ನಿನ್ನೆ ಹಾಕಿದ ಕನಸ ರಂಗೋಲಿ
ಇಂದು ಹೆದರುತಿದೆ ತನ್ನ ಬದುಕ ಕಂಡು
ಲೆಕ್ಕವಿಟ್ಟು ಪ್ರೀತಿಯಿಂದ ಚುಕ್ಕೆ ಇತ್ತು
ಮನೆಯಂಗಳದಲ್ಲಿ ಮಿನುಗಿದ್ದ ನೀನು
ಆಡುವ ಕಂದಮ್ಮನ ಓಡುವ ಮಂದಿಯ
ಅಡಿಯಲ್ಲಿಯೇ ಸಿಕ್ಕೆ ಅದು ಹಣೆಬರಹ.
ಹೊಳೆವ ಬಣ್ಣದಿ ನೀನ್ ಕಣ್ಸೆಳೆದು
ಗುಡಿಸುವ ಪೊರಕೆಗಂಜುವೇಕೀಗ?
ತಿಳಿ ನೀನ್ ನಿನ್ನ ಬದುಕಿನ ಪರಿಯ
ಅಳಿಗೆ ಅಂಜದೇ ಮುಂದೆ ಬಾಳು.