ ತಮ್ಮ ನೈಪುಣ್ಯ ಪ್ರದರ್ಶನಕ್ಕೆ ಬೇಕಾಬಿಟ್ಟಿಯಾಗಿ ಗಣೇಶನನ್ನು ತಯಾರಿಸುತ್ತಿದ್ದಾರೆ ಅದನ್ನು ಜನರು ಕೊಳ್ಳುತ್ತಿದ್ದಾರೆ. (ಉದಾ: ರಾಜಕಾರಣಿ  ಗೆಟಪ್ಪಿನ ಗಣೇಶ,ಮಿಲಿಟರಿ ಬಂಕೂಕುಧಾರಿ ಗಣೇಶ,  ಕ್ರಿಕೆಟ್ ಬ್ಯಾಟ್ ಹಿಡಿದ  ಗಣೇಶ)  ಇದು ಬಹುಶಃ ಹಿಂದೂ ಧರ್ಮದಲ್ಲಿ ಅದೂ ಭಾರತದಲ್ಲಿ ಮಾತ್ರ ಕಾಣಬಹುದೇನೋ? ನಮ್ಮ ಧರ್ಮದ ದೇವರ ವ್ಯಂಗ್ಯಚಿತ್ರವನ್ನು ನೋಡಿ ಇತರರು ನಗುತ್ತಾರೆ.ಅದಕ್ಕೆ ನಾವೂ ನಗಬೇಕೆ? ಗಣಪ ಆ ಮಟ್ಟಿಗೆ ತಮಾಶೆಗೆ ಒಳಪಡುವ ದೇವರೇ? ನಾನು ಉತ್ತರಕ್ಕೆ ಕಾಯುತ್ತಿದ್ದೇನೆ.


ಈ ತರಹದ ನಮ್ಮಲ್ಲಿಯ ಭಾವನೆ ಇರುವದಲಿಂದಲೋ ಎನೋ ವಿದೇಶಗಳಲ್ಲಿ ಚಪ್ಪಲಿ,ಇನ್ನಿತರ ವಸ್ತುಗಳಮೇಲೆ ಹಿಂದೂ ದೇವರ ಚಿತ್ರಗಳ ಪ್ರಕಟನೆಯಾಗುತ್ತಿರುತ್ತದೆ.ಅದರ ಬಗ್ಗೆ  ಆ ದೇಶವಾಸಿ ಭಾರತೀಯರ ಹಮ್ಮಿಕೊಂಡ ಪ್ರತಿಭಟನೆ ಬಗ್ಗೆ ನೀವು ಹಿಂದೆ ಓದಿರಬಹುದು. ಈಗ ಪ್ಯಾಷನ್ ಗೆ ಹೊಸ ಸೇರ್ಪಡೆ. ಅಂತರ್ಜಾಲದಲ್ಲಿ  ಗಣಪನ ಟ್ಯಾಟೂಗಳನ್ನು ಹಾಕಿಸಿಕೊಂಡ ಹೈಕುಳುಗಳ ಚಿತ್ರ!.
ಮಾಧ್ಯಮ, ಹಾಗೂ ವ್ಯಾಪಾರಿ ರಂಗದಲ್ಲಿ ದೇವತೆಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವ ಬಗ್ಗೆ ವಿಷಾದವಿದೆ.ನನಗನಿಸಿದಂತೆ ನಮ್ಮ ವ್ಯವಸ್ಥೆಯೇ ಅದಕ್ಕೆ  ಹೊಂದಿಕೊಂಡಂತಿದೆ.

ಸೋಮವಾರ, ಆಗಸ್ಟ್ 2, 2010

ನೆಟ್ ಚಿತ್ರಗಳು.




 
















 





  
ಕಚ್ಚಿದರೆ ಹುಶಾರ್! 





  
ಜಗತ್ತೇ ನಿಮ್ಮ ಮುಂದೆ


ರೋಟಿ ಮಾಡುವದು, ಹೀಗೂ ಉಂಟೇ....?


ಆಪಲ್ ಐ ಪಾಡ್. ಹಾಡ್ ಕೇಳಿ


  ಅಭಿನವ ಕಾಳಿದಾಸ?



ಹೈಯಸ್ಟ್ ರಿಸ್ಕ್ ಪೋಟೋಗ್ರಫಿ.

ಸೋಮವಾರ, ಜೂನ್ 21, 2010

ಮೃಗಶಿರಾ ಮಳೆ ನಡುವೆ.

  ಮೊದಲಿನಿಂದಲೂ ಕೃಷಿ ಬದುಕಿನಲ್ಲಿ ಮಳೆ ನಕ್ಷತ್ರಗಳು ಹಾಸು ಹೊಕ್ಕಾಗಿವೆ.ಉತ್ತಲು,ಬಿತ್ತಲು ಪಂಚಾಂಗ ಆಧರಸಿ ಹಲವರು ಕೆಲಸ ಆರಂಭಿಸುತ್ತಾರೆ.ಈ ಪದ್ಧತಿ ಈಗಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ.  ಹಲವು ವರ್ಷಗಳ ಬಳಿಕ ಮಲೆನಾಡನ್ನು ಮೃಗಶಿರಾ ನಕ್ಷತ್ರದ ಮಳೆ ಚನ್ನಾಗಿಯೇ ತೋಯಿಸಿದೆ.ವಾರಗಟ್ಟಲೇ ಬಿಡುವಿಲ್ಲದಂತೆ ಬಂದಿದ್ದು ಎಲ್ಲರಿಗೂ ಖುಶಿಯೇ.ಬಿದ್ದ ಮಳೆ ಭೂಮಿಗೆ ತಾಕುತ್ತಲೇ  ಜೀವ ರಾಶಿಗಳು ಹೇಳಿಕೊಳ್ಳಲಾಗದಷ್ಟು ಸಂಭ್ರಮಿಸಿದೆ. ಗಿಡಗಳಿಗೆಲ್ಲಾ ಹೊಸ ಚಿಗುರು, ಕೀಟ ಪ್ರಪಂಚದ ಕಲರವ. ಹೀಗೆ ಮಳೆಯ ಬಿಡುವಿನ ನಡುವೆ ಕ್ಯಾಮರವನ್ನು ಹಿಡಿದು ಹೊರಟಾಗ ನನ್ನ ಕಲ್ಪನೆಗೆ ಭೂಮಿಯು  ಹೀಗೆ ಕಂಡುಬಂತು.

