ಮಂಗಳವಾರ, ಸೆಪ್ಟೆಂಬರ್ 1, 2009

ಮಳೆನಿಂತಮೇಲೆ...












ಮಳೆನಿಂತಮೇಲೆ....


ನೀರಾವಿ ಒಂದಾಗಿ, ಮೋಡವಾಗಿ ಕರಗಿ ಹನಿಯುವ ಮಳೆಗಾಲವೇ ಒಂದು ಅದ್ಭುತ! ಮಳೆಗಾಗಿ ಕಾದು,ಬಳಲಿ ಬೆಂಡಾದ ಪೃಕೃತಿ ಈಗ ಮಲೆನಾಡಿನಲ್ಲಿ ನೆನದಿದ್ದಾಳೆ. ಹಸಿರ ಹೊದಿಕೆ ಹಬ್ಬುತಿದೆ. ಬಳ್ಳಿ ಸಿಕ್ಕಸಿಕ್ಕ ಆಸರೆಯನ್ನು ಬಳಸಿ ಬಳುಕುತ್ತಿದ್ದಾಳೆ.ಎಂದೋ ಬಿದ್ದ ಕಾಡು ಬೀಜಗಳು ಮೊಳೆಯತೊಡಗಿವೆ. ಕೆರೆ ತೊರೆ ತುಂಬಿ ತೊನೆಯುತ್ತಿದೆ. ಈ ಸಮಯದಲ್ಲಿ ಎಲ್ಲಿ ನೊಡಿದರೂ ಹಸಿ ಹಸಿ ವಾತಾವರಣ. ಮಳೆನಿಂತರೂ ಮರದಎಲೆಗಳಲ್ಲಿ,ಹೂಗಿಡಗಳಲ್ಲಿ ಮೊದಲೇ ಬಿದ್ದ ಮಳೆಯಹನಿಗಳು ಚಿಟಪಟ ಸದ್ದುಮಡುತ್ತಾ, ಬೀಸುವ ಗಾಳಿಗೆ ಜಾರುತ್ತಿರುವ ಸೊಬಗು ವರ್ಣನಾತೀತ. ಮಳೆಹನಿಗಳಿಗೋ ಕೆಳಕ್ಕೆ ಬಿದ್ದು ತೊರೆಯಾಗಿ,ಹಳ್ಳವಾಗಿ,ಭೊರ್ಗೆರೆವನದಿಯಾಗಿ ಸಮುದ್ರರಾಜನ ಸೇರುವ ತವಕ!. ಹನಿಗಳಿಗೆ ಜಾರಲು ಸಹಕರಿಸಲು ಮಂದಗಮನೆಯಂತೆ ಬೀಸುವ ತಂಗಾಳಿಯ ಆಪ್ತತೆಯ ನೆರವಿದೆ. ಇಲ್ಲಿಸೊಬಗಿದೆ !ಈ ನಡುವೆ ದಿನ ನಿತ್ಯದ ಜಂಜಾಟವನ್ನು ಒಮ್ಮೆ ಬದಿಗೊತ್ತಿ,ಗಿಡಗಂಟಿಗಳ ನಡುವೆ ಹೊಕ್ಕಾಗ ಕಂಡು ಬಂದ ಚಿತ್ರ ಚಿತ್ತಾರವಿದು.




9 ಕಾಮೆಂಟ್‌ಗಳು:

ಮೂರ್ತಿ ಹೊಸಬಾಳೆ. ಹೇಳಿದರು...

ಒಳ್ಳೆಯ ಛಾಯಾಗ್ರಹಣದೊಂದಿಗೆ ಚಂದದ ಬರವಣಿಗೆ ಚಿತ್ರ ಲೇಖನದ ಮೆರಗನ್ನು ಹೆಚ್ಚಿಸುತ್ತಿದೆ.
ಮನಸಳೆವ ಮಧುಮಾಸ|ವಸುದೆಯತಣಿಸ ಬಂದಿದೆ||
ಎನ್ನುವ ಪದ್ಯ ನನಗೇ ಗೊತ್ತಿಲ್ಲದೇ ಗುನುಗುಟ್ಟುತ್ತಿದೆ.
ಹೀಗೇ ಬರೆಯಲ್ಪಟ್ಟ ಹಲವಾರು ಲೇಖನಗಳನ್ನ ಓದುವ ಭಾಗ್ಯ ನನ್ನದಾಗಲಿ.
all the very best !

Jagadeesh Balehadda ಹೇಳಿದರು...

ಧನ್ಯವಾದಗಳು.

Utham Kaniyoor ಹೇಳಿದರು...

wonderful photos..... no word to tell...

Unknown ಹೇಳಿದರು...

Beautiful pictures.

Priya Hegde

Ittigecement ಹೇಳಿದರು...

ಫೋಟೊಗಳು ಸೂಪರ್...

ಖುಷಿಯಾಗುತ್ತದೆ... ನೀರ ಹನಿಗಳು...
ನಿಮ್ಮ ಫೋಟೊಗಳು ಮಾತಾಡುತ್ತವೆ..

ಅಭಿನಂದನೆಗಳು...

Ittigecement ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಮೃತ್ಯುಂಜಯ ಹೊಸಮನೆ ಹೇಳಿದರು...

ಅದ್ಭುತ ಛಾಯಾಗ್ರಹಣ. ಛಾಯೆಯಲ್ಲ,ನಿಜವೇ.ಇಷ್ಟು ದಿನ ಹ್ಯಾಗೆ ನನ್ನ ಕಣ್ಣಿಂದ ಇದು ಮರೆಯಾಗಿತ್ತು?

ವಿನಾಯಕ ಹೆಬ್ಬಾರ ಹೇಳಿದರು...

ಅದ್ಭುತವಾಗಿದೆ photography....... ಖುಷಿಯಾಯಿತು....

ವಿನಾಯಕ ಹೆಬ್ಬಾರ ಹೇಳಿದರು...

ಅದ್ಭುತವಾಗಿದೆ photography....... ಖುಷಿಯಾಯಿತು....