ಮಂಗಳವಾರ, ಡಿಸೆಂಬರ್ 29, 2009

**ನಿ-ವೇದನೆ**

ಇಲ್ಲಿ ಹುಡುಗನು ತನ್ನ ಪ್ರೇಮದ ಅಳಲನ್ನು ಪ್ರೇಯಸಿಯೊಂದಿಗೆ ತೋಡಿಕೊಳ್ಳಲು ಹನಿಸಾಲಿಗೆ ಮೊರೆಹೋಗಿದ್ದಾನೆ.
ಸಂದರ್ಭ: ದಿನಾಲೂ ದಾರಿಯ ಮೇಲೆ ಎದುರಾಗುವ ಹುಡುಗಿಯ ಕಂಡಾಗ ದಿನ ಎನೋ ಒಂಥರಾ ಅನಿಸಿಬಿಟ್ಟಿತು.ಇಲ್ಲ ಹುಡುಗನಿಗೆ ತಡೆಯಲಾಗುತ್ತಿಲ್ಲ. ಬಹಳ ದಿನಗಳಿಂದ ತನ್ನೊಳಗೆ ಅದುಮಿಟ್ಟುಕೊಂಡ ಭಾವನೆ ವ್ಯಕ್ತಪಡಿಸಲು ಆತ ಕಾಯುತ್ತಿದ್ದಾನೆ.ಇಂದು ದಿನ ಬಂದಿದೆ.ಎಂದಿನಂತೆ ದಾರಿಯಲ್ಲಿ ಮತ್ತೆ ಎದುರಾಗಿ ತನ್ನ ನೋಡಿ ಮುಗುಳ್ನಕ್ಕಾಗ ಸಾಲನ್ನು ಹುಡುಗಿಗೆ ಹೇಳಲು ಕಾದು ನಿಂತಿದ್ದಾನೆ.

**ನಿ-ವೇದನೆ**


...ನಿನ್ನ ಹೃದಯದ ಹರಿವಿನಲ್ಲಿ ನಾನು
ಪ್ರೇಮದ ಹಾಯಿದೋಣಿಯ ಸವಾರ
ತೆಲಿಸುವೆಯೋ ಮುಳುಗಿಸುವೆಯೋ
ಅದು ನಿನ್ನ ಮನದಲೆಗೆ ಬಿಟ್ಟ ವಿಚಾರ..