       "ಮೋಡಗಳ  ಓಟದ ಸಮಯದಿ ಮಬ್ಬೆಳಕು ಭುವಿಗೆಲ್ಲ
        ಜೊತೆಗೆ ಮೆಲ್ಲಗೆ ಹಬ್ಬುತಿಹ ಹಸಿರ ಹೊದಿಕೆಯ ಹಾಸು
         ಕಂಡುಬರುತಿಹುದು ಭುವಿಯು  ಹದಿಹರೆಯದ ಕೂಸು"









                                          ಮಾಡಂಚಿಂದ ಮಳೆಯ ಪಯಣ.

                             ಸಂಜೆ ಬೆಳಕ ಹೊತ್ತಲ್ಲಿ : ಪೂರಾ ಕಲರೂ ಅಲ್ಲದ ಕಪ್ಪು ಬಿಳುಪೂ ಅಲ್ಲದ ಚಿತ್ರ.
                                      ಹಸಿರ ಬಟ್ಟಲೊಳು ಮಳೆಹನಿಗೆ ತುಸು ಕಾಲ ವಿಶ್ರಾಂತಿ. 
                                   ಬಿದಿರ ಬದುಕಿಗೆ ಮೋಡದ ಮುಸುಕಿಂದ ಸೂರ್ಯನ  ಮೃದು ಸ್ಪರ್ಷ. 
                                                 ಹಸಿರ ವೇದಿಕೆ ಮೇಲೆ ಹನಿಯ ನರ್ತನ.
                                            ಮಳೆ ಬರುದ್ರೊಳ್ಗೆ ಕೆಲ್ಸಾ ಮುಗೀಲಿ.

ಭಾನುವಾರ, ಮೇ 16, 2010

ಯಕ್ಷಗಾನದ ಛಾಯಾಚಿತ್ರ

 (ಚೌಕಿಯಲ್ಲಿ ಗಣಪತಿ ಪೂಜೆಯ ವೇಳೆ)



 ಮೊದಲಿನಿಂದಲೂ ಯಕ್ಷಗಾನವೆಂದರೆ ಒಂತರಾ ಸೆಳೆತ.ದೂರದಲ್ಲಿ ಚಂಡೆ ಮದ್ದಳೆ ಸಪ್ಪಳ ಕೇಳಿದಾಗ ಪುಳಕ.ಹಾದಿ ಬದಿಯ ಗೋಡೆಗೆ ಅಂಟಿಸಿದ ಪೋಸ್ಟರುಗಳು ನನ್ನನ್ನು ಆಟಕ್ಕೆ ಸೆಳೆದು ಒಯ್ಯುತ್ತದೆ.


ಮೊನ್ನೆ ಆಗಿದ್ದೂ ಅದೇ. ಇರಲಿ , ಅಪರೂಪಕ್ಕೆ ಟೆಂಟ್ ಮೇಳದ ಆಟ ನೋಡುವ ಅವಕಾಶ ಸಿಕ್ಕಿತ್ತು. ಆ ಹೊತ್ತಿನಲ್ಲಿ ಕೆಲ ಚಿತ್ರ ತೆಗೆದಿದ್ದು ಈಗ ನಿಮ್ಮ ಮುಂದಿದೆ.































ಗುರುವಾರ, ಏಪ್ರಿಲ್ 1, 2010

ಅಳಿಯುವ ಮುನ್ನ

ಅಳಿಯುವ ಮುನ್ನ.


ನಿನ್ನೆ ಹಾಕಿದ ಕನಸ ರಂಗೋಲಿ
ಇಂದು ಹೆದರುತಿದೆ ತನ್ನ ಬದುಕ ಕಂಡು
ಲೆಕ್ಕವಿಟ್ಟು ಪ್ರೀತಿಯಿಂದ ಚುಕ್ಕೆ ಇತ್ತು
ಮನೆಯಂಗಳದಲ್ಲಿ ಮಿನುಗಿದ್ದ ನೀನು
ಆಡುವ ಕಂದಮ್ಮನ ಓಡುವ ಮಂದಿಯ 
ಅಡಿಯಲ್ಲಿಯೇ ಸಿಕ್ಕೆ  ಅದು ಹಣೆಬರಹ.
ಹೊಳೆವ ಬಣ್ಣದಿ ನೀನ್ ಕಣ್ಸೆಳೆದು
ಗುಡಿಸುವ ಪೊರಕೆಗಂಜುವೇಕೀಗ?
ತಿಳಿ ನೀನ್ ನಿನ್ನ ಬದುಕಿನ ಪರಿಯ
ಅಳಿಗೆ ಅಂಜದೇ ಮುಂದೆ  ಬಾಳು.